ಉಳ್ಳಾಲದ ಉಳ್ಳಾಲಪೇಟೆಯ ಮಸೀದಿಗೆ ಕಲ್ಲು ತೂರಿದ ಕಿಡಿಗೇಡಿಗಳು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ನವೆಂಬರ್. 14 : ಜಿಲ್ಲೆಯಲ್ಲಿ ಹಿಂದೂ ಮತ್ತು ಮುಸ್ಲಿಂ ನಡುವೆ ಒಂದಲ್ಲ ಒಂದು ಅಹಿತಕರ ಘಟನೆಗಳು ನಡೆಯುತ್ತಿವೆ. ಇದರಿಂದ ಮುಂಜಾಗೃತವಾಗಿ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.

ಆದರೂ ಇತ್ತೀಚೆಗೆ ಈ ಭಾಗದಲ್ಲಿ ಚೂರಿ ಇರಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಅವರ ಮೇಲೆ ಇವರು, ಇವರ ಮೇಲೆ ಅವರು ಹೀಗೆ ಒಬ್ಬರಿಗೊಬ್ಬರು ತಮ್ಮ ಸೇಡಿ ಕಿಚ್ಚನ್ನು ಮುಂದುವರೆಸಿದ್ದಾರೆ. [ಮಂಗಳೂರಿನಲ್ಲಿ ಚೂರಿ ಇರಿತ, ಇಬ್ಬರಿಗೆ ಗಾಯ]

ಮತ್ತೆ ಸೋಮವಾರ ತಡರಾತ್ರಿ ಉಳ್ಳಾಲದ ಉಳ್ಳಾಲಪೇಟೆಯ ರಹ್ಮಾನಿಯ ಮಸೀದಿಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಬೆಳಗ್ಗೆ ನಮಾಝ್ ಮಾಡಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ಕೂಡಲೇ ಆರೋಪಿಗಳುನ್ನು ಬಂಧಿಸಬೇಕೆಂದು ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿದೆ. [ಮಂಜನಾಡಿಯಲ್ಲಿ 10 ವರ್ಷದ ವಿದ್ಯಾರ್ಥಿಗೆ ಚೂರಿ ಇರಿತ]

Miscreants pelt stones at Ullalapete Rahmaniya mosque

ಮಸೀದಿಯೊಳಗೆ ಕಲ್ಲುಗಳಿದ್ದು, ಒಂದು ಗಾಜು ಪುಡಿಯಾಗಿದೆ. ಉಳ್ಳಾಲ ಪೊಲೀಸರು ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾತ್ರಿ 12 ಗಂಟೆಯ ಸುಮಾರಿಗೆ ಮಸೀದಿಗೆ ಬಾಗಿಲು ಹಾಕಿ ತೆರಳಿದ ಬಳಿಕ ಈ ಘಟನೆ ನಡೆದಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಸ್ಥಳಕ್ಕೆ ಭೇಟಿ ನೀಡಿರುವ ಉಳ್ಳಾಲ ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಹಿಂದೂ ಮುಸ್ಲಿಂ ಮುಸುಕಿನ ಗುದ್ದಾಟಗಳು ಮುಂದುವರೆದಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Unsavoury incidents continue in Ullal area, Miscreants pelted stones at Rahmaniya Jumma mosque at Ullalapete, Mangaluru here on November 15.
Please Wait while comments are loading...