ಸಂಸದ ನಳಿನ್ ಕುಮಾರ್ ಕಟೀಲ್ ಆಶೀರ್ವದಿಸಿದ ಜನಾರ್ಧನ್ ಪೂಜಾರಿ

Posted By:
Subscribe to Oneindia Kannada
   ಸಂಸದ ನಳಿನ್ ಕುಮಾರ್ ಅವರನ್ನು ಆಶೀರ್ವದಿಸಿದ ಜನಾರ್ಧನ್ ಪೂಜಾರಿ | Oneindia Kannada

   ಮಂಗಳೂರು, ನವೆಂಬರ್ 19: ದಕ್ಷಿಣ ಕನ್ನಡ ಜಿಲ್ಲಾ ಬಿಲ್ಲವ ಸಂಘದಿಂದ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಕೊಡಿ ಮರ ಸಲ್ಲಿಸುವ ಕಾರ್ಯಕ್ರಮ ಇಂದು ನಡೆಯಿತು.

   ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಪೂಜಾರಿ ಅವರ ಬಳಿ ತೆರಳಿ ಅವರ ಆರೋಗ್ಯ ವಿಚಾರಿಸಿದರು.

   'ಇವತ್ತು ಡಿಕೆ ಶಿವಕುಮಾರ್, ನಾಳೆ ಪೂಜಾರಿ, ನಾಡಿದ್ದು ಸೋನಿಯಾ ಗಾಂಧಿ'

   ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ತಲೆ ಸವರಿದ ಜನಾರ್ಧನ್ ಪೂಜಾರಿ ಆಶೀರ್ವಾದ ಮಾಡಿದರು.

   ಪೂಜಾರಿ ಆರೋಗ್ಯ ವಿಚಾರಿಸದ ಸಿಎಂ

   ಪೂಜಾರಿ ಆರೋಗ್ಯ ವಿಚಾರಿಸದ ಸಿಎಂ

   ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಂಟ್ವಾಳಕ್ಕೆ ಆಗಮಿಸಿದ್ದರು. ಕಾಂಗ್ರೆಸ್‌ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿ ಅನಾರೋಗ್ಯದಿಂದ ಬಳಲುತ್ತಿರುವ ಮಾಹಿತಿ ಇದ್ದರೂ ಸಿ.ಎಂ, ಸಮೀಪದಲ್ಲೇ ಇದ್ದ ಪೂಜಾರಿ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿರಲಿಲ್ಲ.

   ನಳಿನ್ ಗೆ ಸ್ವಲ್ಪವೂ ಬುದ್ಧಿಯಿಲ್ಲ, ಸಂಸ್ಕಾರವಿಲ್ಲ: ಸಿದ್ದರಾಮಯ್ಯ

   ಸಿಎಂ ನಡೆಗೆ ಆಕ್ರೋಶ

   ಸಿಎಂ ನಡೆಗೆ ಆಕ್ರೋಶ

   ಈ ಕುರಿತು ಕಾಂಗ್ರೆಸ್ ಪಕ್ಷದಿಂದಲೇ ಭಾರೀ ಅಸಮಾಧಾನ ಕೇಳಿ ಬಂದಿತ್ತು. ಮಂಗಳೂರು ತನಕ ಬಂದೂ ಹಿರಿಯ ಕಾಂಗ್ರೆಸ್ ರಾಜಕಾರಣಿಯೊಬ್ಬರ ಆರೋಗ್ಯ ವಿಚಾರಿಸಲೂ ಹಿಂದೇಟು ಹಾಕಿದ್ದ ಸಿದ್ದರಾಮಯ್ಯನವರ ಮೇಲೆ ಕಾಂಗ್ರೆಸಿಗರು ಮುನಿಸಿಕೊಂಡಿದ್ದರು.

   ಸಂತಸಗೊಂಡ ಪೂಜಾರಿ

   ಸಂತಸಗೊಂಡ ಪೂಜಾರಿ

   ಆದರೆ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಪೂಜಾರಿ ಆರೋಗ್ಯ ವಿಚಾರಿಸಿದ್ದು, ಅದಕ್ಕೆ ಸಂತಸಗೊಂಡ ಪೂಜಾರಿ ನಳಿನ್ ತಲೆ ಸವರಿ ಆಶೀರ್ವಾದಿಸಿದರು.

   ಫೋಟೋ ವೈರಲ್

   ಫೋಟೋ ವೈರಲ್

   ಪೂಜಾರಿ ಹಾಗೂ ನಳಿನ್ ಕುಮಾರ್ ಕಟೀಲ್ ನಡುವಿನ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಚರ್ಚೆ ಹುಟ್ಟು ಹಾಕಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   MP Nalin Kumar Kateel takes blessings of Janardhan Poojary in Rajarajeshwari Temple, Polali, where a program was held from Dakshina Kannada District Billawa Sangha. A picture of this has gone viral over social media.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ