ಶರತ್ ಹತ್ಯೆ ಆರೋಪಿಗಳು ಶೀಘ್ರ ಬಂಧನಕ್ಕಾಗಿ ರಮಾನಾಥ್ ರೈ ವಿಶೇಷ ಪೂಜೆ

Posted By:
Subscribe to Oneindia Kannada

ಮಂಗಳೂರು, ಜುಲೈ 21: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಇಂದು ಸಚಿವ ರಮಾನಾಥ್ ರೈ ವಿಶೇಷ ಪೂಜೆ ಸಲ್ಲಿಸಿದರು. ಆರ್‌‌ಎಸ್‌ಎಸ್‌ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಆರೋಪಿಗಳು ಶೀಘ್ರವೇ ಬಂಧನವಾಗಲಿ ಎಂದು ಅವರು ಈ ಸಂದರ್ಭ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರು.

"ಶರತ್ ಮಡಿವಾಳ ಕೊಲೆ ಆರೋಪಿಗಳು ಶೀಘ್ರ ಬಂಧನವಾಗಬೇಕು. ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಇದರ ಹಿಂದಿರುವ ಪಿತೂರಿದಾರರ ಬಂಧನವಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರಿಗೆ ದೇವರು ಸದ್ಬುದ್ಧಿ ಕೊಡಲಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಶ್ವತ ಶಾಂತಿ ನೆಲೆಸಲಿ," ಎಂದು ರಮಾನಾಥ ರೈ ದೇವರಲ್ಲಿ ಪ್ರಾರ್ಥಿಸಿದರು.

Minister Ramanath Rai offers special prayer to arrest Sharath Madiwala Murderers soon

ಲಾಂಡ್ರಿಯ ಮಾಲೀಕ ಶರತ್ ಮಡಿವಾಳ ಹತ್ಯೆಯಾಗಿ ಇಂದಿಗೆ ಹದಿನೈದು ದಿನಗಳಾಗಿವೆ. ಆದರೆ ಇನ್ನೂ ಕೂಡ ಆರೋಪಿಗಳ ಬಂಧನವಾಗಿಲ್ಲ. ಆರೋಪಿಗಳು ಪೋಲೀಸರ ಬಲೆಗೆ ಆದಷ್ಟು ಬೇಗ ಸಿಗುವಂತೆ ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣ ನಡೆದು ಹಲವು ದಿನಗಳಾಗಿವೆ. ಇನ್ನೂ ಆರೋಪಿಗಳ ಬಂಧನವಾಗಿಲ್ಲ. ಈ ಬಗ್ಗೆ ಶರತ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದು ಕಡೆ ನಿಷೇಧಾಜ್ಞೆ ಜಾರಿಯಾಗಿ ಸುಮಾರು ಐವತ್ತು ದಿನಗಳಾಗುತ್ತಾ ಬಂದಿದೆ. ಇದರಿಂದ ಜನರು ರೋಸಿ ಹೋಗಿ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರಕಾರದ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Minister Ramanath Rai offers special prayer at Polali Shri Rajarajeshwari temple to arrest Sharath Madiwala Murderers soon and give police officials all wisdom and grace to nab the murderers here on July 21.
Please Wait while comments are loading...