ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಸ್ಲಿಂ ಸಮುದಾಯಕ್ಕಿಲ್ಲ ಮೇಯರ್‌ ಸ್ಥಾನ, ಸಚಿವ ರೈ ವಿರುದ್ದ ಆಕ್ರೋಶ

|
Google Oneindia Kannada News

ಮಂಗಳೂರು, ಮಾರ್ಚ್ 9: ಗುರುವಾರ ಮಂಗಳೂರಿನ ನೂತನ ಮೇಯರ್ ಆಗಿ ಕಾಂಗ್ರಿಸ್ ನ ಭಾಸ್ಕರ್ ಮೊಯ್ಲಿ ಆಯ್ಕೆಯಾಗಿದ್ದಾರೆ. ಆದರೆ ಮೇಯರ್ ಸ್ಥಾನಕ್ಕೆ ಮುಸ್ಲಿಂ ಸಮುದಾದಾಯದವರನ್ನು ಆಯ್ಕೆ ಮಾಡದಿರುವುದಕ್ಕೆ ಕೈ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮೇಯರ್ ಸ್ಥಾನ ಕೈ ತಪ್ಪುತ್ತಿದ್ದಂತೆ ಕಾಂಗ್ರೆಸ್ ನ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಮಂಗಳೂರು ಮೇಯರ್ ಆಯ್ಕೆಯಾಗುತ್ತಿದ್ದಂತೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ್ ರೈ ವಿರುದ್ದ ಮುಸ್ಲಿಂ ಮುಖಂಡರು ಆಕ್ರೋಶ ಹೊರಹಾಕಿದ್ದು, ಸಚಿವ ರೈ ಮುಸ್ಲಿಂ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ವೀರಪ್ಪ ಮೊಯ್ಲಿ ಸಂಬಂಧಿ ಮಂಗಳೂರಿನ ನೂತನ ಮೇಯರ್ವೀರಪ್ಪ ಮೊಯ್ಲಿ ಸಂಬಂಧಿ ಮಂಗಳೂರಿನ ನೂತನ ಮೇಯರ್

ಈ ಬಾರಿ ಮೇಯರ್ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕು ಎಂದು ಕಾಂಗ್ರೆಸ್‌ ನ ಮುಸ್ಲಿಂ ಮುಖಂಡರು ಹಾಗು ಉದ್ಯಮಿಗಳ ನಿಯೋಗ ಮಾಡಿದ್ದ ಮನವಿಗೆ ಸಚಿವ ರಮಾನಾಥ್ ರೈ ಸ್ಪಂದಿಸಿಲ್ಲ. ವೀರಪ್ಪ ಮೊಯ್ಲಿ ಅವರ ಲಾಬಿಗೆ ಮಣಿದು ನ್ಯಾಯಯುತವಾಗಿ ಮುಸ್ಲಿಂ ಸಮುದಾಯಕ್ಕೆ ದೊರಕಬೇಕಾದ ಮೇಯರ್‌ ಸ್ಥಾನವನ್ನು ರೈ ತಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.

Muslim leader are unhappy with Ramanath Rai for not choosing Muslim mayor in Mangaluru

ಮಂಗಳೂರು ಮಹಾನಗರ ಪಾಲಿಗೆಯ ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ಈ ವರೆಗೆ ಬಿಲ್ಲವ, ಬಂಟರು, ಹಿಂದುಳಿದ ವರ್ಗ ಹಾಗು ಕ್ರೈಸ್ತರಿಗೆ ಮೇಯರ್ ಸ್ಥಾನ ದಕ್ಕಿದೆ. ಆದರೆ ಅಧಿಕಾರವಧಿಯ ಕೊನೆಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಮೇಯರ್ ಸ್ಥಾನ ನೀಡಬೇಕೆಂಬ ಕೂಗು ಇತ್ತೀಚೆಗೆ ಬಲ ಪಡೆದಿತ್ತು. ಆದರೆ ಮೇಯರ್ ಸ್ಥಾನ ಕೊನೆಯ ಕ್ಷಣದಲ್ಲಿ ಕೈ ತಪ್ಪಿರುವುದು ಮುಸ್ಲಿಂ ಮುಖಂಡರನ್ನು ಕೆರಳಿಸಿದೆ.

ಕಾಂಗ್ರೆಸ್‌ ಪಾಳಯದಲ್ಲಿ ಭುಗಿಲೆದ್ದಿರುವ ಈ ಅಸಮಾಧಾನ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಸಚಿವ ರಮಾನಾಥ ರೈ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಮಂಗಳೂರು ಮೇಯರ್ ಎಸ್ಸೆಸ್ಸೆಲ್ಸಿ ಫೇಲ್, ಸಾಮಾನ್ಯ ಸಭೆಯಲ್ಲಿ ಅದೇ ಚರ್ಚೆ!ಮಂಗಳೂರು ಮೇಯರ್ ಎಸ್ಸೆಸ್ಸೆಲ್ಸಿ ಫೇಲ್, ಸಾಮಾನ್ಯ ಸಭೆಯಲ್ಲಿ ಅದೇ ಚರ್ಚೆ!

ಮೇಯರ್ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಮುಸ್ಲಿಂ ಮುಖಂಡ ಗುಂಪೊಂದು ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಸಭೆ ಸೇರಿ ಸಚಿವ ರೈ ವಿರುದ್ದ ಅಕ್ರೋಶ ಹೊರಹಾಕಿದೆ. ಶುಕ್ರವಾರ ಇನ್ನೊಂದು ಸುತ್ತಿನ ಸಭೆ ನಡೆಸಿ ಪಕ್ಷದ ವಿವಿಧ ಜವಾಬ್ದಾರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಸ್ಲಿಂ ಮುಖಂಡರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

English summary
Muslim leader are unhappy for not choosing Muslim corporator for mayor post in Mangaluru City Corporation. Muslim leader are outraged against district incharge minister Ramanath Rai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X