ಮಂಗಳೂರು : ಮಳೆಗಾಗಿ ಮುಸ್ಲಿಂ ಬಾಂಧವರಿಂದ ನಮಾಜ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮೇ 02 : ದೇಶಾದ್ಯಂತ ಭೀಕರ ಬರ ಎದುರಾಗಿದ್ದು ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಮಂಗಳೂರಿನಲ್ಲಿ ಮುಸ್ಲಿಂ ಬಾಂಧವರು ವರುಣ ದೇವನಿಗೆ ನಮಾಜ್ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.

ಸೌತ್ ಕರ್ನಾಟಕ ಸಲಾಫಿ ಮೂವ್‌ಮೆಂಟ್ ವತಿಯಿಂದ ನಗರದ ನೆಹರು ಮೈದಾನದಲ್ಲಿ ಭಾನುವಾರ ಸಾಮೂಹಿಕ ಪ್ರಾರ್ಥನೆ ಹಮ್ಮಿಕೊಳ್ಳಲಾಗಿತ್ತು. ಪುರುಷರು, ಮಹಿಳೆಯರು ಹಾಗೂ ಮಕ್ಕಳು ಕೂಡಾ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. [ನೀರಿನ ಅಭಾವ, ನೇತ್ರಾವತಿ ನದಿಗೆ ಕಾವಲು!]

muslims

ಸಾಮೂಹಿಕ ನಮಾಜ್ ನೇತೃತ್ವ ವಹಿಸಿದ್ದ ನಂದಾವರ ಸಲಾಫಿ ಮಸೀದಿಯ ಖತೀಬರಾದ ಅಹ್ಮದ್ ಅಲಿ ಖಾಸಿಮಿ ಅವರು ಮಾತನಾಡಿ, 'ಕರಾವಳಿಯಲ್ಲಿ ಧಾರಾಳ ನೀರು ಸಿಗುತ್ತಿತ್ತು. ಆದ್ದರಿಂದ ಹೆಚ್ಚಿನವರಿಗೆ ನೀರಿನ ಮಹತ್ವ ತಿಳಿದಿರಲಿಲ್ಲ. ಆದರೆ, ಈ ಬಾರಿ ನೀರಿಗೆ ಹಾಹಾಕಾರ ಉಂಟಾಗಿದೆ. ಹೀಗಾಗಿ ನಾವು ನೀರಿನ ಮಹತ್ವ ಅರಿತು ಬಳಸಬೇಕು' ಎಂದರು. [ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾಟಲಿ ತೀರ್ಥಕ್ಕೂ ನೀರಿಲ್ಲ]

ಮಂಗಳೂರಿನಲ್ಲಿ ನೀರಿ ಅಭಾವ : ರಾಜ್ಯದ ಬರ ಪರಿಸ್ಥಿತಿಯ ಬಿಸಿ ಮಂಗಳೂರಿಗೂ ತಟ್ಟಿದೆ. ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ನೀರಿನ ಅಭಾವ ಉಂಟಾದರೆ ಖಾಸಗಿ ಬಾವಿಗಳಿಂದ ನೀರು ಸಂಗ್ರಹಿಸಿ, ಟ್ಯಾಂಕರ್ ಮೂಲಕ ಸರಬರಾಜು ಮಾಡಲು ಪಾಲಿಕೆ ಚಿಂತನೆ ನಡೆಸಿದೆ. [ಮಂಗಳೂರಿನಲ್ಲಿ ಈಗಲೇ ನೀರಿಲ್ಲ, ಇಂಚಾಂಡ ಎಂಚ!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hundreds of Muslims gathered under the banner of South Karnataka Salafi Movement at Nehru Maidan Mangaluru on Sunday and offered prayers seeking rain.
Please Wait while comments are loading...