ಮೂಡಬಿದ್ರೆ: ಬ್ಲೂಸ್ ಚಾಕಲೇಟಿನಲ್ಲಿ ಸಿಕ್ತು ಜೀವಂತ ಹುಳು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ನವೆಂಬರ್.30: ಸೂಕ್ಷ್ಮವಾಗಿ ಗಮನಿಸಿದಾಗ ಸೇಮ್ ಸ್ಕೈ ಅವರ ಬ್ಲೂಸ್ ಚಾಕಲೇನೊಳಗೆ ಜೀವಂತ ಹುಳು ಓಡಾಡುತ್ತಿದ್ದ ಘಟನೆಯೊಂದು ಗ್ರಾಹಕರ ಗಮನಕ್ಕೆ ಬಂದಿದ್ದು ಸಾರ್ವಜನಿಕ ಹಿತಾಸಕ್ತಿಯಿಂದ ಈ ಬಗ್ಗೆ ಪರಿಶೀಲಿಸುವಂತೆ ಮಾಧ್ಯಮದ ಮುಂದಿಟ್ಟಿರುವ ಪ್ರಕರಣ ಮಂಗಳವಾರ ಸಂಜೆ ನಡೆದಿದೆ. ಮೂಡಬಿದ್ರೆಯ ಕಲ್ಸಂಕ ರಸ್ತೆ ಬಳಿಯಿರುವ ಗೃಹೋಪಯೋಗಿ ವಸ್ತುಗಳ ಮಳಿಗೆಯೊಂದರಲ್ಲಿ ಖರೀದಿಸಿದ ಚಾಕಲೇಟ್ ನಲ್ಲಿ ಜೀವಂತ ಹುಳು ಇರುವುದು ಗಮನಕ್ಕೆ ಬಂದಿದೆ.

ಸೋಮವಾರ ಸಂಜೆ ಶಿಕ್ಷಕರೊಬ್ಬರು ಈ ಅಂಗಡಿಯಿಂದ ರು 5ರ ಬೆಲೆಯ ಸೇಮ್ ಸ್ಕೈ ಕಂಪೆನಿಯ ಎರಡು 'ಬ್ಲೂಸ್' ಚಾಕಲೇಟು ಖರೀದಿಸಿದ್ದರು. ಮಧ್ಯಾಹ್ನ ಶಾಲೆಯ ಬಿಡುವಿನ ಅವಧಿಯಲ್ಲಿ ವಿದ್ಯಾರ್ಥಿಗಳ ಸಮಕ್ಷಮ ಚಾಕಲೇಟಿನ ರ್ಯಾಪರನ್ನು ಬಿಡಿಸಿ ನೋಡಿದಾಗ ಒಂದು ಚಾಕಲೇಟಿನಲ್ಲಿ ಜೀವಂತ ಹುಳಗಳು ಪತ್ತೆಯಾಗಿದೆ.[ಕ್ರಿಮಿನಾಶಗಳ ವಿಷ ಶೇಷಾವತಾರ !]

mudabidre : Blues chocolate in worm is there

ಎರಡು ದಿನದ ಹಿಂದೆಯೂ ಇದೇ ಅಂಗಡಿಯಿಂದ ಈ ಶಾಲೆಯ ಸಿಬಂದಿಯೊಬ್ಬರು ಖರೀದಿಸಿದ್ದ 5 ಬ್ಲೂಸ್ ಚಾಕಲೇಟ್ ಗಳ ಪೈಕಿ 2 ಚಾಕಲೇಟುಗಳಲ್ಲಿ ಜೀವಂತ ಹುಳುಗಳು ಪತ್ತೆಯಾಗಿದ್ದವು. ಈ ಹಿನ್ನಲೆಯಲ್ಲಿ ಶಿಕ್ಷಕರು ಸದರಿ ಅಂಗಡಿಯವರಿಗೆ ಸಾಕ್ಷಿ ಸಮೇತ ವಿಷಯವನ್ನು ತಿಳಿಸಿದಾಗ ಚಾಕಲೇಟು ವಾಪಾಸು ಕೊಡಿ ಕಂಪೆನಿಗೆ ದೂರು ಕೊಡುವುದಾಗಿ ತಿಳಿಸಿದ್ದಾರೆ.

ಮಕ್ಕಳು ಹಾಗೂ ಕೆಲವೊಮ್ಮೆ ಹಿರಿಯರು ಕೂಡಾ ರ್ಯಾಪರ್ ಬಿಡಿಸಿ ಚಾಕಲೇಟನ್ನು ಬಾಯಿಗೆ ಹಾಕಿಕೊಳ್ಳುವುದೇ ಸಾಮಾನ್ಯವಾಗಿರುವಾಗ ಹೀಗೆ ಹುಳ ಓಡಾಡಿದರೆ ಚಾಕಲೇಟ್ ಪ್ರಿಯರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀಳುವುದಂತೂ ನಿಜ. ಆದ್ದರಿಂದ ಚಾಕಲೇಟು ಪ್ರಿಯರು ಚಾಕಲೇಟು ತಿನ್ನುವ ಮೊದಲು ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mudabidre near kalsanka road one Stationary shop Blues chocolate in worm is there. The teacher perches the chocolate to give his child but see the worm and said the complaint to his shop
Please Wait while comments are loading...