ಸಚಿವ ಯುಟಿ ಖಾದರ್ ತಂದೆ-ತಾಯಿಯ ಖಬರ್‌ಗೆ ಹಾನಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 30 : ಉಳ್ಳಾಲದ ಕೇಂದ್ರ ಜುಮಾ ಮಸೀದಿ ಮತ್ತು ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷರ ಆಯ್ಕೆಯ ಎರಡು ಬಣಗಳ ನಡುವೆ ಜಟಾಪಟಿ ನಡೆದಿದೆ. ಈ ಸಂದರ್ಭದಲ್ಲಿ ಗುಂಪೊಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ತಂದೆ-ತಾಯಿ ಖಬರ್‌ಗೆ ಹಾನಿ ಉಂಟು ಮಾಡಿದೆ.

ಮಸೀದಿ ಮತ್ತು ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷರ ಆಯ್ಕೆಯಲ್ಲಿ ರಾಜಕೀಯ ಪ್ರವೇಶ ಮಾಡಿದೆ ಎಂದು ಆರೋಪಿಸಿದ ಒಂದು ಬಣ ಶುಕ್ರವಾರ ಮಧ್ಯಾಹ್ನ ಉಳ್ಳಾಲ ಶಾಸಕ ಮತ್ತು ಸಚಿವ ಯು.ಟಿ.ಖಾದರ್ ಅವರ ತಂದೆ-ತಾಯಿಯ ಖಬರ್‌ನ ಮೇಲಿನ ಟೈಲ್ಸ್ ಗಳು ಹಾಗೂ ನಾಮಫಲಕವನ್ನು ದ್ವಂಸಗೊಳಿಸಿತು.

ullal

ಸುಮಾರು ಒಂದು ತಿಂಗಳಿನಿಂದ ಮಸೀದಿ ಮತ್ತು ದರ್ಗಾ ಸಮಿತಿಯ ಅಧ್ಯಕ್ಷರ ಆಯ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಎರಡೂ ಬಣದ ನಡುವೆ ಜಟಾಪಟಿ ನಡೆಯುತ್ತಿದೆ. ಅಂತಿಮ ನಿರ್ಧಾರ ಕೈಗೊಳ್ಳದಿದ್ದರಿಂದ ಅಧ್ಯಕ್ಷರ ಆಯ್ಕೆ ವಿಷಯ ತಾರಕ್ಕಕ್ಕೇರಿತ್ತು.

 ut khader

ಈ ಎರಡೂ ಬಣಗಳ ಅಸಮಾಧಾನ ಶುಕ್ರವಾರ ಬುಗಿಲೆದ್ದು ಪರಸ್ಪರ ಆರೋಪ, ಪ್ರತ್ಯಾರೋಪಗಳು ನಡೆದವು. ವಿಷಯ ತಾರಕ್ಕಕ್ಕೇರುವುದನ್ನು ಅರಿತ ಪೊಲೀಸ್ ಅಧಿಕಾರಿಗಳು ರಾತ್ರಿ ಅಧ್ಯಕ್ಷರ ಕಚೇರಿಗೆ ಬೀಗ ಹಾಕಿದರು.

mangaluru

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Miscreants on Friday April 29 desecrated the gravestones of Ullal MLA and health minister U.T.Khader's parents at Sayyid Mohammed Shareeful Madani Dargah, Mangaluru.
Please Wait while comments are loading...