ವಾಚ್ ಗಲಾಟೆ: ಸಿದ್ದರಾಮಯ್ಯ ಮೇಲೆ ಕಿಡಿಕಾರಿದ ಜನಾರ್ಧನ ಪೂಜಾರಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು,ಫೆಬ್ರವರಿ.12: ಲಕ್ಷಾಂತರ ರೂಪಾಯಿ ಕೈ ಗಡಿಯಾರ ಇಟ್ಟುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಮಂಗಳೂರಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಈ ಕುರಿತು ಮಾತನಾಡಿದ ಪೂಜಾರಿ, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಜನಾರ್ಧನ ಪೂಜಾರಿ, ಸಿದ್ದರಾಮಯ್ಯ ಅವರು ಅವರ ಕೈ ಗಡಿಯಾರವನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಸಿಯಾಚಿನ್ ಹುತಾತ್ಮ ಕನ್ನಡಿಗ ಯೋಧರಿಗೆ ಹಂಚುತ್ತೇನೆ ಎಂದು ಇಂದೇ ಸಿಎಂ ಹೇಳಿಕೆ ನೀಡಲಿ. ಆಗ ರಾಜ್ಯದ 6 ಕೋಟಿ ಜನರು ಸಿಎಂನ್ನು ಮೆಚ್ಚುತ್ತಾರೆ' ಎಂದರು.[ಕೈಗಡಿಯಾರದ ಗಲಾಟೆಯಲ್ಲಿ ದೊರೆಗೆ ಕಾಣದ ಕರುನಾಡ ಕುವರ]

Mangaluru

ಸಿಎಂ ಸರಕಾರದಿಂದ 25 ಲಕ್ಷ, 4 ಎಕರೆ ಜಮೀನು, ಉದ್ಯೋಗ ಭರವಸೆಯ ಪರಿಹಾರ ನೀಡಿ ಸ್ಪಂದಿಸಿದ್ದು, ತನಗೆ ಸಿಕ್ಕಿದ ವಾಚನ್ನು ಹರಾಜು ಮಾಡಿ, ಸಿಎಂ ತನ್ನ ಲೆಕ್ಕದಲ್ಲಿ ಹಣವನ್ನು ಮರಣ ಹೊಂದಿದ ಯೋಧರಿಗೆ ನೀಡಲಿ. ಆಗ ಜನರು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ತಿಳಿಸಿದರು.[ಕರ್ನಾಟಕ ಹೆಮ್ಮೆಯ ಹನುಮಂತಪ್ಪನಿಗೆ ಎದೆಯುಬ್ಬಿಸಿ ಸೆಲ್ಯೂಟ್ ಹೊಡೆಯಿರಿ]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ತಪ್ಪಿನಿಂದ ಪಕ್ಷಕ್ಕೆ ಮುಜುಗರವಾಗುವುದಿಲ್ಲವೇ? ಕಾರ್ಯಕರ್ತರಲ್ಲಿ ಬೇಸರ ಮೂಡುವುದಿಲ್ಲವೇ ಎಂದ ಅವರು,ತಪ್ಪು ಮಾಡುವುದು ಮನುಷ್ಯನ ಗುಣ. ಆದರೆ ತಿದ್ದಿ ನಡೆಯುವುದು ದೈವಗುಣವಾಗಿದೆ. ಜನರು ನಿಮ್ಮನ್ನು ಕ್ಷಮಿಸುತ್ತಾರೆ, ತಾನು ತಪ್ಪು ಮಾಡಿದೆ, ತಪ್ಪು ಮಾಡಬಾರದಿತ್ತು ಎಂದು ಸಿಎಂ ಸಿದ್ಧರಾಮಯ್ಯ ಹೇಳಲಿ ಎಂದು ಪೂಜಾರಿ ಸವಾಲು ಹಾಕಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Minister Janardhan Poojary angree on Chief Minister siddaramaiah in Mangaluru on Friday, February 12th.
Please Wait while comments are loading...