• search
For mangaluru Updates
Allow Notification  

  ಕೆಐಎಡಿಬಿ ವಂಚನೆ : ಸಚಿವ ಯು.ಟಿ.ಖಾದರ್‌ಗೆ ಮುತ್ತಿಗೆ

  By Gururaj
  |

  ಸುರತ್ಕಲ್, ಸೆಪ್ಟೆಂಬರ್ 04 : ಎಂಆರ್‌ಪಿಎಲ್ ಯೋಜನಾ ವಿಸ್ತರಣೆಯಲ್ಲಿ ಕೆಐಎಡಿಬಿ ಅಕ್ರಮ ನಡೆಸಿದೆ ಎಂದು ಸಚಿವ ಯು.ಟಿ.ಖಾದರ್‌ ಕಾರಿಗೆ ಮುತ್ತಿಗೆ ಹಾಕಲಾಗಿದೆ. ವ್ಯವಸಾಯ ಮಾಡುವಷ್ಟು ಭೂಮಿ ಫಲವತ್ತಾಗಿದ್ದರೂ ಅದನ್ನು ಒಣ ಭೂಮಿ ಎಂದು ಎಂಆರ್‌ಪಿಎಲ್ ಸಲ್ಲಿಸಿದ ಸುಳ್ಳು ಅರ್ಜಿಯನ್ನು ಒಪ್ಪಿಕೊಂಡು ರೈತರನ್ನು ವಂಚಿಸಲಾಗಿದೆ ಎಂಬುದು ಆರೋಪ.

  ಎಂಆರ್‌ಪಿಎಲ್ ಯೋಜನಾ ವಿಸ್ತರಣೆಗೆ ಸಂಬಂಧಿಸಿದಂತೆ ಕುತ್ತೆತ್ತೂರು, ಪೆರ್ಮುದೆ ಮತ್ತು ಇತರ ಗ್ರಾಮಗಳ ಕೃಷಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ಕೆಐಎಡಿಬಿ ಅಧಿಕಾರಿಗಳು ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

  ಕೈಗಾರಿಕೆಗಳು ಬೆಂಗಳೂರು, ಮೈಸೂರಿಗೆ ಸೀಮಿತವಾಗಬಾರದು

  ಕೆಐಎಡಿಬಿಯ ಈ ಅಕ್ರಮವನ್ನು ಪ್ರತಿಭಟಿಸಿ ವಿಶೇಷ ಭೂಸ್ವಾಧೀನಾಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ತರು ಆಗ್ರಹಿಸಿದ್ದಾರೆ. ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

  MRPL extension project, villagers demands for the probe

  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರು ಸ್ವಾಧೀನತೆಯ ಪ್ರಕ್ರಿಯೆಯಲ್ಲಿ ಮೇಲ್ನೋಟಕ್ಕೆ ಅಕ್ರಮ ಕಂಡು ಬಂದಿದ್ದು, ತನಿಖೆ ನಡೆಸುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದಾರೆ. ಅಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪೂರಕ ದಾಖಲೆಗಳನ್ನು ಸಲ್ಲಿಸಿದ್ದರು ಯಾವುದೇ ತನಿಖೆ ನಡೆಸಿಲ್ಲ ಎಂದು ಗ್ರಾಮಸ್ಥರು ದೂರಿದರು.

  ಎಂಆರ್‌ಪಿಎಲ್ ವಿಸ್ತರಣೆಗೆ 1012 ಎಕರೆ ಭೂ ಸ್ವಾಧೀನ

  ತನಿಖೆ ನಡೆಸಲು ಜಿಲ್ಲಾಡಳಿತವು ನಿರಾಸಕ್ತಿಯನ್ನು ತೋರಿಸುತ್ತಿದೆ. ಭ್ರಷ್ಟ ಕೆಐಎಡಿಬಿ ಅಧಿಕಾರಿಗಳ ಪರವಾಗಿ ನಿಲುವು ತಳಿದಂತೆ ಕಂಡು ಬರುತ್ತಿದೆ. ಈ ರೀತಿಯ ಕಾನೂನು ಬದ್ಧ ಹೋರಾಟಕ್ಕೆ ಮಾನ್ಯತೆ ಸಿಗದೇ ಇದ್ದರೆ ನಾವು ಯಾವ ರೀತಿ ಪ್ರತಿಭಟನೆಯನ್ನು ಮಾಡಬೇಕು? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

  ಮಂಗಳೂರು : ಎಂಆರ್‌ಪಿಎಲ್‌ ಮುಂದೆ ಶವವಾದ ಗ್ರಾಮಸ್ಥರು!

  ಪೆರ್ಮುದೆ, ಕುತ್ತೆತ್ತೂರು ಮತ್ತಿತರ ಗ್ರಾಮಗಳ ಭೂಮಿಯು ಮೂರು ಬೆಳೆ ಬೆಳೆಯುವಷ್ಟು ಫಲವತ್ತಾಗಿದ್ದರೂ ಅದನ್ನು ಒಣ ಭೂಮಿ ಎಂದು ಎಂಆರ್‌ಪಿಎಲ್ ಸಲ್ಲಿಸಿದ ಸುಳ್ಳು ಅರ್ಜಿಯನ್ನು ಒಪ್ಪಿಕೊಂಡು ರೈತರನ್ನು ವಂಚಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

  ಇದು ಕೃಷಿಯೋಗ್ಯ ಭೂಮಿ ಎಂಬುದಕ್ಕೆ ಇಲ್ಲಿ ನಡೆಯುತ್ತಿದ್ದ ಕೃಷಿಯೇ ಸಾಕ್ಷಿಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆಯಬೇಕೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ.

  ರೈತರಿಗೆ ವಂಚಿಸಿ ಅವರ ಕೊರಳಿಗೆ ಉರುಳು ಹಾಕಲು ಸಿದ್ದರಾದವರ ಪರವಾಗಿ ವರ್ತಿಸುವ ಜನಪ್ರತಿನಿಧಿಗಳು ರಾಜೀನಾಮೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

  ಇನ್ನಷ್ಟು ಮಂಗಳೂರು ಸುದ್ದಿಗಳುView All

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Various villagers protested against Housing minister U.T.Khader and demand for probe in MRPL extension project. Karnataka Industrial Areas Development Board (KIADB) illegally encroached land of farmers for Mangalore Refinery and Petrochemicals Limited (MRPL) extension project.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more