ಅಪಘಾತ : ಶಾಸಕ ಮೊಯಿದ್ದೀನ್ ಬಾವಾಗೆ ಗಾಯ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ 10 : ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಎ.ಮೊಯಿದ್ದೀನ್ ಬಾವಾ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಶಾಸಕರ ಎಡಗೈಗೆ ಗಾಯವಾಗಿದ್ದು, ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಣಂಬೂರು ಎಂಸಿಎಫ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮುಂಜಾನೆ ಈ ಅಪಘಾತ ಸಂಭವಿಸಿದೆ. ಶಾಸಕ ಮೊಯಿದ್ದೀನ್ ಬಾವಾ ಮತ್ತು ಅವರ ಕಾರು ಚಾಲಕ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅಪಘಾತದಿಂದಾಗಿ ಕಾರು ಜಖಂಗೊಂಡಿದೆ. [ಸೂರಿಲ್ಲದ ಮಂಗಳೂರಿನ ಕಿತ್ತಳೆ ವ್ಯಾಪಾರಿ 'ಹಾಜಬ್ಬ' ಅಕ್ಷರ ಸ್ನೇಹಿ]

mohiuddin bava

ಮುಂಜಾನೆ ರೈಲ್ವೆ ಗೇಟು ಹಾಕುವ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮೊಯಿದ್ದೀನ್ ಬಾವ ಅವರ ಕಾರು ಪಾದಚಾರಿಗೆ ಡಿಕ್ಕಿ ಹೊಡೆಯುತ್ತಿತ್ತು. ಇದನ್ನು ತಪ್ಪಿಸಲು ಹೋದಾಗ ಅಪಘಾತ ಸಂಭವಿಸಿದೆ. [ಖಾದರ್ ಸಾಹೇಬ್ರೆ, ನಿಮ್ಮೂರಿನ ರಸ್ತೆ ಆರೋಗ್ಯ ಸರಿಪಡಿಸಿ]

ಶಾಸಕರು ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳಬೇಕಾಗಿತ್ತು. ಅದಕ್ಕಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದರು. ಪಣಂಬೂರು ರೈಲ್ವೆ ಗೇಟ್ ದಾಟುತ್ತಿದ್ದ ವೇಳೆ ಅಡ್ಡ ಬಂದ ವ್ಯಕ್ತಿಗೆ ಕಾರು ಡಿಕ್ಕಿಯಾಗುವುದನ್ನು ಚಾಲಕ ತಪ್ಪಿಸುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಕಾರು ಚರಂಡಿಗೆ ಬಿದ್ದಿದೆ.

car

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru city north constituency Congress MLA B.A.Mohiuddin Bava sustained minor injuries when a speeding multi-utility vehicle met accident near Mangaluru city on Wednesday morning.
Please Wait while comments are loading...