ಶಂಕಿತ ಎಚ್1 ಎನ್1ಗೆ ಮುಲ್ಕಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಸಾವು!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ 11: ಎಚ್1 ಎನ್1ಗೆ ಬ್ಯಾಂಕ್ ಮ್ಯಾನೇಜರ್ ವೊಬ್ಬರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಯು ಮುಲ್ಕಿಯಲ್ಲಿ ನಡೆದಿದ್ದು, ಮೃತರು ಉಡುಪಿ ಜಿಲ್ಲೆಯ ಹೆಜಮಾಡಿ ನಿವಾಸಿ ಲಕ್ಷ್ಮೀನಾರಾಯಣ ಎಂದು ಗುರುತಿಸಲಾಗಿದೆ. ಅವರು ಕಳೆದ ಹದಿನೈದು ದಿನಗಳಿಂಸ ಜ್ವರದಿಂದ ನರಳುತ್ತಿದ್ದರು.

ಹೀಗೆ ಜ್ವರದಿಂದ ನರಳುತ್ತಿದ್ದ ಹೆಜಮಾಡಿಯ ಲಕ್ಷ್ಮೀನಾರಾಯಣ ಅವರು ಸ್ಥಳೀಯ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಜ್ವರ ಉಲ್ಬಣಿಸಿಸಿದಾಗ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ.[ಮಂಗಳೂರಿನಲ್ಲಿ ಭೂಗತ ಪಾತಕಿ ವಿಕ್ಕಿ ಶೆಟ್ಟಿ ‌ಸಹಚರನ ಬಂಧನ]

Mulky bank manager dies, due to suspected H1N1

ಅವರ ಸಾವಿಗೆ ಎಚ್ 1 ಎನ್ 1 ಕಾರಣ ಎಂದು ಶಂಕಿಸಲಾಗಿದೆ. ಆದರೆ ಅದಿನ್ನೂ ದೃಢಪಡಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ. ಒಂದು ವೇಳೆ ಲಕ್ಷ್ಮೀನಾರಾಯಣ ಅವರು ಎಚ್1ಎನ್1ನಿಂದಲೇ ಮೃತಪಟ್ಟಿದ್ದಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lakshmi narayan, Mulky bank manager dies, due to suspected H1N1. He was from Hejamadi, Udupi.
Please Wait while comments are loading...