ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯುತ್ ಸಮಸ್ಯೆಗೆ ಉತ್ತರ ಕಂಡುಕೊಂಡ ಐವಾನ್ ಡಿಸೋಜಾ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಅಕ್ಟೋಬರ್ 22 : ವಿದ್ಯುತ್ ಕೊರತೆ ಎದುರಾಗಿರುವ ಇಂದಿನ ದಿನದಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ತಮ್ಮ ಮನೆಗೆ ಸೌರಶಕ್ತಿ ಮೇಲ್ಛಾವಣಿಯನ್ನು ಅಳವಡಿಸಿದ್ದಾರೆ. ಪ್ರತಿದಿನ 47 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವ ಶಕ್ತಿಯನ್ನು ಹೊಂದಿದೆ.

ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಶಾಸಕ ಮೊಯಿದೀನ್ ಬಾವಾ ಮುಂತಾದವರು ಬುಧವಾರ ಸೌರಶಕ್ತಿ ಮೇಲ್ಛಾವಣಿ ಘಟಕ ಅಳವಡಿಕೆಗೆ ಚಾಲನೆ ನೀಡಿದರು. ಸುಮಾರು 7.50 ಲಕ್ಷದಿಂದ 8 ಲಕ್ಷ ರೂಪಾಯಿ ತನಕ ವೆಚ್ಚ ಮಾಡಿ, ದಿನವೊಂದಕ್ಕೆ 47 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವ ಘಟಕ ನಿರ್ಮಾಣ ಮಾಡಲಾಗಿದೆ.[ಸೋಲಾರ್ ಪಾರ್ಕ್ ಬಗ್ಗೆ ರೈತರೊಂದಿಗೆ ಮಾತುಕತೆ]

mangaluru

'ಈ ಸೌರಶಕ್ತಿ ಘಟಕದಿಂದ ತಿಂಗಳಿಗೆ ತನ್ನ ಮನೆಯ ವಿದ್ಯುತ್ ಬಿಲ್ ಪಾವತಿ ಮಾಡಿ ಸುಮಾರು 7 ಸಾವಿರ ರೂ ಲಾಭ ಗಳಿಸಬಹುದು ಎನ್ನುತ್ತಾರೆ ಐವನ್ ಡಿಸೋಜಾ ಅವರು. ಸರ್ಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆ ಜನರಿಗೆ ಸಹಾಯಧನ ನೀಡಿದರೆ ಜನರು ಮನೆಗಳಲ್ಲಿ ಸೌರಶಕ್ತಿ ಘಟಕಗಳನ್ನು ಅಳವಡಿಸಿಕೊಳ್ಳಬಹುದು' ಎಂದು ಅವರು ಹೇಳಿದರು. [ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೌರಶಕ್ತಿ ಮೇಲ್ಛಾವಣಿ ಬಲ]

ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ಮಾತನಾಡಿ 'ಇತ್ತೀಚಿಗೆ ರಾಜ್ಯ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಬೇಡಿಕೆಯಷ್ಟು ವಿದ್ಯುತ್‌ ಅನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ವಿದ್ಯುತ್ ಸಮಸ್ಯೆ ಎದುರಾಗಿದೆ. ಜನರು ಮನೆಗಳಲ್ಲಿ ಸೋಲಾರ್ ಫಲಕ ಆಳವಡಿಸಿಕೊಳ್ಳುವುದರಿಂದ. ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗಬಹುದು' ಎಂದರು.

solar energy
English summary
Deputy commissioner A.B.Ibrahim on Wednesday inaugurated 10 kw solar power grid installed on the rooftop of the residence of MLC Ivan D'Souza in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X