ಸಚಿವ ಖಾದರ್ ಅಭಿಮಾನಿ, ಪಿಎಫ್ಐ ಸಂಘಟಕರ ಮಧ್ಯೆ ಸೋಷಿಯಲ್ ವಾರ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 12 : ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು ಟಿ ಖಾದರ್ ಅವರು 'ಪಿಎಫ್ಐ' ತನ್ನನ್ನು ಟಾರ್ಗೆಟ್ ಮಾಡುತ್ತಿದೆ ಎನ್ನುವ ಹೇಳಿಕೆ ಕೊಟ್ಟ ಬೆನ್ನಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಶೀತಲ ಸಮರವೊಂದು ಶುರುವಾಗಿದೆ.

ಯು ಟಿ ಖಾದರ್ ಅಭಿಮಾನಿ ಹಾಗೂ ಮುಸ್ಲಿಂ ಸಂಘಟಕರ ನಡುವೆ ಕಳೆದೊಂದು ದಿನದಿಂದ ಆರೋಪ ಪ್ರತ್ಯಾರೋಪ ಕೇಳಿ ಬರುತ್ತಿದೆ. ಸಚಿವರ ವಿರುದ್ಧ ಆಕ್ರೋಶಿತ ಮಾತುಗಳ ಪೋಸ್ಟರ್ ಒಂದೆಡೆಯಾದರೆ, ಇನ್ನೊಂದೆಡೆ ಸಚಿವ ಆಪ್ತರಿಂದ ಮತ್ತು ಅಭಿಮಾನಿಗಳಿಂದ ಸಮರ್ಥನೆಯ ಮಾತುಗಳು ಪರಸ್ಪರ ಹರಿದಾಡುತ್ತಿವೆ.[ಪಿಎಫ್ಐ ಈಗ ನನ್ನನ್ನು ಟಾರ್ಗೆಟ್ ಮಾಡಿದೆ: ಸಚಿವ ಖಾದರ್]

Minister UT Khader followers and PFI Organization fight in social media

ಈ ಬೆಳವಣಿಗೆಯ ಮಧ್ಯೆ ಪಿಎಫ್ಐ ಮುಖಂಡರು ನಾವೇನು ಸಚಿವರನ್ನು ಟಾರ್ಗೆಟ್ ಮಾಡಿಲ್ಲ ಎಂದು ತಮ್ಮ ಮೇಲೆ ಸಚಿವರು ಮಾಡಿರುವ ಆರೋಪವನ್ನು ಅಲ್ಲಗಳೆಯುತ್ತಿದ್ದಾರೆ.

ಮುಸ್ಲಿಂ ಸಂಘಟನೆಗಳು ಹೊಂದಿದ ವಾಟ್ಸಾಪ್ ಗ್ರೂಪಿನಲ್ಲಿ ಸಚಿವ ಖಾದರ್ ವಿರುದ್ಧ ಆರೋಪಗಳ ಸುರಿಮಳೆಯೇ ಸುರಿಯುತ್ತಿದ್ದು, ಕಾಂಗ್ರೆಸ್ ಅಭಿಮಾನಿ ಹಾಗೂ ಯು ಟಿ ಖಾದರ್ ಅಭಿಮಾನಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಪಿಎಫ್ಐ ಸಂಘಟಕರಿಗೆ ಖಡಕ್ ಬಾಣ ಬಿಡಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Recently as minister U T Khader stated that I have become the target from PFI, this statement has put many Muslims to anger and therefore there is a Facebook war going on against khader.
Please Wait while comments are loading...