ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮುದ್ರವಿಲ್ಲದ ಊರಿನ ಹುಡುಗಿಯ ಅದ್ಭುತ ಸರ್ಫಿಂಗ್ ಸಾಧನೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಆಗಸ್ಟ್ 08 : ಸಮುದ್ರವೇ ಇಲ್ಲದ ಊರಿನ ಹುಡುಗಿ, ಭಾರತದ ನಂಬರ್ ವನ್ ಕಿರಿಯ ಸರ್ಫರ್ ಎಂದು ಸಾಧನೆ ಮಾಡಿದ ಕಥೆ ಇದು. 3ನೇ ತರಗತಿಯಲ್ಲಿ ಓದುವಾಗಲೇ ನೀರಿನ ಜೊತೆ ಆಟ ಆರಂಭಿಸಿದ ಈಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಬೇಟೆಯಾಡಿದ್ದಾಳೆ.

ಪುತ್ತೂರಿನ ಕಲ್ಲೇಗ ನಿವಾಸಿ ಸಿಂಚನಾ ಡಿ.ಗೌಡ (15) ಸುಧಾನ ವಿದ್ಯಾಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿನಿ. ಕಠಿಣ ಸ್ಪರ್ಧೆಯೆಂದೇ ಪರಿಗಣಿಸಿರುವ ಸರ್ಫಿಂಗ್‌ನಲ್ಲಿ ಅಭ್ಯಾಸ ನಿರತ 6 ತಿಂಗಳಲ್ಲಿ ಅಂತಾರಾಷ್ಟ್ರೀಯ ಪದಕ ಗಳಿಸಿ ಸಾಧನೆ ಮಾಡಿದ್ದಾಳೆ.[ರಿಯೋ ಒಲಿಂಪಿಕ್ಸ್ 2016: ಅ.08 ಭಾರತ ಆಡಲಿರುವ ಆಟೋಟಗಳು]

ಮೊದಲು ಪರ್ಲಡ್ಕ ಬಾಲವನದಲ್ಲಿ ಈಜು ಅಭ್ಯಾಸ ಆರಂಭಿಸಿದ ಸಿಂಚನಾಗೆ ಅಂತರಾಷ್ಟ್ರೀಯ ಈಜುಪಟು ಪಾರ್ಥ ವಾರಾಣಾಸಿ ತರಬೇತಿ ನೀಡಿದರು. ಸದ್ಯ, ಮೂಲ್ಕಿ ಮಂತ್ರ ಸರ್ಫ್ ಕ್ಲಬ್‌ನಲ್ಲಿ ಧ್ರುವದಾಸ್, ಕಿರಣ್ ಕುಮಾರ್ ತರಬೇತಿ ನೀಡುತ್ತಿದ್ದಾರೆ. ರಜಾ ಅವಧಿಯಲ್ಲಿ ಈಕೆ ತರಬೇತಿ ಪಡೆಯುತ್ತಾಳೆ. ಉಳಿದ ದಿನಗಳಲ್ಲಿ ಬಾಲವನದಲ್ಲಿ ಪೂರ್ವ ತರಬೇತಿ ಪಡೆಯುತ್ತಾಳೆ.[ಕೊಡಗಿನ ಈ ಜೋಡಿ, ಮೋಟರ್ ಕ್ರೀಡೆಯಲ್ಲಿ ಮೋಡಿ!]

'ಸರ್ಫಿಂಗ್ ಮಾಡುವುದು ಎಷ್ಟು ಕಠಿಣವೋ ಹಾಗೆಯೇ ಅದರ ನಿರ್ವಹಣೆ ವೆಚ್ಚವೂ ಹೆಚ್ಚು. ಸರ್ಫ್ ಬೋರ್ಡ್‌ನ ಆರಂಭಿಕ ಮೊತ್ತ 50 ಸಾವಿರ, ಇದನ್ನು ಪಾವತಿಸದೆ ಸ್ಪರ್ಧೆಗೆ ತೆರಳುವಂತಿಲ್ಲ. ತರಬೇತಿಗೆ ತೆರಳುವ ಸಂಚಾರದ ಖರ್ಚು, ಹೊರ ರಾಜ್ಯದಲ್ಲಿ ಸ್ಪರ್ಧೆಗೆ ತೆರಳಬೇಕಾದರೆ ಹೆಚ್ಚು ಖರ್ಚಾಗುತ್ತದೆ. ವರ್ಷಕ್ಕೆ ಕನಿಷ್ಟ 3 ಲಕ್ಷ ಖರ್ಚು ಮಾಡಬೇಕು' ಎನ್ನುತ್ತಾರೆ ಸಿಂಚನಾ ತಾಯಿ ಮೀನಾಕ್ಷಿ ಡಿ.ಗೌಡ....[ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ದಾರುಣ್ ರಿಯೋಗೆ ಅರ್ಹತೆ]

ಸಾಧನೆ ಮಾಡಲು ಸಹಾಯದ ಅಗತ್ಯವಿದೆ

ಸಾಧನೆ ಮಾಡಲು ಸಹಾಯದ ಅಗತ್ಯವಿದೆ

ಸರ್ಫಿಂಗ್‌ನಲ್ಲಿ ಸಾಧನೆ ತೋರುವ ಛಲ, ಆಸಕ್ತಿ ಸಿಂಚನಾಗೆ ಇದೆ. ದೂರ-ದೂರದ ಊರಗಳಲ್ಲಿ ಸ್ಪರ್ಧೆ ಇರುತ್ತದೆ. ಈ ಇಲ್ಲಿಯ ತನಕ ಸಿಂಚನಾ ಸಾಧನೆಗೆ ಅನೇಕರು ಸಹಕಾರ ನೀಡಿದ್ದಾರೆ. ಆಗಸ್ಟ್‌ನಲ್ಲಿ ಕೊವೆಲಂಬಾದಲ್ಲಿ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆ ನಡೆಯಲಿದೆ. ಇದಕ್ಕೆ ಆರ್ಥಿಕ ಸಹಕಾರ ನೀಡುವವರ ಅಗತ್ಯವಿದೆ ಎನ್ನುತ್ತಾರೆ ಸಿಂಚನಾ.

ವಿದೇಶಿ ಸ್ಪರ್ಧಿಗಳ ನಡುವೆ ಸೆಣಸು

ವಿದೇಶಿ ಸ್ಪರ್ಧಿಗಳ ನಡುವೆ ಸೆಣಸು

2014ರಲ್ಲಿ ಎಸ್ಎಫ್ಐ ವತಿಯಿಂದ ತಮಿಳುನಾಡಿನ ಮಹಾಬಲಿಪುರಂ ಬೀಚ್‌ನಲ್ಲಿ ನಡೆದ ಕೊವಲಾನ್ ಪಾಯಿಂಟ್ ಕ್ಲಾಸಿಕ್ ಸರ್ಫಿಂಗ್ ಅಂತಾರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯಲ್ಲಿ ವಿದೇಶಿ ಸ್ಪರ್ಧೆಗಳ ಮಧ್ಯೆ ದ್ವಿತೀಯ ಸ್ಥಾನವನ್ನು ಸಿಂಚನಾ ಗಳಿಸಿದ್ದಾಳೆ.

4 ಕಂಚಿನ ಪದಕ ಪಡೆದಿದ್ದಾಳೆ

4 ಕಂಚಿನ ಪದಕ ಪಡೆದಿದ್ದಾಳೆ

ಸಿಂಚನಾ 2015ರ ಆಗಸ್ಟ್ ನಲ್ಲಿ ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. 2015ರ ಸೆಪ್ಟೆಂಬರ್‌ನಲ್ಲಿ ನಡೆದ ಚೆನ್ನೈನ ಕೋವಲಾಂಗ್ ಪ್ಯಾಂಟ್ ನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದಾಳೆ. 2015 ರಲ್ಲಿ ಕೊವೆಲಿಂಗ್ ಪ್ಯಾಂಟ್ ನಲ್ಲಿ ನಡೆದ ಏಶಿಯನ್ ಸಫಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಥಮ ಸುತ್ತಿನಲ್ಲಿಯೇ ಸೆಮಿಫೈನಲ್ ಗೆ ಆಯ್ಕೆಯಾಗಿದ್ದಾಳೆ. ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ನಾಲ್ಕು ಕಂಚಿನ ಪದಕ ಪಡೆದಿದ್ದಾಳೆ.

ಮಧ್ಯಮ ವರ್ಗದ ಕುಟುಂಬ

ಮಧ್ಯಮ ವರ್ಗದ ಕುಟುಂಬ

ಸಿಂಚನಾ ಕುಟುಂಬ ಮಧ್ಯಮ ವರ್ಗದ್ದು. ತಾಯಿ ಎಲ್ಐಸಿ ಏಜೆಂಟ್. ಅದರಿಂದಲೇ ಈಕೆಯ ಕ್ರೀಡಾ ಕಾರ್ಯಕ್ಕೆ ನೆರವಾಗಬೇಕು. ಇಲ್ಲಿಯ ತನಕ ಹೇಗೂ ನಿಬಾಯಿಸಿದ್ದಾಯಿತು. ಮುಂದಕ್ಕೆ ಅಂತರಾಷ್ಟ್ರೀಯ ಮಟ್ಟಕ್ಕೆ ತೆರಳಲು ಆರ್ಥಿಕ ಸಹಕಾರದ ಅವಶ್ಯಕತೆ ಇದೆ ಎನ್ನುತ್ತಾರೆ ಸಿಂಚನಾ ತಾಯಿ

ಸಾಕ್ಷ್ಯ ಚಿತ್ರ ತಯಾರಿಸಲಾಗಿದೆ

ಸಾಕ್ಷ್ಯ ಚಿತ್ರ ತಯಾರಿಸಲಾಗಿದೆ

ಸಿಂಚನಾ ಅವರ ಕಲ್ಲೇಗದ ಮನೆಯಲ್ಲಿ ನೂರಾರು ಪದಕ, ಪ್ರಶಸ್ತಿ ಪತ್ರಗಳು ಆಕೆಯ ಸಾಧನೆಯನ್ನು ಹೇಳುತ್ತಿವೆ. ಈಕೆಯ ಸರ್ಫಿಂಗ್ ಕಂಡು ಜರ್ಮನಿಯವರು ಸಾಕ್ಷ್ಯ ಚಿತ್ರ ತಯಾರು ಮಾಡಿದ್ದಾರೆ. ಸಿಂಚನಾ ಸಾಧನೆಗೆ ಅಕ್ಕ ಶಿವಾನಿ ಅವರು ಬೆಂಬಲ ನೀಡುತ್ತಿದ್ದಾರೆ.

English summary
Sinchana V.Gowda 15-year-old from Puttur, Dakshina Kannada has become one of the India's rising young surfers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X