ಉಡುಪಿ, ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿದೆ ಅಪ್ರಾಪ್ತ ತಾಯಂದಿರ ಸಂಖ್ಯೆ

By: ಕಿರಣ್ ಸಿರ್ಸೀಕರ್
Subscribe to Oneindia Kannada

ಮಂಗಳೂರು, ಆಗಸ್ಟ್ 4 : ಆಟವಾಡುತ್ತಾ ಬಾಲ್ಯ ಕಳೆಯಬೇಕಾದ ಬಾಲಕಿಯರಿಗೇ ಮಕ್ಕಳಾದರೆ ಹೇಗೆ? ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಇಂಥ ಪ್ರಕರಣಗಳ ಸಂಖ್ಯೆಗಳು ಹೆಚ್ಚುತ್ತಿವೆ.

ಗರ್ಭ ಧರಿಸುವುದನ್ನು ತಡೆಯಲು ಸರಕಾರದಿಂದ ನೂತನ 'ಚುಚ್ಚು ಮದ್ದು'

ಕಳೆದ ಮೂರು ವರ್ಷಗಳಲ್ಲಿ ಅಪ್ರಾಪ್ತ ವಯಸ್ಸಿನಲ್ಲಿ ತಾಯ್ತನದ ಭಾರ ಹೊರುವವರ ಸಂಖ್ಯೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.

Minor girls pregnancy increases in Udupi and Dakshina Kannada

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಇಪ್ಪತ್ಮೂರು ಪ್ರಕರಣಗಳು ಬೆಳಕಿಗೆ ಬಂದಿದ್ದು, ರಾಜ್ಯ ಮಕ್ಕಳ ಕಲ್ಯಾಣ ಸಮಿತಿ ಮುಂದೆ ದಾಖಲಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹದಿಮೂರು ಹಾಗೂ ಉಡುಪಿಯಲ್ಲಿ ಹತ್ತು ಅಪ್ರಾಪ್ತರು ಗರ್ಭ ಧರಿಸಿದ್ದಾರೆ.

ಇವರಲ್ಲಿ ಬಹುತೇಕರು ಹದಿನಾಲ್ಕು ವರ್ಷ ಮೇಲ್ಪಟ್ಟವರು ಹಾಗೂ ಹದಿನೆಂಟು ವರ್ಷಕ್ಕಿಂತ ಚಿಕ್ಕ ವಯಸ್ಸಿನವರು. ಇದು ಬಯಲಾಗಿರುವ ಪ್ರಕರಣಗಳಾದರೆ, ಬೆಳಕಿಗೆ ಬಾರದ ಪ್ರಕರಣಗಳು ಎಷ್ಟಿವೆ ಎಂಬ ಪ್ರಶ್ನೆ ಕೂಡ ಇದೆ.

27 ವಾರದ ಭ್ರೂಣ ತೆಗೆಸಲು ಒಪ್ಪದ ಸುಪ್ರೀಂ ಕೋರ್ಟ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2015ರಿಂದ ಇಲ್ಲಿಯವರೆಗೆ ಹದಿಮೂರು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಅತಿ ಹೆಚ್ಚು ಅಂದರೆ 15 ಪ್ರಕರಣ ಬೆಳಕಿಗೆ ಬಂದಿದೆ. ಈ ಮಧ್ಯೆ ತಂದೆ- ಚಿಕ್ಕಪ್ಪನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ ಎರಡು ಪ್ರಕರಣಗಳು ಈ ಪಟ್ಟಿಯಲ್ಲಿ ಸೇರಿವೆ.

ಉಭಯ ಜಿಲ್ಲೆಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಪೋಕ್ಸೋ ಕಾಯ್ದೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 191 ಪ್ರಕರಣಗಳು ದಾಖಲಾಗಿವೆ. ಉಡುಪಿಯಲ್ಲಿ 110 ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಈ ಅಂಕಿ-ಅಂಶಗಳು ಆತಂಕ ಮೂಡಿಸುವಂತಿವೆ. ರಾಜ್ಯ ಸರಕಾರ ಈ ಬಗ್ಗೆ ಗಂಭೀರವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Minor girls pregnancy increases in Udupi and Dakshina Kannada district. Here is the numbers discloses the seriousness of the issue.
Please Wait while comments are loading...