ಬಿಡಿಭಾಗಗಳನ್ನು ಉದುರಿಸುತ್ತಾ ಓಡುವ ಪೊಲೀಸ್ ಜೀಪು!

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಜನವರಿ 12: ಆಧುನಿಕ ಕಾಲಘಟ್ಟದಲ್ಲಿ ಜನಜೀವನವು ತಂತ್ರಜ್ಞಾನ ಆಧಾರಿತವಾಗಿ ಬದಲಾಗುತ್ತಿದ್ದಂತೆ ಪೊಲೀಸ್ ಇಲಾಖೆಯೂ ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ನೂತನ ತಂತ್ರಜ್ಞಾನ, ಪರಿಕರಗಳನ್ನು ತನ್ನಲ್ಲಿ ಸೇರ್ಪಡೆಗೊಳಿಸಿಕೊಳ್ಳುತ್ತಿದೆ. ಆದರೆ, ಈ ಆಧುನಿಕತೆ ಕೇವಲ ನಗರ ಪೊಲೀಸರಿಗೆ ಲಭ್ಯವಾಗುವುದರ ಜತೆಗೆ ತಾಲೂಕುಗಳ ಹೊರವಲಯದಲ್ಲಿರುವ ಪೊಲೀಸ್ ಠಾಣೆಗಳಿಗೂ ಅವಶ್ಯಕತೆಯಿದೆ.

ಕಾವೂರು ವಲಯದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಯ ಜೀಪ್ ನೋಡಿದರೆ, ಖಂಡಿತವಾಗಿಯೂ ಹೀಗನ್ನಿಸದಿರದು. ಪೊಲೀಸರಿಗೆ ರಿವಾಲ್ವರ್, ಬಂದೂಕು, ಲಾಠಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅವರು ಬಳಸುವ ಸರ್ಕಾರಿ ವಾಹನಗಳು.[ಮಂಗಳೂರಿಗೆ ಬಂದ 25 ಪೋಲಿಸ್ ಗಸ್ತು ವಾಹನಗಳ ವಿಶೇಷತೆಗಳೇನು?]

Miserable story of Kavoor police station jeep in Mangaluru

ಏಕೆಂದರೆ, ಅಪರಾಧ ಅಥವಾ ಗಲಭೆ ನಡೆಯುವ ಸಂದರ್ಭದಲ್ಲಿ ನಿಗದಿತ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಹೋಗಬೇಕಲ್ಲವೇ? ಇಲ್ಲವಾದರೆ, ಹಳೇ ಸಿನಿಮಾಗಳಲ್ಲಿ ಬಂದಂತೆ ಎಲ್ಲಾ ಮುಗಿದ ಮೇಲೆ ಬರಬೇಕಾಗುತ್ತದೆ. ಹಾಗಾಗಿ, ಪೊಲೀಸರಿಗೆ ಒದಗಿಸಲಾಗಿರುವ ವಾಹನಗಳು ಸುಸ್ಥಿತಿಯಲ್ಲಿರಬೇಕಾದ್ದು ಅತ್ಯವಶ್ಯ.

ಆದರೆ, ಕಾವೂರು ವಲಯದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಯ ಜೀಪ್ ಸುಸ್ಥಿತಿಯಲ್ಲಿರುವುದು ಬಿಡಿ, ರಿಪೇರಿ ಮಾಡಿಸಲೂ ಆಗದ ಪರಿಸ್ಥಿತಿಗೆ ಬಂದು ಮುಟ್ಟಿದೆ. ಮುಟ್ಟದರೆ ಮುನಿ ಎಂಬಂತೆ ಈ ಜೀಪಿನ ಬಿಡಿಭಾಗಗಳು ಆಗಾಗ, ಎಲ್ಲಿಬೇಕೆಂದರಲ್ಲಿ ಕಳಚಿ ಬೀಳುತ್ತವೆ. ಇದು ಪೊಲೀಸರಿಗೆ ತೊಡಕಾಗಿ ಪರಿಣಮಿಸಿದೆ.

Miserable story of Kavoor police station jeep in Mangaluru

ಪೊಲೀಸ್ ಜೀಪ್ ಗೆ ೧೫ ವರ್ಷ. ಹಲವಾರು ತಾಂತ್ರಿಕ ಅಡಚಣೆಗಳನ್ನು ಹೊಂದಿರುವ ಇದು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಠಾಣೆಯಲ್ಲಿ ವಾಹನ ಇದ್ದರು ಅದು ಅವಸರದ ಕೆಲಸಕ್ಕೆ ನಿರುಪಯುಕ್ತ ಎನ್ನುವಂತಾಗಿದೆ.

ಇನ್ನು, ಜೀಪು ಚಲಾಯಿಸುವವರ ಪಾಡು ಹೇಳತೀರದು . ಒಮ್ಮೆ ಗಾಡಿ ಚಾಲು ಮಾಡಿದರೆ ಅದನ್ನುಸಮರ್ಪಕವಾಗಿ ಚಲಾಯಿಸಲು ಸಾಧ್ಯವಾಗುವುದಿಲ್ಲ. ಜೀಪಿನ ಬಿಡಿ ಭಾಗಗಳು ಒಂದರ ಹಿಂದೆ ಒಂದು ಕಳಚಿ ಬೀಳುತ್ತಾ ಸಾಗುತ್ತದೆ.

ಹೀಗೆ ಮುಂದುವರೆದರೆ ಒಂದಲ್ಲಾ ಒಂದು ದಿನ ಜನರ ಸಂಕಷ್ಟಕ್ಕೆ ನೆರವಾಗುವ ಪೊಲೀಸರೇ ಸಂಕಷ್ಟಕ್ಕೆ ಸಿಲುಕುವ ಭೀತಿಯಿದೆ.

ಮಂಗಳೂರಿಗೆ ಹೈಟೆಕ್ ಹೊಯ್ಸಳ ಕಾರುಗಳು ಬಂದಿರುವ ಈ ಸಂದರ್ಭದಲ್ಲೇ ಗೃಹ ಸಚಿವ ಪರಮೇಶ್ವರ್ ಅವರು, ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಗೂ ಒಂದು ಹೊಸ ಜೀಪ್ ಕೊಟ್ಟರೆ ಉತ್ತಮ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kavoor police Jeep is now 15 years old and is completely outdated. cops are not able to reach crime spot quickly due to poor condition of Police Jeep.
Please Wait while comments are loading...