ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೂಲಮೃತಿಕೆ ಸಂಭ್ರಮ, ಹರಿದು ಬಂದ ಜನಸಾಗರ

|
Google Oneindia Kannada News

ಮಂಗಳೂರು, ಡಿಸೆಂಬರ್ 03: ದಕ್ಷಿಣ ಭಾರತದ ಪ್ರಮುಖ ನಾಗಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಸೋಮವಾರ ಮೂಲಮೃತಿಕೆ ಸಂಭ್ರಮ. ಈ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಉರುಳು ಸೇವೆ ಮಾಡಿದ ಕ್ರೀಡಾಪಟು ಪೂವಮ್ಮಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಉರುಳು ಸೇವೆ ಮಾಡಿದ ಕ್ರೀಡಾಪಟು ಪೂವಮ್ಮ

ಕ್ಷೇತ್ರದಲ್ಲಿ ಮೂಲ ಮೃತಿಕೆ ತೆಗೆಯುವ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ತಿಕ ಏಕಾದಶಿಯಾದ ಇಂದು ಪವಿತ್ರ ಮಹಾಪ್ರಸಾದ ಮೂಲ ಮೃತಿಕೆಯನ್ನು ತೆಗೆಯಲಾಯಿತು. ಮೂಲಮೃತಿಕೆ ಎಂದರೆ ಕ್ಷೇತ್ರದಲ್ಲಿ ಪೂಜಿಸಲಾಗುವ ವಿಗ್ರಹದ ಬಳಿಯಿರುವ ಹುತ್ತದಿಂದ ಮಣ್ಣನ್ನು ತೆಗೆಯುವ ಪ್ರಕ್ರಿಯೆ.

 ಯಾವ ಸಮಸ್ಯೆ ನಿವಾರಣೆಗೆ ಯಾವ ತುಲಾ ಭಾರ ಸೇವೆ ಶ್ರೇಷ್ಠ? ಯಾವ ಸಮಸ್ಯೆ ನಿವಾರಣೆಗೆ ಯಾವ ತುಲಾ ಭಾರ ಸೇವೆ ಶ್ರೇಷ್ಠ?

Moola Mrithika celebration in Kukke Subramanya

ಶ್ರೀ ಕ್ಷೇತ್ರದಲ್ಲಿ ನಡೆಯುವ ಸರ್ಪ ಸಂಸ್ಕಾರ ಬಹಳ ಶ್ರೇಷ್ಟ ಮತ್ತು ಪ್ರಸಿದ್ಧ. ಸರ್ಪ ದೋಷ ಇರುವವರು ಇಲ್ಲಿಗೆ ಬಂದು, ಸರ್ಪ ಸಂಸ್ಕಾರ ಮತ್ತು ನಾಗ ಪ್ರತಿಷ್ಟೆ ನೆರವೇರಿಸಿ ದೋಷ ಮುಕ್ತರಾಗುತ್ತಾರೆ. ಹಾಗೆಯೇ ಇಲ್ಲಿಯ ಮೂಲ ಮೃತಿಕಾ ಪ್ರಾಸಾದಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ

 ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಸ್ವಾಮಿ ಒಣದ್ರಾಕ್ಷಿ-ಅಕ್ಕಿ ತುಲಾಭಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಸ್ವಾಮಿ ಒಣದ್ರಾಕ್ಷಿ-ಅಕ್ಕಿ ತುಲಾಭಾರ

Moola Mrithika celebration in Kukke Subramanya

ದೇಗುಲದ ಗರ್ಭಗುಡಿಯಿಂದ ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ಶುಭಮುಹೂರ್ತದಲ್ಲಿ ಮೂಲ ಪ್ರಸಾದವನ್ನು ತೆಗೆಯಲಾಯಿತು. ವರ್ಷದಲ್ಲಿ ಒಂದು ಬಾರಿ ಮಾತ್ರ ತೆಗೆಯುವ ಮಹಾಪ್ರಸಾದ ಇದಾಗಿದ್ದು, ಮಧ್ಯಾಹ್ನದ ನಂತರ ಭಕ್ತರಿಗೆ ಶ್ರೀ ದೇವರ ದರ್ಶನಕ್ಕೆ ಅವಕಾಶ ಒದಗಿಸಲಾಗಿದೆ.

English summary
Thousands of devotees visited Kukke Subramanya in the occasion of Moola Mrithika.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X