ಅಂಧತ್ವ ಮುಕ್ತ ರಾಷ್ಟ್ರಕ್ಕೆ ಕೈ ಜೋಡಿಸಲು ಕರೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಆಗಸ್ಟ್ 29 : 'ಅಂಧತ್ವ ನಿವಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ವಾಕಾಂಕ್ಷಿ ಯೋಜನೆ ಹಮ್ಮಿಕೊಂಡಿದ್ದು, ಎಲ್ಲರೂ ನೇತ್ರದಾನ ಮಾಡುವ ಮೂಲಕ ದೇಶದಲ್ಲಿ ಅಂಧತ್ವ ನಿವಾರಣೆಗೆ ಮುಂದಾಗಬೇಕು' ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಕರೆ ನೀಡಿದರು.

ಮಂಗಳೂರಿನ ನಯನ ನೇತ್ರಾಲಯದಲ್ಲಿ ಭಾನುವಾರ ಆಯೋಜಿಸಿದ್ದ 'ಕಾರ್ನಿಯಾ ಅಂಧತ್ವ ಮುಕ್ತ ಭಾರತ' ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಪ್ರತಿಯೊಬ್ಬ ನಾಗರಿಕರು ಮರಣದ ನಂತರ ನೇತ್ರದಾನ ಮಾಡಬೇಕು. ನೇತ್ರದಾನದ ಅರ್ಥವನ್ನು ತಿಳಿದುಕೊಂಡು ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ನೇತ್ರದಾನಕ್ಕೆ ಮುಂದಾಗಬೇಕು' ಎಂದು ಹೇಳಿದರು.[2020ರ ಹೊತ್ತಿಗೆ ಭಾರತ ಕಾರ್ನಿಯ ಅಂಧತ್ವ ಮುಕ್ತ]

Nalin Kumar Kateel calls for popularization of eye donation

'ಮನುಷ್ಯನಿಗೆ ಕಣ್ಣುಗಳು ಅವಶ್ಯಕ ಅಂಗ. ಅಂಧತ್ವದಿಂದ ಬಳಲುತ್ತಿರುವವರಿಗೆ ದೃಷ್ಟಿ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಈ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಭಾರತವನ್ನು ಅಂಧತ್ವ ಮುಕ್ತ ರಾಷ್ಟ್ರವಾಗಿ ನಿರ್ಮಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು' ಎಂದು ಮನವಿ ಮಾಡಿದರು.[ಶಂಕರ ನೇತ್ರಾಲಯದೊಂದಿಗೆ ಇನ್ಫೋಸಿಸ್ ತರಬೇತಿ ಘಟಕ]

ಡಾ. ಅನನ್ಯ ಕುಲಾಲ್ ಮಾತನಾಡಿ, 'ನೇತ್ರದಾನದ ಕುರಿತು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಗಣೇಶೋತ್ಸವ, ದಸರಾ, ದೀಪಾವಳಿಯಂತಹ ಕಾರ್ಯಕ್ರಮಗಳಲ್ಲಿ ನೇತ್ರದಾನದ ಅರಿವು ಮೂಡಿಸುವ ಕೆಲಸವನ್ನು ಹಮ್ಮಿಕೊಳ್ಳಲಾಗುವುದು' ಎಂದರು.[ಗ್ರಾಮಾಂತರ ಮಕ್ಕಳ ಕಣ್ಣಿಗೆ ಬೆಳಕಾಗುವ 'ಉಷಾಕಿರಣ']

ಡಾ.ವಿಷ್ಣು ಪ್ರಭು, ಡಾ. ಅಣ್ಣಯ್ಯ ಕುಲಾಲ್, ಡಾ.ಭರತ್ ಶೆಟ್ಟಿ, ಜೀತೆಂದ್ರ ಕೊಟ್ಟಾರಿ, ಮೋನಪ್ಪ ಭಂಡಾರಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ನೇತ್ರದಾನದ ವಾಗ್ದಾನ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dakshina Kannada MP Nalin Kumar Kateel (BJP) called for popularization of eye donation campaign. Nalin Kumar Kateel take part in programme was conducted as part of the foundation's campaign to free the country from corneal blindness.
Please Wait while comments are loading...