ಮಂಗಳೂರು : ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್ 29 : ಐವರು ಯುವಕರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಅಪ್ರಾಪ್ತ ಬಾಲಕಿ ಕಾವೂರು ಪೊಲೀಸರಿಗೆ ದೂರು ನೀಡಿದ್ದಳು. ದೂರಿನ ಅನ್ವಯ ಪೊಲೀಸರು ಬಾಲಕಿ ಸ್ನೇಹಿತ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕುಂಜತ್ತಬೈಲ್‌ನ ನಿವಾಸಿ ಪ್ರಶಾಂತ್ ಶೆಟ್ಟಿ ಮತ್ತು ಆತನ ಸ್ನೇಹಿತರಾದ ಸಲ್ಮಾನ್, ಅದಿಲ್, ನೌಫಲ್ ಹಾಗೂ ಮತ್ತೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು 16 ವರ್ಷದ ಬಾಲಕಿ ಸೋಮವಾರ ಕಾವೂರು ಪೊಲೀಸರಿಗೆ ದೂರು ನೀಡಿದ್ದಳು. [ಅತ್ಯಾಚಾರ ಎಸಗಿದ ತಂದೆಗೆ ಮಕ್ಕಳ ನೋಡಲು ಅವಕಾಶ ನೀಡಿದ್ದು ಸರಿಯೇ?]

minor girl gang rape

ಮಂಗಳೂರು ಮಹಿಳಾ ಶಕ್ತಿಯ ಕಾರ್ಯಕರ್ತರು ಸಂತ್ರಸ್ತ ಬಾಲಕಿಯ ನೆರವಿಗೆ ನಿಂತಿದ್ದಾರೆ. ಬಾಲಕಿ ನೀಡಿದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. [ಅತ್ಯಾಚಾರದ ವಿಡಿಯೋ ಮಾಡಿದ ಪಕ್ಕದ್ಮನೆ ಪುಂಗವ]

ಮದುವೆಯಾಗುವುದಾಗಿ ನಂಬಿಸಿದ : ಬಾಲಕಿಯ ಪಕ್ಕದ ಮನೆಯವನಾದ ಆರೋಪಿ ಪ್ರಶಾಂತ್ ಶೆಟ್ಟಿ ಮೊಬೈಲ್ ಮೂಲಕ ಬಾಲಕಿಯ ಸಂಪರ್ಕ ಸಾಧಿಸಿ ಸ್ನೇಹ ಬೆಳೆಸಿದ್ದ. ಲೈಂಗಿಕವಾಗಿ ಆಕೆಯನ್ನು ಶೋಷಿಸಲು ಪ್ರಯತ್ನಿಸಿದ್ದ. ಬಾಲಕಿ ವಿರೋಧಿಸಿದಾಗ ಮದುವೆಯಾಗುವ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಬೆದರಿಕೆ ಹಾಕಿ ತನ್ನ ಸ್ನೇಹಿತರೊಂದಿಗೆ ಲೈಂಗಿಕ ಸಂಪರ್ಕ ಹೊಂದುವಂತೆ ಮಾಡಿದ್ದ ಎಂದು ಬಾಲಕಿ ದೂರಿನಲ್ಲಿ ಆರೋಪಿಸಿದ್ದಾಳೆ.

ಪ್ರಶಾಂತ್ ಶೆಟ್ಟಿ ಸ್ನೇಹಿತ ಸಲ್ಮಾನ್ ಪ್ರಶಾಂತ್ ಮೊಬೈನ್‌ ಮೂಲಕ ಬಾಲಕಿಗೆ ಕರೆ ಮಾಡಿ, ಮುಖ್ಯವಾದ ವಿಚಾರ ಮಾತನಾಡಬೇಕು ಪಂಜಿಮೊಗರು ಬಸ್ ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದ. ಬಾಲಕಿ ಬಸ್ ನಿಲ್ದಾಣಕ್ಕೆ ಹೋದಾಗ ಬೈಕ್‌ನಲ್ಲಿ ಅಲ್ಲಿಗೆ ಬಂದ ಅದಿಲ್ ಎಂಬಾತ ಬಾಲಕಿಯನ್ನು ಪಂಜಿಮೊಗರಿನ ಮನೆಗೆ ಕರೆದುಕೊಂಡು ಹೋಗಿದ್ದ. ಮನೆಯಲ್ಲಿ ಸಲ್ಮಾನ್, ನೌಫಲ್, ಪ್ರಶಾಂತ್ ಶೆಟ್ಟಿ ಮತ್ತು ಮತ್ತೊಬ್ಬ ಸೇರಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಪಂಜಿಮೊಗರುವಿನ ಮನೆಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ನಂತರ ಆಕೆಯನ್ನು, ಪಂಜಿಮೊಗರು ಕಾಲೇಜಿನ ಬಳಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಅರೆಪ್ರಜ್ಞೆವಾಸ್ಥೆಯಲ್ಲಿದ್ದ ಬಾಲಕಿಯನ್ನು ನೋಡಿದವರು ಮನೆಗೆ ತಲುಪಿಸಿದ್ದಾರೆ. ಚೇತರಿಸಿಕೊಂಡ ಯುವತಿ ಸೋಮವಾರ ಪೊಲೀಸರಿಗೆ ದೂರು ನೀಡಿದ್ದಾಳೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru : A minor girl on December 28 filed a complaint in Kavoor police station alleging that she was gang-raped by five youths. According to the complaint police arrested Prashant Shetty, and his friends Salman, Naufal.
Please Wait while comments are loading...