ಲೇಡಿಗೋಷನ್ ಆಸ್ಪತ್ರೆಗೆ ಶಾಸಕ ಲೋಬೊ ದಿಢೀರ್ ಭೇಟಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್ 28 : ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜಾನ್ ರಿಚರ್ಡ್ ಲೋಬೊ ಬುಧವಾರ ನಗರದ ಲೇಡಿಗೋಷನ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದರು.

ಈ ವೇಳೆ ಅಮೃತ ಸೋಶಿಯಲ್ ಟ್ರಸ್ಟ್ ವತಿಯಿಂದ ರೋಗಿಗಳಿಗೆ ಹಣ್ಣು- ಹಂಪಲು ವಿತರಿಸಿ ಶೀಘ್ರ ಗುಣಮುಖರಾಗಲೆಂದು ಆಶಿಸಿದರು. ಆಸ್ಪತ್ರೆಯಲ್ಲಿದ್ದ ಎಲ್ಲಾ ರೋಗಿಗಳಿಗೆ ಕೊಡುತ್ತಿರುವ ಚಿಕಿತ್ಸೆ ಮತ್ತು ಔಷಧಿಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.

ಲೇಡಿಗೋಷನ್ ಆಸ್ಪತ್ರೆಗೆ ರಾಜ್ಯದಿಂದ ಮತ್ತು ನೆರೆಯ ಕೇರಳ ರಾಜ್ಯದಿಂದಲೂ ವಿಶೇಷವಾಗಿ ಮಹಿಳೆಯರು ಹೆರಿಗೆಗಾಗಿ ಬರುತ್ತಾರೆ. ಈ ವೇಳೆ ಹೆರಿಗೆಗೆ ಬರುವ ಮಹಿಳೆಯರಿಗೆ ಸ್ಥಳಾವಕಾಶದ ಕೊರತೆ ಉಂಟಾಗುತ್ತದೆ.

mla-j-r-lobo-visits-ladigoshan-hospital-mangaluru-and-distributed-fruits-to-patients

ಇದಕ್ಕಾಗಿ ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವ ಬಗ್ಗೆ ಶಾಸಕರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಅಲ್ಲದೇ ಆಸ್ಪತ್ರೆಯಲ್ಲಿ ಸುತ್ತಾಡಿ ಎಲ್ಲರೊಂದಿಗೂ ಚರ್ಚಿಸಿದರು.

ಶಿಸ್ತನ್ನು ಪಾಲಿಸಲು ಲೋಬೊ ಕರೆ: ಇದೇ ವೇಳೆ ಬುಧವಾರ ಬೆಂಗ್ರೆ ಕಸಬಾದಲ್ಲಿ ನಡೆದ ಭಾರತ ಸೇವಾ ದಳದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದ ಶಾಸಕ ಜೆ.ಆರ್. ಲೋಬೋ, ' ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಶಿಸ್ತನ್ನ ಪಾಲಿಸಬೇಕು. ಇದರೊಂದಿಗೆ ದೇಶದ ರಕ್ಷಣೆ ಮಾಡಬೇಕೆಂದು ' ಕರೆ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MLA of Mangaluru South constituency John Richard Lobo visit Mangaluru ladigoshan hospital and distributed fruits to patient on December 28.
Please Wait while comments are loading...