ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀಫ್ ರಫ್ತು ಮಾಡೋ ಹೆಚ್ಚಿನ ಕಂಪನಿಗಳು ಬಿಜೆಪಿ ಸಂಸದರದ್ದು:ಮಿಥುನ್ ರೈ

|
Google Oneindia Kannada News

ಮಂಗಳೂರು, ಅಕ್ಟೋಬರ್. 15: ದೇಶ ಬೀಫ್ ರಫ್ತಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಇದು ಕೇಂದ್ರದ ಬಿಜೆಪಿ ಸರಕಾರ ಸಾಧನೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಟೀಕಿಸಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಫ್ ರಫ್ತು ಮಾಡುವ ಹೆಚ್ಚಿನ ಕಂಪನಿಗಳು ಬಿಜೆಪಿ ಸಂಸದರದ್ದು. ಆದರೆ ಮಂಗಳೂರಿನಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದವರು ಕಸಾಯಿಖಾನೆ ವಿರುದ್ಧ ಪ್ರತಿಭಟನೆ ಮಾಡುತ್ತಾರೆ.

ಕುದ್ರೋಳಿಯಲ್ಲಿ ಅತ್ಯಾಧುನಿಕ ಕಸಾಯಿಖಾನೆ ನಿರ್ಮಾಣ: ಇದು ಸಾಧ್ಯನಾ?ಕುದ್ರೋಳಿಯಲ್ಲಿ ಅತ್ಯಾಧುನಿಕ ಕಸಾಯಿಖಾನೆ ನಿರ್ಮಾಣ: ಇದು ಸಾಧ್ಯನಾ?

ಸಂಘ ಪರಿವಾರದ್ದು ಗೋ ಮಾತೆಯ ಮೇಲಿನ ನೈಜ ಕಾಳಜಿಯಾಗಿದ್ದರೆ ಕೇಂದ್ರ ಸರಕಾದ ವಿರುದ್ಧ ಪ್ರತಿಭಟಿಸಲಿ ಎಂದು ಸವಾಲು ಹಾಕಿದರು.

Mithun Rai says most of the beef export company belongs to BJP MPs

ಸಚಿವ ಯುಟಿ ಖಾದರ್ ಅವರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಸಾಯಿಖಾನೆಗಳ ಅಭಿವೃದ್ಧಿಯ ಸಲಹೆ ನೀಡಿದ್ದು ಮಾತ್ರ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಖಾದರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

 ಕಸಾಯಿಖಾನೆಗೆ 15 ಕೋಟಿ ರೂ.ನೀಡಿದ ಖಾದರ್: ಸ್ಪಷ್ಟನೆ ಕೇಳಿದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕಸಾಯಿಖಾನೆಗೆ 15 ಕೋಟಿ ರೂ.ನೀಡಿದ ಖಾದರ್: ಸ್ಪಷ್ಟನೆ ಕೇಳಿದ ಕಾರ್ಕಳ ಶಾಸಕ ಸುನಿಲ್ ಕುಮಾರ್

ಇದು ಸಂಘಪರಿವಾರದ ಮುಖಂಡರಿಗೆ ಶೋಭೆ ತರುವಂತದ್ದಲ್ಲ ಎಂದು ಕಿಡಿಕಾರಿದರು.

ಸ್ಮಾರ್ಟ್ ಸಿಟಿ ಯೋಜನೆಯಲ್ಲೇ ಕಸಾಯಿಖಾನೆಗಳ ಅಭಿವೃದ್ಧಿ ಪ್ರಸ್ತಾಪಿಸಲಾಗಿದೆ. ಬಿಜೆಪಿ ಸಂಸದರು, ಶಾಸಕರು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಸಾಯಿಖಾನೆ ಅಭಿವೃದ್ಧಿಯ ಪ್ರಸ್ತಾವನೆಯನ್ನು ಸೇರಿಸುವಾಗ ಪ್ರತಿಭಟನೆ ಮಾಡಬಹುದಿತ್ತು.

 '15 ಕೋಟಿ ರೂ.ವೆಚ್ಚದಲ್ಲಿ ಕಸಾಯಿಖಾನೆ ರಚಿಸಲು ಮುಂದಾಗಿರುವುದು ದುರಂತ' '15 ಕೋಟಿ ರೂ.ವೆಚ್ಚದಲ್ಲಿ ಕಸಾಯಿಖಾನೆ ರಚಿಸಲು ಮುಂದಾಗಿರುವುದು ದುರಂತ'

Mithun Rai says most of the beef export company belongs to BJP MPs

ಈಗಲೂ ಕೇಂದ್ರದಲ್ಲಿ ನಗರಾಭಿವೃದ್ಧಿ ಸಚಿವರ ಮೂಲಕ ಅದನ್ನು ಬದಲಾಯಿಸಲು ಸಾಧ್ಯವಿದೆ. ಅದನ್ನು ಬಿಟ್ಟು, ಕೇವಲ ರಾಜಕೀಯ ಉದ್ದೇಶದಿಂದ, ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಮಿಥುನ್ ರೈ ತಾಕೀತು ಮಾಡಿದರು.

English summary
Speaking to media persons in Mangluru, Youth Congress district president Mithun Rai slams BJP and Sangha Parivar leaders on slaughter house issue. He said India is one of the topmost beef exporters. Most of the beef export company belongs to BJP MP's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X