ಕುರಾನ್ ನಲ್ಲಿ 11ನೇ ವರ್ಷಕ್ಕೆ ಪದವಿ ಪಡೆದ ಸಚಿವ ಯು.ಟಿ ಖಾದರ್ ಪುತ್ರಿ!

By: ಶಂಶೀರ್ ಬುಡೋಳಿ, ಮಂಗಳೂರು
Subscribe to Oneindia Kannada

ಮಂಗಳೂರು, ಡಿಸೆಂಬರ್, 24: ಈಕೆ ಸಚಿವರೊಬ್ಬರ ಪುತ್ರಿ. ವಯಸ್ಸು 11. ಸಾಮಾನ್ಯವಾಗಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡಬೇಕಿದ್ದ ಬಾಲಕಿ. ಇನ್ನು ಆಟವಾಡುವ ವಯಸ್ಸು. ಆವಾಗಲೇ ಈ ಬಾಲಕಿ ಪದವಿ ಪಡೆದಿದ್ದಾಳೆ..!

ಹೌದು. ಇದು ಅಚ್ಚರಿಯಾದರೂ ಸತ್ಯ. ಇದು ನಮ್ಮ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಯು.ಟಿ.ಖಾದರ್ ಪುತ್ರಿಯ ಸಾಹಸಗಾಥೆ. [ಸಚಿವ ಯು.ಟಿ.ಖಾದರ್ ಉಳಿದವರಿಗೆ ಮಾದರಿಯಾಗಲಿ]

ತನ್ನ ಹನ್ನೊಂದನೇ ವಯಸ್ಸಿನಲ್ಲಿ ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನನ್ನು ಸಂಪೂರ್ಣ ಕಂಠಪಾಠ ಮಾಡಿ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣದ ' ಹಾಫಿಝಾ' ಪದವಿ ಪಡೆದಿದ್ದಾಳೆ. ಅಂದಹಾಗೇ ಈಕೆಯ ಹೆಸರು ಹವ್ವಾ ನಸೀಮಾ. [ಯುಟಿ ಖಾದರ್ ಪುತ್ರಿಯ ನಕಲಿ ಚಿತ್ರ, ದೂರು ದಾಖಲು]

ಹವ್ವಾ ನಸೀಮಾ ಕಲಿತದ್ದು ಎಲ್ಲಿ ?

ಹವ್ವಾ ನಸೀಮಾ ಕಲಿತದ್ದು ಎಲ್ಲಿ ?

ಕಾಸರಗೋಡು ಅಡ್ಕರಬೈಲ್ ಮದ್ರಸತ್ತುಲ್ ಬಯಾನ್ ನಲ್ಲಿ ಎರಡು ವರ್ಷಗಳ ಅಧ್ಯಯನ ಮಾಡಿದ ಹವ್ವಾ ಬಳಿಕ ಮಂಗಳೂರಿನ ಕೊಣಾಜೆ ಬಳಿ ಇರುವ ತನ್ ಫೀಝಲ್ ಕುರಾನ್ ಮಹಿಳಾ ಕಾಲೇಜಿನಲ್ಲಿ ಒಂದೂವರೆ ವರ್ಷಗಳ ಕಾಲ ಕುರಾನ್ ಅಧ್ಯಯನ ಮಾಡಿದಳು. ಈಕೆಗೆ ತಿರುವನಂತಪುರಂನ ಹಾಫಿಝ್ ಮುಹಮ್ಮದ್ ಝಿಯಾದ್ ನದ್ವಿ ನೇತೃತ್ವದಲ್ಲಿ ಅಲ್ ಹಾಫಿಝಾ ಸುಮಯ್ಯ ಧಾರ್ಮಿಕ ಶಿಕ್ಷಣ ಕಲಿಸಿದರು. ಇದೇ ಸಂಸ್ಥೆಯಲ್ಲಿ ಹವ್ವಾ ಜೊತೆಗೆ ಹತ್ತು ಮಂದಿ ಸಂಪೂರ್ಣ ಕುರಾನ್ ಕಂಠಪಾಠ ಮಾಡಿದ್ದಾರೆ. ಇವರ ಪೈಕಿ ಹವ್ವಾ ನಸೀಮಾ ಅವರಿಗೆ ಪದವಿ ಸಿಕ್ಕಿದೆ.

ವಾಗ್ದಾನ ಪೂರೈಸಿದ ಖಾದರ್..!

ವಾಗ್ದಾನ ಪೂರೈಸಿದ ಖಾದರ್..!

ಯು.ಟಿ.ಖಾದರ್ ಪತ್ನಿ, ಪುತ್ರಿ ಜೊತೆಗೆ ಮೆಕ್ಕಾ ಯಾತ್ರೆಗೆ ಹೋಗಿದ್ದರು. ಈ ವೇಳೆ ಅಚನಕ್ಕಾಗಿ ಪುತ್ರಿ ಹವ್ವಾ ಕಾಣೆಯಾಗಿದದಳು. ಎಷ್ಟೇ ಹುಡುಕಾಡಿದರೂ ಸಿಗಲಿಲ್ಲ. ಅಲ್ಲಿದ್ದ ಅಧಿಕಾರಿಗಳಿಗೆ ವಿಷಯ ಮುಟ್ಟಿಸಲಾಯಿತು. ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ 'ನನ್ನ ಪುತ್ರಿಯನ್ನು ನೀನು ಮರಳಿ ದೊರಕಿಸಿ ಕೊಟ್ಟರೆ ಆಕೆಯನ್ನ ಇಸ್ಲಾಮಿ ಧಾರ್ಮಿಕ ಶಿಕ್ಷಣ ಸಂಸ್ಥೆಗೆ ಸೇರಿಸಿ ಧಾರ್ಮಿಕ ಸೇವೆಗೆ ಮುಡಿಪಾಗಿಡುತ್ತೇನೆ 'ಎಂದು ಕಅಭಾ ಭವನದ ಎದುರು ಎರಡು ಕೈಗಳನ್ನೆತ್ತಿ ಪ್ರಾರ್ಥಿಸಿದ್ದರು. ಇದಾದ ಕೆಲ ಗಂಟೆಗಳಲ್ಲಿ ಇವರ ಪುತ್ರಿ ಸಿಕ್ಕಿದ್ದಳು. ಊರಿಗೆ ಮರಳಿದ ಸಚಿವ ಖಾದರ್ , ಧಾರ್ಮಿಕ ಸಂಸ್ಥೆಗೆ ಪುತ್ರಿಯನ್ನ ಸೇರಿಸಿದರು. ಇದೀಗ ಹವ್ವಾ ನಸೀಮಾ ' ಹಾಫಿಝಾ' ಪದವೀಧರೆ..!

ಕುರಾನ್ ಕಂಠಪಾಠ

ಕುರಾನ್ ಕಂಠಪಾಠ

ಕುರಾನ್ 600 ಕ್ಕೂ ಅಧಿಕ ಪುಟಗಳನ್ನ ಹೊಂದಿದೆ. 6,236 ವಾಕ್ಯಗಳಿವೆ. 114 ಅಧ್ಯಾಯಗಳಿವೆ. ಕುರಾನ್ ಕಂಠಪಾಠ ಮಾಡುವುದನ್ನ ' ಹಿಫ್ಝ್' ಎಂದು ಕರೆಯಲಾಗುತ್ತದೆ. ಪುರುಷರಲ್ಲಿ ಕಂಠಪಾಠ ಮಾಡಿದರೆ ಅವರನ್ನು ' ಹಾಫಿಝ್ ' ಎಂದು ಕರೆಯಲಾಗುತ್ತದೆ. ಹೆಣ್ಮಕ್ಕಳು ಕುರಾನ್ ಕಂಠಪಾಠ ಮಾಡಿದರೆ ಅವರನ್ನು ' ಹಾಫಿಝಾ' ಎಂದು ಕರೆಯಲಾಗುತ್ತದೆ. ಕುರಾನ್ 600 ಕ್ಕೂ ಅಧಿಕ ಪುಟಗಳನ್ನ ಹೊಂದಿದೆ. 6,236 ವಾಕ್ಯಗಳಿವೆ. 114 ಅಧ್ಯಾಯಗಳಿವೆ. ಕುರಾನ್ ಕಂಠಪಾಠ ಮಾಡುವುದನ್ನ ' ಹಿಫ್ಝ್' ಎಂದು ಕರೆಯಲಾಗುತ್ತದೆ. ಪುರುಷರಲ್ಲಿ ಕಂಠಪಾಠ ಮಾಡಿದರೆ ಅವರನ್ನು ' ಹಾಫಿಝ್ ' ಎಂದು ಕರೆಯಲಾಗುತ್ತದೆ. ಹೆಣ್ಮಕ್ಕಳು ಕುರಾನ್ ಕಂಠಪಾಠ ಮಾಡಿದರೆ ಅವರನ್ನು ' ಹಾಫಿಝಾ' ಎಂದು ಕರೆಯಲಾಗುತ್ತದೆ.

ಕಷ್ಟದ ಮಧ್ಯೆ ಕಲಿತ ಹುಡುಗಿ..!

ಕಷ್ಟದ ಮಧ್ಯೆ ಕಲಿತ ಹುಡುಗಿ..!

ಸಚಿವ ಯು.ಟಿ. ಖಾದರ್ ಕುಟುಂಬದಲ್ಲಿ ಶ್ರೀಮಂತಿಕೆ ಇದ್ದರೂ ಹವ್ವಾ ಇದರಿಂದ ದೂರ. ಕಾಸರಗೋಡಿನ ಹಾಸ್ಟೆಲ್ ವೊಂದರಲ್ಲಿ ಬಡ ಅನಾಥ ಮಕ್ಕಳೊಂದಿಗೆ ಇದ್ದಳು. ಚಾಪೆಯಲ್ಲೇ ಮಲಗುತ್ತಿದ್ದಳು. ಹಾಸ್ಟೆಲ್ ಊಟವನ್ನೇ ತಿನ್ನುತ್ತಿದ್ದಳು. ತನ್ನೆಲ್ಲಾ ಕೆಲಸಗಳನ್ನು ತಾನೇ ಮಾಡುತ್ತಿದ್ದಳು.

ಹವ್ವಾ ನಸೀಮಾ ಗುರಿ ಏನು ?

ಹವ್ವಾ ನಸೀಮಾ ಗುರಿ ಏನು ?

ಮುಂದೆ ಹವ್ವಾ ನಸೀಮಾ ಮದೀನಾದಲ್ಲಿರುವ ಇಸ್ಲಾಮಿ ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತು ಧಾರ್ಮಿಕ ಶಿಕ್ಷಕಿಯಾಗುವ ಹಾಗೂ ಧಾರ್ಮಿಕ ಶಿಕ್ಷಣ ಸಂಸ್ಥೆ ಆರಂಭಿಸುವ ಗುರಿ ಇಟ್ಟುಕೊಂಡಿದ್ದಾಳಂತೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka minister of food and civil supplies U.T Khader daughter 11 year Havva Nasima got degree in islam religious education quran.
Please Wait while comments are loading...