ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡದ ಕೆಲವು ಗ್ರಾಮಗಳಲ್ಲಿ ಸಿಗಲಿದೆ ಉಚಿತ ವೈಫೈ ಸೇವೆ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್.18: ದೇಶದಲ್ಲಿ ಡಿಜಿಟಲ್ ಯುಗ ಆರಂಭವಾಗಿದೆ. ಎಲ್ಲವೂ ಇಂಟರ್ ನೆಟ್ ಆಧಾರಿತ ಸೇವೆಗಳಾಗಿ ಮಾರ್ಪಾಡಾಗುತ್ತಿವೆ. ವಿಮಾನ, ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಉಚಿತ ಸೇವೆ ನೀಡುತ್ತಿದ್ದು, ಈಗ ಗ್ರಾಮೀಣ ಭಾಗದಲ್ಲೂ ವೈಫೈ ಸೇವೆ ಆರಂಭವಾಗಿರುವುದು ನಿಮಗೆ ಗೊತ್ತಿರುವ ವಿಷಯ.

ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಗಳಲ್ಲಿ ಅದರಲ್ಲೂ ಪುಟ್ಟ ಬಸ್ ನಿಲ್ದಾಣಗಳಲ್ಲಿಯೂ ಉಚಿತ ವೈಫೈ ಸೇವೆ ಶೀಘ್ರವೇ ಆರಂಭವಾಗಲಿದೆ.

ಬೆಂಗಳೂರು ನಗರದಲ್ಲಿ 2 ಸಾವಿರ ವೈ-ಫೈ ಸ್ಟಾಟ್ ಸ್ಥಾಪನೆಬೆಂಗಳೂರು ನಗರದಲ್ಲಿ 2 ಸಾವಿರ ವೈ-ಫೈ ಸ್ಟಾಟ್ ಸ್ಥಾಪನೆ

ಮಂಗಳೂರು ಹೊರವಲಯದ ಮುಲ್ಕಿ- ಮೂಡಬಿದ್ರೆ ವ್ಯಾಪ್ತಿಯ ಗ್ರಾಮೀಣ ಭಾಗದ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸದ್ಯದಲ್ಲೇ ಬಸ್ ತಂಗುದಾಣಗಳಲ್ಲಿ ವೈಫೈ ಉಚಿತ ಸೇವೆ ಲಭ್ಯವಾಗಲಿದೆ.

MLA Umanath kotian plans to Set up free wifi service in Rural areas of Dakshina Kannada

ಮೂಲ್ಕಿ- ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ತಮ್ಮ ಶಾಸಕರ ಅನುದಾನದಲ್ಲಿ ಈ ಕೊಡುಗೆ ನೀಡಲು ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕನಸಿಗೆ ಕೊಡುಗೆ ನೀಡಲು ಮುಂದಾಗಿದ್ದಾರೆ.

ಬಿಬಿಎಂಪಿ ಶಾಲೆ, ಕಾಲೇಜುಗಳಿಗೆ ಉಚಿತ ವೈ-ಫೈ ಸೌಲಭ್ಯಬಿಬಿಎಂಪಿ ಶಾಲೆ, ಕಾಲೇಜುಗಳಿಗೆ ಉಚಿತ ವೈ-ಫೈ ಸೌಲಭ್ಯ

ಈ ವೈಫೈ ಸೌಲಭ್ಯ ಈಗಾಗಲೇ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿದೆ. ಆದರೆ ಈಗ ಗ್ರಾಮೀಣ ಭಾಗದ ಬಸ್ ನಿಲ್ದಾಣಗಳಲ್ಲಿ ಈ ಸೇವೆ ಕಲ್ಪಿಸುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಆನ್ ಲೈನ್ ಹಣಕಾಸು ವ್ಯವಹಾರಕ್ಕೆ ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

MLA Umanath kotian plans to Set up free wifi service in Rural areas of Dakshina Kannada

ಬಜ್ಪೆ ಪರಿಸರದ ವಿಶೇಷ ಆರ್ಥಿಕ ವಲಯದ ಕಾರ್ಮಿಕರು, ವಿಮಾನ ನಿಲ್ದಾಣದ ಕಾರ್ಮಿಕರು, ಅಧಿಕಾರಿಗಳಿಗೂ ಈ ಸೌಲಭ್ಯ ಹೆಚ್ಚು ಸಹಕಾರಿಯಾಗಲಿದೆ. ಅಷ್ಟೇ ಅಲ್ಲ, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ವಿಲೇವಾರಿ ಸಂಸ್ಥೆಗಳು, ವ್ಯಾಪಾರಿಗಳ ಹಣಕಾಸಿನ ವ್ಯವಹಾರಕ್ಕೆ ಉಪಯೋಗವಾಗಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಜ್ಪೆ ಬಸ್ ನಿಲ್ದಾಣ, ಮೂಲ್ಕಿಯ ಬಸ್ ನಿಲ್ದಾಣ ಸೇರಿದಂತೆ ಮೂಡುಬಿದ್ರೆ ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿ ಈ ವೈಫೈ ಸೇವೆ ಲಭ್ಯವಾಗಲಿದೆ.

ಶೀಘ್ರದಲ್ಲೇ 115 ರೈಲ್ವೇ ಸ್ಟೇಶನ್ ಗಳಲ್ಲಿ ಹೈ ಸ್ಪೀಡ್ ವೈಫೈ ಸೌಲಭ್ಯಶೀಘ್ರದಲ್ಲೇ 115 ರೈಲ್ವೇ ಸ್ಟೇಶನ್ ಗಳಲ್ಲಿ ಹೈ ಸ್ಪೀಡ್ ವೈಫೈ ಸೌಲಭ್ಯ

ಸುಮಾರು 10 ಲಕ್ಷ ರೂಪಾಯಿ ಶಾಸಕ ಅನುದಾನದಲ್ಲಿ ಈ ಸೌಲಭ್ಯ ಕಲ್ಪಿಸಲಾಗುವುದು. ಜಿಲ್ಲಾಧಿಕಾರಿಗೆ ಅನುದಾನ ಬಿಡುಗಡೆ ಮನವಿ ಮಾಡಲಾಗಿದ್ದು, ಜನಸಾಮಾನ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ. ಗ್ರಾಮೀಣ ಬದುಕು ಕೂಡ ಡಿಜಿಟಲ್ ಆಗಲಿದೆ ಎಂದು ಉಮಾನಾಥ್ ಕೋಟ್ಯಾನ್ ಹರ್ಷವ್ಯಕ್ತಪಡಿಸಿದ್ದಾರೆ.

English summary
Mulki – Moodabidri constituency MLA Umanath Kotian plans to set up free Wifi internet service to Rural areas like Bajpe, Mulki and Moodabidre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X