ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಕ್ಷಗಾನ ಸ್ಥಗಿತಗೊಳಿಸುವಂತೆ ಕಿಡಿಗೇಡಿಗಳಿಂದ ಧಮ್ಕಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್. 23 : ಯಕ್ಷಗಾನ ಖ್ಯಾತ ಕಲಾವಿದರ ತವರು ವಿಟ್ಲ ಕರೋಪಾಡಿ ಸಮೀಪದ ಕನ್ಯಾನ ಶಾಲೆಯೊಂದರಲ್ಲಿ ಗುರುವಾರ ಯಕ್ಷಗಾನ ಪ್ರದರ್ಶನ ಮಾಡದಂತೆ ಕೆಲ ಕಿಡಿಗೇಡಿಗಳು ವಿರೋಧ ವ್ಯಕ್ತಪಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಗುರುವಾರ ಬೆಳಗ್ಗೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಹೊರಗಿನಿಂದ ಬಂದ ಕೆಲವು ಕಿಡಿಗೇಡಿಗಳು ಯಕ್ಷಗಾನ ನಿಲ್ಲಿಸುವಂತೆ ಕಾರ್ಯಕ್ರಮ ವ್ಯವಸ್ಥಾಪಕರನ್ನು ಬೆದರಿಸಿದ್ದಾರೆ. ಇದಕ್ಕೆ ವ್ಯವಸ್ಥಾಪಕರು ಯಾವುದೇ ಕಾರಣಕ್ಕೂ ನಿಗದಿತ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗದು ಯಕ್ಷಗಾನ ಪ್ರದರ್ಶನ ಮಾಡಿಯೇ ಮಾಡುತ್ತೇವೆ ಎಂದಿದ್ದಾರೆ.

ಇದರಿಂದ ಕೋಪಗೊಂಡ ಕಿಡಿಗೇಡಿಗಳ ತಂಡ ಗೇಟಿನ ಬಳಿ ನಿಂತು ಅರಚಾಟ(ಕಿರುಚಾಟ) ಆರಂಭಿಸಿದ್ದಾರೆ. ಈ ಸಂದರ್ಭ ಯಕ್ಷಣಗಣ ನೋಡುತ್ತಿದ್ದ ಕೆಲ ಮಹಿಳೆಯರು ಕಿಡಿಗೇಡಿಗಳನ್ನು ತರಾಟೆಗೆ ತೆಗೆದುಕೊಂಡರು.

miscreants try to stop a yakshagana play at Kanyana, mangaluru

ಕೆಲವು ಮಹಿಳೆಯರು ಭಯಗೊಂಡು ಕಾರ್ಯಕ್ರಮದಿಂದ ಎದ್ದು ಶಾಲೆ ಒಳಗೆ ಹೋಗಿದ್ದರಿಂದ ಗೊಂದಲ ಏರ್ಪಟ್ಟಿತು.

ಕರಾವಳಿಯ ಕಾಲ ಸಂಸ್ಕೃತಿಯನ್ನು ತಡೆಯುವ ಪ್ರಯತ್ನಕ್ಕೆ ಮುಂದಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಾರ ಬೆಳಗ್ಗೆ 10ಗಂಟೆಯಿಂದ ಸಾಯಂಕಾಲ 6ರವರೆಗೆ ಕಾರ್ಯಕ್ರಮಗಳಿಗೆ ಸಮಯ ನಿಗದಿಪಡಿಸಲಾಗಿತ್ತು. ಸರ್ವಧರ್ಮದ ಕಾರ್ಯಕ್ರಮಗಳಿಗೂ ಅವಕಾಶವಿತ್ತು.

ಶಾಲೆಯ ಆರು ಮಂದಿ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ಮಧ್ಯಾಹ್ನ 3ರಿಂದ 4ರವರೆಗೆ "ಸುದರ್ಶನ ವಿಜಯ" ಯಕ್ಷಗಾನ ಹಮ್ಮಿಕೊಳ್ಳಲಾಗಿತ್ತು.

English summary
miscreants try to stop a yakshagana play at Kanyana, mangaluru. In this regard yakshagana association has demanded justice for the misbehaviour of miscreants during the play .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X