ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ಮೊಯ್ದೀನ್ ಭಾವಾ ದೇವಸ್ಥಾನ ಭೇಟಿ: ಮೂಲಭೂತವಾದಿಗಳ ವಿರೋಧ

|
Google Oneindia Kannada News

ಮಂಗಳೂರು, ಮಾರ್ಚ್ 31: ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಘೋಷಣೆ ಘೋಷಣೆ ಆಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾ ಹಿಂದೂ ಮತದಾರರನ್ನು ಸೆಳೆಯಲು ದೈವಸ್ಥಾನಗಳಗೆ ಭೇಟಿ ನೀಡಿ ಚುನಾವಣೆಯ ಗೆಲುವಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ . ಆದರೆ ಶಾಸಕ ಬಾವಾ ಅವರ ಈ ನಡೆಯ ವಿರುದ್ದ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಇತ್ತೀಚೆಗೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಸುರತ್ಕಲ್ ಹೊಸಬೆಟ್ಟು ಎಂಬಲ್ಲಿರುವ ಕೋರ್ದಬ್ಬು ದೈವಸ್ಥಾನಕ್ಕೆ ಮೊಯ್ದೀನ್ ಬಾವಾ ಭೇಟಿ ನೀಡಿದ್ದರು. ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ದೈವಸ್ಥಾನದವರ ಆಮಂತ್ರಣದ ಮೇರೆಗೆ ಶಾಸಕ ಬಾವ ಭೇಟಿ ನೀಡಿದ್ದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಈ ಪ್ರಸಂಗದ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದ್ದು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಮಂಗಳೂರು ದಕ್ಷಿಣ ಕ್ಷೇತ್ರ : ಕಾಂಗ್ರೆಸ್‌ v/s ಬಿಜೆಪಿ ನೇರ ಹಣಾಹಣಿ!ಮಂಗಳೂರು ದಕ್ಷಿಣ ಕ್ಷೇತ್ರ : ಕಾಂಗ್ರೆಸ್‌ v/s ಬಿಜೆಪಿ ನೇರ ಹಣಾಹಣಿ!

MLA Mohiuddin Bavas prayer in Daivasthana video gone viral

ಚುನಾವಣೆ ಸಂದರ್ಭದಲ್ಲಿ ಶಾಸಕ ಮೊಯ್ದೀನ್ ಬಾವ, ಹಿಂದುಗಳ ಮತ ಸೆಳೆಯಲು ದೈವಸ್ಥಾನಕ್ಕೆ ಭೇಟಿ ನೀಡಿದ್ದಾಗಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ. ಆದರೆ ವಿಡಿಯೋದಲ್ಲಿ ಮೊಯ್ದೀನ್ ಬಾವಾ ಎಂದಿನಂತೆ ದೇವಸ್ಥಾನಕ್ಕೆ ತೆರಳಿ ಹಿಂದಿರುಗಿದ್ದಾರೆ. ಓಲೈಕೆಯ ರಾಜಕಾರಣವೇ ಆಗಿದ್ದರೂ, ಈ ವಿಚಾರ ಮಾತ್ರ ಮೂಲಭೂತವಾದಿ ಮುಸ್ಲಿಮರು ಈ ವಿಡಿಯೋವನ್ನು ವೈರಲ್ ಮಾಡಿದ್ದಲ್ಲದೆ ಶಾಸಕರ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ.

MLA Mohiuddin Bavas prayer in Daivasthana video gone viral

ಹಿಂದೂ ಮತಗಳನ್ನು ಪಡೆಯಲು ಶಾಸಕ ಬಾವಾ ಈ ರೀತಿಯ ನಾಟಕವಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಲಾಗಿದೆ. ಆದರೆ ಶಾಸಕ ಬಾವಾ ಪ್ರತೀ ವರ್ಷದಂತೆ ಈ ಬಾರಿಯೂ ಭೇಟಿ‌ ನೀಡಿದ್ದೇನೆ.ಇದರಲ್ಲಿ ರಾಜಕೀಯ ಏನು ಎಂದು ಪ್ರಶ್ನಿಸಿದ್ದಾರೆ?

English summary
Mangaluru north constituency MLA Mohiuddin Bava's prayer in Daivasthan video gone viral in social media . there is huge outrage from Muslim leaders against Bava in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X