ಪ್ರಾಂಶುಪಾಲರ ಮೇಲೆ ಹಲ್ಲೆ: ರಿಟ್ ಅರ್ಜಿ ವಜಾ, ಪರೀಕ್ಷೆಗೆ ಕುತ್ತು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು ನವೆಂಬರ್ 26: ಹಾಜರಾತಿ ಕೊರತೆ ಹಿನ್ನೆಲೆ ಪ್ರಾಂಶುಪಾಲರ ಮೇಲೆ ಹಲ್ಲೆ ಮಾಡಿದ್ದ ವಿದ್ಯಾರ್ಥಿಗಳಿಗೆ ಬಿಕಾಂ, ಬಿಬಿಎಂ ಪರೀಕ್ಷೆ ಬರೆಯಲು ಬೇಕಾದ ಹಾಲ್ ಟಿಕೇಟ್ ನೀಡಿರಲಿಲ್ಲ. ಈ ಬಗ್ಗೆ ಪ್ರತಿಭಟಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು ಕಾಲೇಜಿನ ವಿರುದ್ಧ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ರದ್ದು ಪಡಿಸಿದೆ.
ಹಾಜರಾತಿ ಪ್ರಕರಣ ಹಿನ್ನೆಲೆ ಪ್ರಾಂಶುಪಾಲರ ಮೇಲೆ ಹಲ್ಲೆ ಮಾಡಿದ್ದ ವಿದ್ಯಾರ್ಥಿ ಮೊಹಮ್ಮದ್ ಸಹನವಾವಾಜ್ ನನ್ನು ಅ.24ರಂದು ಪೊಲೀಸರು ಬಂಧಿಸಿದ್ದರು. ಈ ಹಲ್ಲೆ ನಡೆಸಿದ ಸಹನವಾವಾಜ್ ಇನ್ನೂ ಬಿಡುಗಡೆಗೊಂಡಿಲ್ಲ.[ಮಂಗಳೂರು: ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿ ಹಲ್ಲೆ]

Milegres college rit petition quashed by high court

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾತಿ ಕೊರತೆ ಹಿನ್ನಲೆಯಲ್ಲಿ 22 ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಲಾಗಿತ್ತು. ಆದರೆ ಇದೀಗ ರಾಜ್ಯ ಹೈಕೋರ್ಟ್ ಪರೀಕ್ಷೆ ಬರೆಯಲು ಕಡ್ಡಾಯವಾಗಿ ಹಾಜರಾತಿ ಪಡೆಯಬೇಕು ಎಂದು ತಾಕೀತು ಮಾಡಿದ್ದಲ್ಲದೆ ಹಾಜರಾತಿ ಕೊರತೆ ಇದ್ದ ವಿದ್ಯಾರ್ಥಿಗಳು ಸಲ್ಲಿಸಿದ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.

22 ವಿದ್ಯಾರ್ಥಿಗಳು ಮಿಲಾಗ್ರಿಸ್ ಕಾಲೇಜು ಸಂಸ್ಥೆ ಪರೀಕ್ಷೆ ಪ್ರವೇಶ ಪತ್ರವನ್ನು ನೀಡಲು ನಿರಾಕರಣೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ಕೂಡಾ ನಡೆಸಿದ್ದರು. 22 ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನಿರಾಕರಣೆ ಮಾಡಲಾಗಿತ್ತು. ಅದರಲ್ಲಿ 17 ವಿದ್ಯಾರ್ಥಿಗಳು ಹಾಲ್ ಟಿಕೆಟ್ ಗಾಗಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.[ಮಂಗಳೂರು: ಮಿಲಾಗ್ರಿಸ್ ಕಾಲೇಜ್ ಪ್ರಿನ್ಸಿಪಾಲ್ ಮೇಲೆ ಹಲ್ಲೆ ನಡೆಸಿದವ ಅಂದರ್]

ರಿಟ್ ಅರ್ಜಿಯಲ್ಲಿ ವಿದ್ಯಾರ್ಥಿಗಳು ಶಾಲಾ ಎಲ್ಲಾ ಶುಲ್ಕವನ್ನು ಪಾವತಿ ಮಾಡಿರುವ ಬಗ್ಗೆ ಮತ್ತು ಒಂದನೇ ಸೆಮಿಸ್ಟರ್ ನಿಂದ 4ನೇ ಸೆಮಿಸ್ಟರ್ ವರೆಗೆ ಕಲಿತಿರುವ ಕುರಿತು ದಾಖಲೆಗಳನ್ನು ಸಲ್ಲಿಸಿದ್ದಾರೆ. ಮಾತ್ರವಲ್ಲದೆ ಈ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆಯುವ ಬುದ್ದಿವಂತ ವಿದ್ಯಾರ್ಥಿಗಳೆಂದು ಹಾಗೂ ಬಡ ಕುಟುಂಬಗಳಿಂದ ಬಂದಿರುವುದಾಗಿ ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳು ಎಲ್ಲಾ ಕ್ಲಾಸ್‌ಗಳಿಗೂ ಹಾಜರಾಗಿರುವುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿಗಳು ರಿಟ್ ಅರ್ಜಿಯಲ್ಲಿ ವಿಶೇಷವಾಗಿ ಕಾಲೇಜು ನಿಯಮಿತ ಹಾಜರಾತಿ ಕೊರತೆ ಬಗ್ಗೆ ತಿಳಿಸಿರಲಿಲ್ಲ ಎಂದು ಆರೋಪಿಸಿದ್ದಾರೆ.

ಆದರೆ ಕಾಲೇಜು ಪರ ವಕೀಲರು ಹಾಜರಾತಿಯ ಕೊರತೆಯ ಬಗ್ಗೆ ಸರಿಯಾದ ದಾಖಲೆಗಳನ್ನು ನೀಡಿದ್ದಾರೆ. ಮಾತ್ರವಲ್ಲದೆ ಕಾಲೇಜು ಪರ ವಕೀಲರು ವಿದ್ಯಾರ್ಥಿ ಮತ್ತು ಪೋಷಕರಿಗೆ ಹಾಜರಾತಿ ಕೊರತೆ ಬಗ್ಗೆ ಮೊದಲೇ ತಿಳಿಸಿರುವುದಾಗಿ ದಾಖಲೆಗಳನ್ನು ಒದಗಿಸಿದ್ದಾರೆ. ಇದಲ್ಲದೆ ಕಾಲೇಜು ನೋಟಿಸ್ ಬೋರ್ಡಲ್ಲಿಯೂ ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಗಳ ಹೆಸರನ್ನು ನಮೂದಿಸಿರುವ ಬಗ್ಗೆ ತಿಳಿಸಿದ್ದಾರೆ. ಶೇ. 75 ಹಾಜರಾತಿಗೂ ಹೆಚ್ಚು ಕೊರತೆಯನ್ನು ಹೊಂದಿದ್ದರಿಂದ ಹಾಲ್ ಟಿಕೇಟ್ ನೀಡಿಲ್ಲ ಎಂದು ಅವರು ವಾದ ಮಂಡಿಸಿದ್ದರು.
ವಿದ್ಯಾರ್ಥಿಗಳು ಸಲ್ಲಿಸಿದ ರಿಟ್ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್ ಈ ಸಂದರ್ಭದಲ್ಲಿ ಕಡ್ಡಾಯವಾಗಿ ಶೇ. 75 ಹಾಜರಾತಿ ಇರಬೇಕು ಎಂದು ತಾಕೀತು ಮಾಡಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Student assault on principle in Mangaluru Milegres college, for refusel to exam due to lack of attendance. This rit petition quashed by court
Please Wait while comments are loading...