ಬಂಟ್ವಾಳದಲ್ಲಿ ನೀರಿನಲ್ಲಿ ಮುಳುಗಿ ದಂತ ವೈದ್ಯಕೀಯ ವಿದ್ಯಾರ್ಥಿ ಸಾವು

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 29: ಕೆರೆಗೆ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ದಂತವೈದ್ಯಕೀಯ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ನಡೆದಿದೆ . ಮೃತಪಟ್ಟ ವಿದ್ಯಾರ್ಥಿಯನ್ನು ಕೇರಳ ಮೂಲದ ಡೆನ್ನಿಸ್ ಎಂದು ಗುರುತಿಸಲಾಗಿದೆ .

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದ ರಾಜ್ಯ ಹೆದ್ದಾರಿಯ ಕಿರುಸೇತುವೆ ಜಲಾವೃತ

ಮಂಗಳೂರು ಹೊರವಲಯದ ದೇರಳಕಟ್ಟೆ ದಂತ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ತಂಡ ನಿನ್ನೆ ರಜೆ ಇದ್ದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲ್ಲೂಕಿನ ಮಂಜಲ್ ಪಾದೆ ಎಂಬಲ್ಲಿನ ಕೆರೆಯಲ್ಲಿ ಈಜಲು ತೆರಳಿತ್ತು . ಆಳವಾದ ಕೆರೆಯಲ್ಲಿ ಸ್ನೇಹಿತರೊಂದಿಗೆ ನೀರಿಗಿಳಿದ ಡೆನ್ನಿಸ್ ಈಜಲಾಗದೆ ಕೆರೆಯಲ್ಲಿ ಮುಳುಗಿದ್ದರು.

Medical students drowns at Bantwal

ಈ ಸಂದರ್ಭದಲ್ಲಿ ಸ್ನೇಹಿತರು ಸಹಾಯಕ್ಕೆ ನೀರಿಗೆ ಧುಮುಕಿದರೂ ಡೆನ್ನಿಸ್ ಅವರನ್ನು ಮೇಲೆತ್ತಲು ಸಾಧ್ಯವಾಗಿರಲಿಲ್ಲ . ಆಳವಾದ ಕೆರೆಯಲ್ಲಿ ಕೆಸರು ತುಂಬಿದ ಹಿನ್ನೆಲೆಯಲ್ಲಿ ಡೆನ್ನಿಸ್ ಮೇಲೆ ಬರಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

.ಘಟನೆ ಕುರಿತು ಮಾಹಿತಿ ಪಡೆದ ಗೂಡಿನ ಬಳಿಯ ಮುಳುಗು ತಜ್ಞರು ಸ್ಥಳಕ್ಕೆ ಧಾವಿಸಿ ಡೆನ್ನಿಸ್ ಅವರ ಶವವನ್ನು ಮೇಲೆತ್ತಿದ್ದಾರೆ .ಈ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dental student drowns in the lake while swimming at Bantwal. The deceased is identified as Dennis from Kerela. It is said to be that he was a student of Derlakatte Dental college.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ