ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇರಳ, ಕೊಡಗು ಪ್ರವಾಹಕ್ಕೆ 5 ಲಕ್ಷ ದೇಣಿಗೆ ನೀಡಿದ ವೇದವ್ಯಾಸ ಕಾಮತ್

By Gururaj
|
Google Oneindia Kannada News

ಮಂಗಳೂರು, ಆಗಸ್ಟ್ 21 : ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರು ಪ್ರವಾಹ ಪೀಡಿತ ಕೇರಳಕ್ಕೆ 5 ಲಕ್ಷ ರೂ., ಕೊಡಗು ಜಿಲ್ಲೆಗೆ 5 ಲಕ್ಷ ರೂ. ದೇಣಿಗೆಯನ್ನು ವಯಕ್ತಿಯವಾಗಿ ನೀಡಿದ್ದಾರೆ.

ವೇದವ್ಯಾಸ ಕಾಮತ್ ಅವರು ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ರಾಜ್ಯಪಾಲ ಪಿ.ಬಿ.ಆಚಾರ್ಯ ಅವರಿಗೆ ಕೇರಳ ಮತ್ತು ಕೊಡಗಿನ ಪ್ರವಾಹಕ್ಕೆ ದೇಣಿಗೆ ನೀಡುವಂತೆ ಮನವು ಮಾಡಿದ್ದರು.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ? ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಶಾಸಕ ವೇದವ್ಯಾಸ ಕಾಮತ್ ಅವರ ವಿನಂತಿಯ ಮೇರೆಗೆ ರಾಜ್ಯಪಾಲರು ಕೇರಳದ ನೆರೆಪೀಡಿತ ಪ್ರದೇಶಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಲು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ.

MLA D Vedavyasa Kamath donates 5 lakh for Kerala and Kodagu

ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿರು ಹಾನಿಗೆ ಪರಿಹಾರವಾಗಿ ನಾಗಾಲ್ಯಾಂಡ್ ರಾಜ್ಯ ಸರಕಾರದ ವತಿಯಿಂದ 20 ಲಕ್ಷ ರೂಪಾಯಿಯನ್ನು ಶಾಸಕರ ಮನವಿಯಂತೆ ಬಿಡುಗಡೆ ಮಾಡಲಾಗಿದೆ.

ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ... ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...

ತಮ್ಮ ವಿನಂತಿಯನ್ನು ಪುರಸ್ಕರಿಸಿ ನೆರೆಪೀಡಿತ ಪ್ರದೇಶಕ್ಕೆ ಶೀಘ್ರದಲ್ಲಿ ಹಣ ಬಿಡುಗಡೆ ಮಾಡಲು ಸಹಕರಿಸಿದ ರಾಜ್ಯಪಾಲ ಪಿ.ಬಿ.ಆಚಾರ್ಯ ಅವರಿಗೆ ಶಾಸಕ ಡಿ.ವೇದವ್ಯಾಸ ಕಾಮತ್ ಕೃತಜ್ಞತೆ ಸಲ್ಲಿಸಿದ್ದಾರೆ.

ಸಂಕಷ್ಟದಲ್ಲಿ ಜನರಿಗಾಗಿ ಪಿ.ಬಿ.ಆಚಾರ್ಯ ಅವರ ಮನಸ್ಸು ಯಾವಾಗಲೂ ಮಿಡಿಯುತ್ತದೆ. ಕೇರಳ ಮತ್ತು ಕೊಡಗು ಜನರು ಆದಷ್ಟು ಬೇಗ ಸಹಜ ಜೀವನಕ್ಕೆ ಮರಳಲಿ ಎಂದು ಪಿ.ಬಿ.ಆಚಾರ್ಯ ಅವರು ಹಾರೈಸಿದ್ದಾರೆ ಎಂದು ಶಾಸಕರು ಹೇಳಿದ್ದಾರೆ.

ಬಿಜೆಪಿ ಸಂಸದರು, ಶಾಸಕರ ಒಂದು ತಿಂಗಳ ವೇತನ : 'ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಸಂತ್ರಸ್ಥರ ನಿಧಿಗೆ ಬಿಜೆಪಿಯ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರ ಒಂದು ತಿಂಗಳ ವೇತನ ನೀಡಲಾಗುತ್ತದೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

English summary
Mangaluru City South constituency BJP MLA D. Vedavyasa Kamath donated 5 lakh Rs for flood effect Kodagu and Kerala. According to request by D. Vedavyasa Kamath Nagaland governor P.B. Acharya has also donated funds for the flood relief work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X