ಉಚ್ಚಿಲದಲ್ಲಿ ಕಡಲ್ಕೊರೆತದಿಂದಾಗಿ ನಳಿನ್ ಗೆ ತರಾಟೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ತೊಕ್ಕೋಟ್ಟು, ಜುಲೈ 03; ಉಚ್ಚಿಲ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ಸಂಸದರಲ್ಲಿ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಡಲ್ಕೊರೆತ ಪ್ರದೇಶವಾದ ಉಳ್ಳಾಲ, ಸೋಮೇಶ್ವರ ಹಾಗೂ ಉಚ್ಚಿಲದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಭೇಟಿ ನೀಡಿ ಅಲ್ಲಿಂದ ಉಚ್ಚಿಲದಲ್ಲಿ ಮನೆ ಕಡಲು ಪಾಲಾಗಿ ಸಂತ್ರಸ್ತರಾಗಿರುವ ಯಮುನಾ ಮತ್ತು ವಸಂತ್ ಅವರ ಮನೆಗೆ ಭೇಟಿ ನೀಡಿದರು.

'ಈಗ ನಡೆಯುತ್ತಿರುವ ತಾತ್ಕಾಲಿಕ ಕಲ್ಲುಹಾಕುವ ಕಾಮಗಾರಿಗೆ ವ್ಯಯಿಸುವ ಹಣದಲ್ಲಿ ಸ್ವಲ್ಪ ಹಣವನ್ನು ಸಂತ್ರಸ್ತರಿಗೆ ಕೊಟ್ಟರೆ ಎಲ್ಲಾದರೂ ಹೋಗಿ ಸ್ವಂತ ಸೂರು ಕಟ್ಟಿ ಕುಳಿತುಕೊಂಡು ಜೀವನ ಸಾಗಿಸುತ್ತೇವೆ. ತೆರಿಗೆ ಹಣವನ್ನು ಸರಕಾರ ಪೋಲು ಮಾಡುವುದು ಶೋಭೆ ತರಲಾರದು ಎಂದು ಉಚ್ಚಿಲ ಬೋವಿ ಸಮಾಜದವರು ಬೇಸರ ವ್ಯಕ್ತಪಡಿಸಿದ್ದಾರೆ. [ಉಳ್ಳಾಲದಲ್ಲಿ ಭಾರೀ ಕಡಲ್ಕೊರೆತ, ಜನರಿಗೆ ಆತಂಕ]

MP Nalin Kumar Kateel visits Uchchil Someshwara Sea erosion

ಮರಳುಗಾರಿಕೆ ನಿಷೇಧ ಕಾರಣ: ಕಡಲ್ಕೊರೆತ ಆರಂಭವಾಗಲು ನೇತ್ರಾವತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಳುಗಾರಿಕೆ ನಡೆಯುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ನಿರಂತರ ಮರಳುಗಾರಿಕೆ ನಿಲ್ಲಿಸಿ ಕಡಲ್ಕೊರೆತ ತಡೆಯಬೇಕೆ ಹೊರತು ಸಮುದ್ರ ಆರ್ಭಟಿಸಿದ ನಂತರ ಕಲ್ಲು ಹಾಕಿದರೆ ಯಾವುದೇ ಪ್ರಯೋಜನ ಇಲ್ಲ, ಕನಿಷ್ಟ ಎರಡು ವರ್ಷ ನೇತ್ರಾವತಿ ನದಿಯಲ್ಲಿ ನಡೆಯುವ ಮರಳುಗಾರಿಕೆ ನಿಷೇಧ ಹೇರಿದರೆ ತನ್ನಿಂತಾನಿಯೇ ಕಡಲ್ಕೊರೆತ ನಿಲ್ಲುತ್ತದೆ ಎಂದು ಹೇಳಿದರು.[ರಂಜಾನ್ ಖಾದ್ಯಗಳ ಮಳಿಗೆಗಳಲ್ಲಿ ಒಂದು ಸುತ್ತು!]

ಸಮುದ್ರದಲ್ಲಿ ಮೀನುಗಳು ಉತ್ಪತ್ತಿಯಾಗುತ್ತವೆಯೇ ಹೊರತು ಮರಳು ಉತ್ಪತ್ತಿಯಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳು ಸೇರಿ ನಡೆಯುವ ಮರಳುಗಾರಿಕೆಯನ್ನು ತಡೆದರೆ ಫಲಿತಾಂಶದತ್ತ ಸಾಗಬಹುದು ಎಂದು ಮೀನುಗಾರರು ಸಲಹೆ ನೀಡಿದರು.[ನೀವಿದ್ದಲ್ಲೆ ಬರಲಿದೆ ರುಚಿ ರುಚಿ ಮೀನು ಖಾದ್ಯ]

ಬಳಿಕ ಮಧ್ಯಗಳ ಜತೆಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ತಡೆಗೋಡೆ ಕಾಮಗಾರಿಗಾಗಿ 900 ಕೋಟಿ ರೂ ಪ್ರಸ್ತಾಪಿಸಲಾಗಿದ್ದು ಅದರಲ್ಲಿ 238 ಕೋಟಿ ರೂ. ಉಳ್ಳಾಲದಲ್ಲಿ ಬ್ರೇಕ್ ವಾಟರ್ ಕಾಮಗಾರಿಗಾಗಿ ಬಿಡುಗಡೆಯಾಗಿದೆ.

ಮುಂದಿನ ದಿನದಲ್ಲಿ ಉಚ್ಚಿಲಕ್ಕೂ ಬ್ರೇಕ್ ವಾಟರ್ ವಿಸ್ತರಿಸಲು ಕೇಂದ್ರಕ್ಕೆ ಸುಮಾರು 38 ಕೋಟಿ ರೂ. ಅನುದಾನಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ.

ಮೀನುಗಾರರ ಬೇಡಿಕೆಯಂತೆ ಸಂತ್ರಸ್ತರನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಿನ ವಾರವೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆದು ಚರ್ಚಿಸಲಾವುದು ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
“My house has already gone and I am not sure where to move out. The administration has been making similar promises every year,” questioned to MP Nalin Kumar Kateel by Vasanth, a resident of uchchil.
Please Wait while comments are loading...