ಮಂಗಳೂರು ರೈಲು ನಿಲ್ದಾಣದಲ್ಲಿ ಸುರಕ್ಷತೆ ಕಾಪಾಡಲು ಸಿಬ್ಬಂದಿ ಕೊರತೆ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಜುಲೈ 18 : ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಜನರ ಸುರಕ್ಷತೆಗಾಗಿ ಮೆಟಲ್ ಡಿಟೆಕ್ಟರ್ ಆಳವಡಿಸಲಾಗಿದೆ. ಆದರೆ, ಮೆಟಲ್ ಡಿಟೆಕ್ಟರ್ ನೆಪ ಮಾತ್ರಕ್ಕಿದ್ದು, ರೈಲ್ವೆ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ರೈಲು ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದಂತೆ ಟಿಕೆಟ್ ಕೌಂಟರ್ ಬಳಿ 3 ಮೆಟಲ್ ಡಿಟೆಕ್ಟರ್‌ ಅಳವಡಿಸಲಾಗಿದೆ. ಟಿಕೆಟ್ ಪಡೆದ ಪ್ರಯಾಣಿಕರು ಇವುಗಳನ್ನು ದಾಟಿಯೇ ಮುಂದೆ ಸಾಗಬೇಕು. ಆದರೆ, ಯಾರೂ ಸಹ ಇದನ್ನು ಬಳಸದೇ ನೇರವಾಗಿ ಫ್ಲಾಟ್‌ ಫಾರಂನತ್ತ ತೆರಳುತ್ತಿದ್ದಾರೆ. [ರೈಲಿನಲ್ಲಿ ತೊಂದರೆಯಾದರೆ 182 ಸಂಖ್ಯೆಗೆ ಕರೆ ಮಾಡಿ]

Mangaluru central railway station

ಮೆಟಲ್ ಡಿಟೆಕ್ಟರ್ ದಾಟಿಯೇ ಜನರು ಮುಂದೆ ಸಾಗಲು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ಡಿಟೆಕ್ಟರ್‌ಗಳನ್ನು ಫ್ಲಾಟ್‌ ಫಾರಂಗೆ ಪ್ರವೇಶಿಸುವ ಜಾಗದಲ್ಲಿಡುವ ಬದಲು ಪಕ್ಕದಲ್ಲಿ ಇಡಲಾಗಿದೆ. ಟಿಕೇಟು ಪಡೆದ ವ್ಯಕ್ತಿ ವಾಪಾಸು ಬಂದು ಇದರ ಮೂಲಕ ಸಾಗಬೇಕು. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಟಿಕೇಟು ಪಡೆದವರು ಇಲ್ಲಿಗೆ ಬರದೇ ನೇರವಾಗಿ ಮುಂದೆ ಸಾಗುತ್ತಿದ್ದಾರೆ. [ರೈಲ್ವೆ ಶೌಚಾಲಯ ವಿನ್ಯಾಸಕ್ಕೆ ಪ್ರಶಸ್ತಿ ಪಡೆದ ಮಣಿಪಾಲ ವಿದ್ಯಾರ್ಥಿ]

ಸಿಬ್ಬಂದಿ ಕೊರತೆ ಸಬೂಬು : ಈ ಡಿಟೆಕ್ಟರ್‌ಗಳ ಮೂಲಕ ಪ್ರಯಾಣಿಕರು ಫ್ಲಾಟ್‌ ಫಾರಂ ನೊಳಗೆ ಪ್ರವೇಶಿಸುವಂತೆ ಕಡ್ಡಾಯಗೊಳಿಸಲು ಸಿಬ್ಬಂದಿ ಕೊರತೆ ಇದೆ ಎನ್ನುತ್ತಾರೆ ಅಧಿಕಾರಿಗಳು. ಸುರಕ್ಷತೆಯ ನಿಟ್ಟಿನಲ್ಲಿ ಅತ್ಯಂತ ಮಹತ್ವವಾದ ವ್ಯವಸ್ಥೆಗೆ ಸಿಬ್ಬಂದಿಯಿಲ್ಲ ಕೈ ಕೈಕಟ್ಟಿ ಕುಳಿತಿರುವುದು ಅಚ್ಚರಿಗೆ ಕಾರಣವಾಗಿದೆ. [ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಬಂತು ಎಸ್ಕಲೇಟರ್]

ನಿಲ್ದಾಣದಲ್ಲಿರುವ ವಾಹನ ಸ್ಕ್ಯಾನರ್ ಸಹ ಕಾರ್ಯಾಚರಿಸುತ್ತಿಲ್ಲ, ಹಾಗಾಗಿ ಅವುಗಳು ಇದ್ದರೂ ಪ್ರಯೋಜನ ವಿಲ್ಲದಂತಾಗಿವೆ. ಇವುಗಳನ್ನು ನಿರ್ವಹಿಸುವ ಗುತ್ತಿಗೆಯನ್ನು ಬೇರೆ ಸಂಸ್ಥೆಗೆ ವಹಿಸಿಕೊಡುವ ಬಗ್ಗೆಯೂ ಚಿಂತನೆ ನಡೆದಿದೆ.

'ರೈಲ್ವೆ ನಿಲ್ದಾಣದಲ್ಲಿ ಭದ್ರತೆ ಬಗ್ಗೆ ಇರುವ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಇಲಾಖೆಯ ಕೆಲಸ. ಒಂದು ವೇಳೆ ಸಿಬ್ಬಂದಿ ಕೊರತೆ ಇದ್ದರೆ ತಾತ್ಕಾಲಿಕವಾಗಿ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಬಳಸಬಹುದು' ಎನ್ನುತ್ತಾರೆ ಮಂಗಳೂರು ರೈಲು ಬಳಕೆದಾರರ ಹಿತರಕ್ಷಣಾ ವೇದಿಕೆಯ ಸುದರ್ಶನ್ ಪುತ್ತೂರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Three metal detectors installed at Mangaluru central railway station for safety of the passengers. But, passengers not using it. Railway police facing shortage of staff to using metal detector.
Please Wait while comments are loading...