ಯೋಧನ ಜೀವ ಉಳಿಸಿದ ಸಚಿವ ಯು.ಟಿ.ಖಾದರ್

Posted By: Manjunatha
Subscribe to Oneindia Kannada

ಮಂಗಳೂರು, ನವೆಂಬರ್ 06 : ಹಾವು ಕಡಿತದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಯೋಧ ಸಂತೋಷ್ ಕುಮಾರ್ ಗೆ ಚಿಕಿತ್ಸೆ ಕೊಡಿಸಿ ಆಹಾರ ಮತ್ತು ನಾಗರೀಕ ಸಚಿವ ಯು.ಟಿ.ಖಾದರ್ ಮಾನವೀಯತೆ ಮೆರೆದಿದ್ದಾರೆ.

ವೃದ್ಧ ದಂಪತಿಗೆ ನೆರವಾಗಿ ಮಾನವೀಯತೆ ಮೆರೆದ ಸಚಿವ ಯುಟಿ ಖಾದರ್

ಕಾಶ್ಮೀರದಲ್ಲಿ ಉಗ್ರರ ಜೊತೆ ಮುಖಾಮುಖಿಯಲ್ಲಿ ಗಾಯಗೊಂಡು ವಿಶ್ರಾಂತಿಗಾಗಿ ಸ್ವಗ್ರಾಮ ಮುಡಿಪು ಬಳಿಯ ಕೊಡಕಲ್ಲುಗೆ ಬಂದಿದ್ದ ಸೈನಿಕ ಸಂತೋಷ್ ಕುಮಾರ್ ಅವರಿಗೆ ನವೆಂಬರ್ 05ರ ಭಾನುವಾರ ಮಧ್ಯರಾತ್ರಿ ಹಾವು ಕಚ್ಚಿದೆ, ಕೂಡಲೆ ಅವರ ಕುಟುಂಬ ಸದಸ್ಯರು ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ, ಆದರೆ ಆಸ್ಪತ್ರೆಯಲ್ಲಿ ಸೂಕ್ತ ಚುಚ್ಚುಮದ್ದು ಇರದ ಕಾರಣ ಚಿಕಿತ್ಸೆ ನಡೆಯದೆ ಸಂತೋಷ್ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

ಬಾಗಲಕೋಟೆ: ಗರ್ಭಿಣಿ ಚೈತ್ರಾ ಪಾಲಿಗೆ ದೇವರಾದ ಡಾ. ಮನೋಹರ್

Minister U.T. Khader helped a soldier

ಸಂತೋಷ್ ಕುಟುಂಬ ಸದಸ್ಯರು ಬೇರೆ ದಾರಿ ಕಾಣದೆ ಯು.ಟಿ.ಖಾದರ್ ಅವರನ್ನು ಸಂಪರ್ಕಿಸಿದ್ದಾರೆ, ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಸಚಿವ ಖಾದರ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಿಂದ ಚಿಕಿತ್ಸೆಗೆ ಅವಶ್ಯಕವಾಗಿದ್ದ 10 ಚುಚ್ಚುಮದ್ದುಗಳನ್ನು ತರಿಸಿ ಸಂತೋಷ್ ಅವರ ಜೀವ ಉಳಿಯಲು ನೆರವಾಗಿದ್ದಾರೆ.

ಪಡಿತರ ಪಡೆಯಲು ಆಧಾರ್ ಕಡ್ಡಾಯವಲ್ಲ : ಯು.ಟಿ.ಖಾದರ್

ಪ್ರಸ್ತುತ ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಕೆಲ ದಿನಗಳ ಮುಂಚೆಯಷ್ಟೆ ವೃದ್ಧ ದಂಪತಿಗಾಗಿ ಪಡಿತರ ಚೀಟಿ ನೊಂದಾವಣಿ ಯಂತ್ರಗಳನ್ನು ಅವರ ಮನೆಗೇ ಕೊಂಡೊಯ್ದು ಸಹಾಯ ಮಾಡಿದ್ದ ಖಾದರ್ ಅವರು ಆ ಮುಂಚೆ ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡಿದ್ದ ಆಂಬ್ಯುಲೆನ್ಸ್ ಗೆ ದಾರಿ ಮಾಡಲು ಸ್ವತಃ ರಸ್ತೆಗಿಳಿದು ಟ್ರಾಫಿಕ್ ಕ್ಲಿಯರ್ ಮಾಡಿಸಿದ್ರು. ಹೋದಲ್ಲೆಲ್ಲಾ ತಮ್ಮ ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಳ್ಳುವ ಖಾದರ್ ಅವರಿಂದ ಮುಂದೆಯೂ ಇಂತಹಾ ಕಾರ್ಯಗಳಾಗಲಿ ಎಂಬುದು ಎಲ್ಲರ ಆಶಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Soldier Santhosh had snake bit sunday night, his family members moved him to city hospital but unfortunately their is no necessary Injection so the Santhosh Family called minister. Khadar quickly comes to the Place and arranged 10 necessary injections from anouther hospital

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ