ಮಂಗ್ಳೂರು: ಬಸ್‌ ಚಾಲಕನ ಕಿಸೆಯಲ್ಲೇ ಮೊಬೈಲ್‌ ಸ್ಫೋಟ!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್. 14 : ಬಸ್ ಚಲಾಯುಸುತ್ತಿದ್ದ ಚಾಲಕನ ಶರ್ಟ್ ಕಿಸೆಯಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ನಡೆದಿದೆ.

ಮಡಂತ್ಯಾರ್ ನಿಂದ ಉಪ್ಪಿನಂಗಡಿಗೆ ಹೋಗುತ್ತಿದ್ದ ಶಿವಕೃಪ ಎಂಬ ಖಾಸಗಿ ಬಸ್‍ವೊಂದರಲ್ಲಿ ಈ ಅವಘಡ ಸಂಭವಿಸಿದೆ. ಮಂಗಳವಾರ ಬೆಳಗಿನ ಜಾವ ಪ್ರಯಾಣಿಕರಿಂದ ತುಂಬಿದ್ದ ಬಸ್ಸನ್ನು ಜಾಗರೂಕತೆಯಿಂದ ಚಲಾಯಿಸುತ್ತಿದ್ದ ಈ ಸಂದರ್ಭದಲ್ಲಿ ಚಾಲಕನ ಕಿಸೆಯಲ್ಲಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ.

Mobile phone blast in bus driver's shirt pocket in Mangaluru

ಇದರಿಂದ ಚಾಲಕ ಮಾತ್ರವಲ್ಲದೇ ಅವರ ಪಕ್ಕದಲ್ಲಿದ್ದ ಪ್ರಯಾಣಿಕರೂ ಒಮ್ಮೆ ಕಕ್ಕಾಬಿಕ್ಕಿಯಾಗಿದ್ದಾರೆ. ಇಂಟೆಕ್ಸ್ ಕಂಪೆನಿಗೆ ಸೇರಿದ ಈ ಮೊಬೈಲ್ ಸ್ಫೋಟಗೊಂಡಿದ್ದರಿಂದ ಒಂದು ಕ್ಷಣ ಆ ಬಸ್ಸಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

Mobile phone blast in bus driver's shirt pocket in Mangaluru

ಚಾಲಕನ ಜಾಗರೂಕತೆಯಿಂದ ಭಾರೀ ಅಪಾಯವೊಂದು ತಪ್ಪಿದರೂ, ಚಾಲಕ ಸಂದೇಶ್ ಬಂದಾರು ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಮಾತ್ರವಲ್ಲದೆ ಅವರ ಶರ್ಟ್ ಭಾಗಶಃ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mobile phone exploded in the pocket of bus driver shirt while he was driving. The incident happened at Uppinangady,Dakshina Kannada district on March 14.
Please Wait while comments are loading...