ಬಜೆಟ್ ಬಗ್ಗೆ ಸಚಿವ ರಮಾನಾಥ್ ರೈ ಹೇಳಿದ್ದೇನು?

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು,ಮಾರ್ಚ್,01: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಸತ್ತಿನಲ್ಲಿ ಸೋಮವಾರ ಮಂಡಿಸಿದ 2016-17ನೇ ಬಜೆಟ್ 'ಭವಿಷ್ಯದ ಆಥಿ೯ಕ ಸವಾಲುಗಳನ್ನು ಎದುರಿಸಲು ಅಸಮಥ೯ವಾಗಿದೆ' ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಪ್ರತಿಕ್ರಿಯಿಸಿದ್ದಾರೆ.

ದೇಶದ ಆಥಿ೯ಕ ಚಿತ್ರಣವನ್ನು ಬದಲಾಯಿಸಬೇಕಾದರೆ ಧೈಯ೯ದ ನಿಧಾ೯ರಗಳನ್ನು ತೆಗೆದುಕೊಳ್ಳಬೇಕು. ಅಂತಹ ಎದೆಗಾರಿಕೆ ಕೇಂದ್ರ ಸರಕಾರಕ್ಕೆ ಇಲ್ಲ ಎಂದು ಅರುಣ್ ಜೇಟ್ಲಿ ಅವರನ್ನು ರಮಾನಾಥ ರೈ ಜರಿದಿದ್ದಾರೆ.[ಬಜೆಟ್ 2016: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕವೇನು?]

 Mangaluru

ಮಂಗಳೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ರಬ್ಬರ್. ಈ ಬೆಳೆಗಾರರಿಗೆ ನೆಮ್ಮದಿ ನೀಡಲು ಬಜೆಟ್ ವಿಫಲವಾಗಿದೆ. ರಬ್ಬರ್ ಬೆಳೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕೇಂದ್ರದ ತಪ್ಪು ಆಥಿ೯ಕ ನಿಧಿಯಿಂದ ರಬ್ಬರ್ ಬೆಳೆಗಾರ ಕಂಗಾಲಾಗಿದ್ದಾನೆ. ಉದ್ದಿಮೆಗಳ ಸಾಲದ ಬಗ್ಗೆ ತೋರಿಸಿದ ಕಾಳಜಿಯನ್ನು ರೈತರ ಸಾಲದ ಬಗ್ಗೆ ತೋರಿಸಿಲ್ಲ. ಕೃಷಿಗೆ ಯಾವುದೇ ಯೋಜನೆ ಪ್ರಕಟಿಸಿಲ್ಲ ಎಂದು ಆರೋಪಿಸಿದ್ದಾರೆ.[ಕೇಂದ್ರ ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]

ಯುಪಿಎ ಸರಕಾರ ಆರಂಭಿಸಿದ್ದ ಆಧಾರ್ ಕಾಡ್೯, ನರೇಗಾ, ಸ್ವಚ್ಛ ಭಾರತ ಮತ್ತಿತರ ಯೋಜನೆಗಳ ಬಗ್ಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಅಪಪ್ರಚಾರ ಮಾಡಲಾಗಿತ್ತು. ಆದರೆ ಈಗಿನ ಕೇಂದ್ರ ಸರಕಾರವು ಆಧಾರ್ ಕಾರ್ಡಿಗೆ ಶಾಸನಬದ್ಧ ಸ್ಥಾನಮಾನ ನೀಡಿ, ತನ್ನ ಮುಖವಾಡವನ್ನು ಕಳಚಿದೆ. ಕೇಂದ್ರ ಬಜೆಟ್ ಕೇವಲ ಅಂಕಿಸಂಖ್ಯೆಗಳನ್ನು ಮುಂದಿಟ್ಟು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಸಚಿವ ರಮಾನಾಥ ರೈ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru Incharge Minister Ramanath rai has blamed union budjet 2016. Finance Minister Arun Jaitley presented Union budjet 2016-17 in Parliament on Monday February 29th. This budjet is failure take Future Economic Challenges blamed by Ramanath Rai
Please Wait while comments are loading...