ಮಂಗಳೂರು ಜನರ ಸೆಳೆದ ಸೂರ್ಯನ ಸುಂದರ ದೃಶ್ಯಾವಳಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಆಗಸ್ಟ್ 04 : ನಭೋಮಂಡಲದ ವೈಚಿತ್ರ್ಯದ ಸುಂದರ ದೃಶ್ಯವೊಂದನ್ನು ಮಂಗಳೂರಿನ ಜನರು ನೋಡಿದ್ದಾರೆ. ಸೂರ್ಯನ ಸುತ್ತ ಆರ್ಷಕವಾಗಿ ಹೊಳೆಯುವ ಪ್ರಭಾವಳಿಯನ್ನು ಕಳೆದ ಎರಡು ದಿನಗಳಿಂದ ಕುತೂಹಲದಿಂದ ನೋಡಿದರು.

ವಾತಾವರಣದಲ್ಲಿನ ತೇವಾಂಶದ ಸಾಂದ್ರತೆಗೆ ಅನುಗುಣವಾಗಿ ಸೂರ್ಯನ ಸುತ್ತ ಇಂತಹ ಪ್ರಭಾವಳಿ ಕಾಣಿಸುತ್ತದೆ. ಇದನ್ನು ಹ್ಯಾಲೋರಿಂಗ್ ಎಂದು ಕರೆಯುತ್ತಾರೆ. ಎರಡು ದಿನ ಮಂಗಳೂರಿನಲ್ಲಿ ಮಧ್ಯಾಹ್ನದ ಅವಧಿಯಲ್ಲಿ ಇದು ಕಾಣಿಸಿಕೊಂಡಿದೆ.[ಬುಧ ಸಂಕ್ರಮಣ ಪ್ರಪಂಚ ಅಂತ್ಯದ ಸೂಚನೆಯೇ?]

Mysterious rainbow halo seen around the sun in Mangaluru

ಮಳೆಗಾಲ ಕೊನೆಗೊಳ್ಳುವ ಸಮಯದಲ್ಲಿ ಹ್ಯಾಲೋರಿಂಗ್ ಕಾಣಿಸಿಕೊಂಡರೆ ಮಳೆಗಾಲ ಬೇಗನೆ ಮುಗಿಯುವ ಸೂಚನೆ. ಮಳೆಗಾಲದ ಆರಂಭದಲ್ಲಿ ಕಾಣಿಸಿದರೆ ಜೋರಾಗಿ ಮಳೆ ಸುರಿಯುವ ಸೂಚನೆಯನ್ನು ನೀಡುತ್ತದೆ ಎಂಬ ನಂಬಿಕೆ ಇದೆ.[ಪ್ಲೂಟೋನ ಚಂದ್ರ ಚಾರೋನ್ ನಲ್ಲಿ ಸಾಗರ ಕಂಡ ನಾಸಾ]

ಹ್ಯಾಲೋರಿಂಗ್ ಗಾಳಿಯಲ್ಲಿರುವ ತೇವಾಂಶದಿಂದಾಗಿ ಉಂಟಾಗುತ್ತಿದ್ದು ಇದು ತೇವಾಂಶದ ಸಾಂದ್ರತೆಗೆ ಅನುಗುಣವಾಗಿ ಸಣ್ಣದಾಗಿ ಅಥವಾ ದೊಡ್ಡದಾಗಿ ಕಾಣಿಸುತ್ತದೆ. ಕಳೆದ ಎರಡು ದಿನಗಳಿಂದ ಮಂಗಳೂರಿನಲ್ಲಿ ಕನಿಷ್ಠ 23 ಡಿಗ್ರಿ ತಾಪಮಾನ ದಾಖಲಾಗಿದೆ.[ವಿಶ್ವದ ರಚನೆ ಕಾರಣ ಪತ್ತೆ ಹಚ್ಚಿದ ವಿಜ್ಞಾನಿಗಳು]

ಸಾಮಾನ್ಯವಾಗಿ ಹ್ಯಾಲೋರಿಂಗ್ ಸಣ್ಣದಾಗಿ ಇರುತ್ತದೆ. ಆದರೆ, ಸೂರ್ಯನ ಪ್ರಖರ ಬೆಳಕಿಗೆ ಅದನ್ನು ನೋಡಲು ಸಾಧ್ಯವಾಗುವುದಿಲ್ಲ , ಇದರಿಂದ ಸಾಮಾನ್ಯವಾಗಿ ಅದು ಯಾರ ಗಮನವನ್ನು ಸೆಳೆಯುವುದಿಲ್ಲ. ಇದು ಸೂರ್ಯನ ಸುತ್ತ ಬಹು ವಿಸ್ತಾರವಾಗಿ ಹರಡಿಕೊಂಡಾಗ ತಕ್ಷಣ ಆಕಾಶವನ್ನು ದಿಟ್ಟಿಸಿದರೆ ಸುಂದರ ದೃಶ್ಯಾವಳಿ ಎಲ್ಲರ ಕಣ್ಮನ ಸೆಳೆಯುತ್ತದೆ.

ಚಂದ್ರನ ಸುತ್ತಲೂ ಇಂತಹ ಹ್ಯಾಲೋರಿಂಗ್ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ರಾತ್ರಿ ಸಮಯದಲ್ಲಿ ಅದನ್ನು ಸುಲಭವಾಗಿ ನೋಡಬಹುದಾಗಿದೆ. ಆದರೆ, ಸೂರ್ಯನ ಸುತ್ತಲಿನ ಹ್ಯಾಲೋರಿಂಗ್ ಬರಿಗಣ್ಣಿನಿಂದ ನೋಡಲು ಸಾಧ್ಯವಾಗದ ಕಾರಣ ಇಂತಹ ಕೌತುಕ ನೋಡಲು ಸಿಗುವುದು ಅಪರೂಪ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
From past two days several people in Mangaluru reported seeing a rainbow halo ring around the sun.
Please Wait while comments are loading...