1000ಕಿ.ಮೀ ಈಜಿ 2008ರ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಕೆ

By: ಐಸ್ಯಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಡಿಸೆಂಬರ್. 05 : ಆರು ಮಂದಿಯ ತಂಡವೊಂದು ಮುಂಬೈಯಿಂದ ಈಜಾಡಿಕೊಂಡು ಮಂಗಳೂರಿನತ್ತ ಬರಲಿದ್ದಾರೆ. ಈ ತಂಡ ನ. 26ರ 2008ರಲ್ಲಿ ಮುಂಬೈಯಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರದವರಿಗೆ ಗೌರವದ ಕಾಣಿಕೆ ಸಲ್ಲಿಸುವ ಸಲುವಾಗಿ ಇಂತಹ ದಾಖಲೆ ಸೃಷ್ಟಿಸುವಂತಹ ಸಾಹಸ ಕೈಗೊಂಡಿದೆ.

ಈ ನಿಟ್ಟಿನಲ್ಲಿ ಈ ಆರು ಮಂದಿ ಶೂರರು ಡಿಸೆಂಬರ್ 8ರಂದು ಈಜಾಡಿಕೊಂಡು ಮಂಗಳೂರಿನ ಬಂದರಿಗೆ ಬರಲಿದ್ದು ವಿಶ್ವದಾಖಲೆ ನಿರೀಕ್ಷಿಸಲಾಗುತ್ತಿದೆ. ಸಶಸ್ತ್ರ ಪಡೆಗಳ ಈಜು ತಂಡ ಮತ್ತು ಮುಂಬೈ ಪೊಲೀಸರ ತಂಡ ನವೆಂಬರ್ 26ರಂದು ಮುಂಬೈನ ಗೇಟ್‌ವೇಯಿಂದ ಅರೇಬಿಯನ್ ಸಮುದ್ರದ ನೀರಿನಲ್ಲಿ ತಮ್ಮ ಈಜು ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ಈ ಈಜುಗಾರರ ತಂಡ ಪಶ್ಚಿಮ ಕರಾವಳಿಯಿಂದ 1000ಕಿ .ಮೀ. ಈಜಾಡುವ ಗುರಿ ಹೊಂದಿದೆ, ಮಾತ್ರವಲ್ಲದೆ ಅತೀ ದೂರದಲ್ಲಿ ಈಜುವ ಪ್ರಕ್ರಿಯೆಯಿಂದ ಗಿನ್ನಿಸ್ ಪುಸ್ತಕದಲ್ಲಿ ವಿಶ್ವದಾಖಲೆ ಬರೆಯುವಲ್ಲಿ ಕಾರ್ಯಪ್ರವೃತ್ತರಾಗಿದೆ.

6 members pay tribute to troops by swimming from Mumbai to Mangalore

ಪ್ರಸ್ತುತವಾಗಿ 2009ರಲ್ಲಿ ಉತ್ತರ ಐರ್ಲೆಂಡಿನಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಸುಮಾರು 200 ಈಜುಗಾರರು 684.75 ಕಿ. ಮೀ ಈಜಿದ್ಡಾರೆ. ಈ ಪೈಕಿ ಸಶಸ್ತ್ರ ಪಡೆ ತಂಡವನ್ನು ದಾಖಲೆ ಸೃಷ್ಟಿಸುವ ಗುರಿ ಹೊಂದಿದ್ದಾರೆ.

ಈ ಸಾಹಸ ಮೆರೆದ ಈಜುಗಾರರಲ್ಲಿ ವಿಂಗ್ ಕಮಾಂಡರ್ ಪರಂವಿರ್ ಸಿಂಗ್, ಏರ್ ವಾರಿಯರ್ (ಐಎಎಫ್) ವಿಕಿ ಟೋಕಾಸ್, ನಿವೃತ್ತ ಸಾರ್ಜೆಂಟ್ ಜಿ ನರಹರಿ, ಶ್ರೀಕಾಂತ್ ಪಲಂಡೆ, ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಮುಂಬೈ, ರಾಹುಲ್ ಚಿಪ್ಳೂಂಕರ್ ಮಹಾರಾಷ್ಟ್ರ ರಾಜ್ಯದ ಈಜು ತಂಡದ ಕೋಚ್ ಭಾಗಿಯಾಗಿದ್ದಾರೆ. ವಿಶೇಷವೆಂದರೆ 16 ವರ್ಷದ ವಿದ್ಯಾರ್ಥಿಯೋರ್ವ ಈ ಸಾಹಸ ಕ್ರಿಯೆಯಲ್ಲಿ ಭಾಗಿಯಾಗಿದ್ದಾನೆ.

6 members pay tribute to troops by swimming from Mumbai to Mangalore

ಈ ಕುರಿತು ಮಾಹಿತಿ ನೀಡಿದ ರಾಹುಲ್ ಚಿಪ್ಳೂಂಕರ್ , ''ಪ್ರಯಾಣ ಇಲ್ಲಿಯವರೆಗೆ ಸುಲಭವಲ್ಲ. ನಮಗೆ ಈಜುವಾಗ ಅನೇಕ ಭಾದೆ ಇದುರಾಗುತ್ತಿದೆ. ಇದಲ್ಲದೆ ದೊಡ್ಡ ಗಾತ್ರದ ಮೀನುಗಳಿಂದ ಬಹಳಷ್ಟು ಕಷ್ಟ ಎದುರುಸುತ್ತಿದ್ದೇವೆ. ಆದರೂ ನಾವು ಸ್ಥಿರವಾಗಿ ಮತ್ತು ಸರಾಗವಾಗಿ ನಮ್ಮ ಗುರಿ ಮುಟ್ಟುವಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ'' ಎಂದರು.

ತಂಡದ ಯೋಜನೆಯ ಪ್ರಕಾರ , ತಂಡದ ಒಬ್ಬ ಸದಸ್ಯ ಒಂದು ಗಂಟೆ ಈಜಾಡಿದರೆ ಇನ್ನೊಬ್ಬ ಸದಸ್ಯ ಮತ್ತೊಂದು ಗಂಟೆ ಈಜಾಡಬೇಕು. ಈ ರೀತಿಯಲ್ಲಿ ಸರದಿಯ ಪ್ರಕಾರ ಪ್ರತಿಯೊಬ್ಬ ತಂಡದ ಸದಸ್ಯ ಈಜಾಡಿ, ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ರೀತಿಯಲ್ಲಿ ತಮ್ಮ ಗಮ್ಯ ಸ್ಥಾನವನ್ನು ತಲುಪುವಲ್ಲಿ ನಿರತರಾಗಿದ್ದಾರೆ.

ಪ್ರಸ್ತುತವಾಗಿ ರತ್ನಗಿರಿಯಲ್ಲಿದ್ದು ಅಲ್ಲಿಂದ ಮಾಲ್ವನ್, ಗೋವಾದ ಡೋನಾ ಪೌಲಾಕ್ಕೆ ತಲುಪಿ ನಂತರ ಮಂಗಳೂರಿನ ಬಂದರಿಗೆ ಸೇರಲಿದ್ದಾರೆ,

ಮೂರು ದೋಣಿಗಳು ತಂಡದ ಜತೆಗೂಡಿ , ಈ ಪೈಕಿ ಒಂದು ಮಾರ್ಗದರ್ಶಿ ದೋಣಿ, ಮತ್ತೊಂದು ದೋಣಿ ಆಹಾರ ಒದಗಿಸುವ ಸಲುವಾಗಿ ಇದಲ್ಲದೆ ಒಂದು ಮುಖ್ಯ ದೋಣಿಯಲ್ಲಿ ಪ್ರಥಮ ಚಿಕಿತ್ಸೆಗಾಗಿ ಬೇಕಾದ ಎಲ್ಲ ಸಾಮಗ್ರಿ ಇವೆ.

ಇದಲ್ಲದೆ ವೀಕ್ಷಕರಾಗಿ ಮತ್ತು ಮಾರ್ಗದರ್ಶಕರಾಗಿ ಶೇಖರ್ ಕೇಲ್ ಮತ್ತು ಭಾರತದ ಈಜು ಒಕ್ಕೂಟದ ಸುಬೋಧ್ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರ ಈ ಸಾಹಸಮಯ ಸಾಧನೆಯಲ್ಲಿ ವಿಶ್ವದಾಖಲೆ ಬರೆದು ಜಯಶಾಲಿಗಳಾಗಲಿ ಎಂದು ಶುಭ ಹಾರೈಸೋಣ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A team of six persons on a mission to swim 1,000kms as a tribute to the martyrs of the Mumbai terror attacks and set a world record in the process, is expected to land at Mangaluru Port on December 8.
Please Wait while comments are loading...