ಮಂಗಳೂರಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಮಾಫಿಯಾ ದಂಧೆಯ ಕಥೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜುಲೈ 19 : ಇದೊಂದು ಮಂಗಳೂರಿನಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಮಾಫಿಯಾ ದಂಧೆಯ ಕಥೆ. ಹಣ ಕಂಡರೆ ಹೆಣ ಬಾಯಿ ಬಿಡುತ್ತದೆ ಅನ್ನುವ ಗಾದೆ ಮಾತಿನಂತೆ ಹಣಕ್ಕಾಗಿ ಎಂತಹ ನೀಚ ಕೆಲಸಕ್ಕೂ ಮುಂದಾಗುತ್ತಾರೆ ಅನ್ನುವುದು ದಿಟ.

ನಾವಿಲ್ಲಿ ಹೇಳ ಹೊರಟಿರುವುದು ವಿದೇಶಕ್ಕೆ ಉದ್ಯೋಗ ನಿಮಿತ್ತ ತೆರಳುವವರ ಜೇಬು ಖಾಲಿ ಮಾಡುವ ದಂಧೆಯ ಕುರಿತು ಮಾತ್ರವಲ್ಲ, ದೇಹಕ್ಕೆ ಯಾವುದೇ ರೋಗ ಬಾಧಿಸದಿದ್ದರೂ ನಿಮಗೆ ಇಂತಹ ರೋಗವಿದೆ ಎಂಬ ನಕಲಿ ಸರ್ಟಿಫಿಕೇಟ್ ನೀಡುವವರ ಬಗ್ಗೆ.[ಕೆಂಪೇಗೌಡ ವಿ.ನಿಲ್ದಾಣದಲ್ಲಿ 24X 7 ಆರೋಗ್ಯ ಸೇವೆ ಈಗ ಲಭ್ಯ]

ಗಲ್ಫ್‌ಗೆ ಹೊರಡುವ ಮುನ್ನ ವೈದ್ಯಕೀಯ ಪರೀಕ್ಷೆ ಮಾಡಿಸುವುದು ಕಡ್ಡಾಯ. ಪರೀಕ್ಷೆಯಲ್ಲಿ ಪಾಸ್ ಆದರೆ ನಿಮ್ಮ ಕನಸಿನ ವಿಮಾನ ಏರಬಹುದು. ಮೆಡಿಕಲ್ ಸೆಂಟರ್ ನವರೇನಾದರೂ ಎಡವಟ್ಟು ಮಾಡಿಕೊಂಡರೆ ನಿಮಗೆ ಹಳೆಯ ಹೆಂಡತಿಯ ಪಾದವೇ ಗತಿ! ಇಲ್ಲಿ ನಾವು ಹೇಳ ಹೊರಟಿರುವುದು ಮಂಗಳೂರಿನಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿಕೊಂಡ ಇಬ್ಬರ ಅನುಭವವನ್ನು.[ಆಟಿಸಮ್ ಕಾಯಿಲೆ ಗುಣಪಡಿಸಿದ ಹುಬ್ಬಳ್ಳಿ ವೈದ್ಯರು]

Medical and Fitness mafia galore in Mangaluru

ಕೇರಳ ಮೂಲದವರೊಬ್ಬರು ಮಂಗಳೂರಿನ ಮೆಡಿಕಲ್ ಸೆಂಟರ್‌ನಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡರು. ರಿಪೋರ್ಟ್‌ಗಾಗಿ ಮರುದಿನ ಬರುವಂತೆ ಹೇಳಿದ್ದರು. ಅದರಂತೆ ಮರುದಿನ ಹೋದ ಅವರಿಗೆ ರಿಪೋರ್ಟ್ ನೀಡಲಿಲ್ಲ. ಅನ್ ಫಿಟ್ ಆಗಿರುವುದರಿಂದ ರಿಪೋರ್ಟ್ ನೀಡಲಾಗುವುದಿಲ್ಲ. ಫಿಟ್ ಇದ್ದರೆ ಮಾತ್ರ ರಿಪೋರ್ಟ್ ಕೈಗೆ ಸಿಗುತ್ತದೆ ಅನ್ನುವ ಉತ್ತರ ಬಂತು.[ಯೋಗದಿಂದ ಸೊಂಪಾದ ಕೂದಲು ಉಳಿಸಿಕೊಳ್ಳಲು ಸಾಧ್ಯ]

ಕೆಲ ದಿನಗಳ ನಂತರ ವೆಬ್ ಸೈಟ್ ತಡಕಾಡಿದಾಗ ಟಿಬಿ ಎಂದು ಮೆಡಿಕಲ್ ಸೆಂಟರ್ ರಿಪೋರ್ಟ್ ಅಪ್ಲೋಡ್ ಮಾಡಿತ್ತು. 28 ವರ್ಷದ ಕಂಪ್ಯೂಟರ್ ಟೆಕ್ನಿಷಿಯನ್ ಆಗಿರುವ ಯುವಕನಿಗೆ ಮಂಗಳೂರಿನ ಮೆಡಿಕಲ್ ಸೆಂಟರ್‌ನ ರಿಪೋರ್ಟ್ ಕಂಡು ಆಕಾಶವೇ ಕಳಚಿ ಬಿದ್ದಂತಾಗಿತ್ತು. ಈತ ಈ ಬಗ್ಗೆ ಹಲವು ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿದ. ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲೂ ಪರೀಕ್ಷೆ ಮಾಡಿಸಿದಾಗಲೂ ಈತನಿಗೆ ಟಿಬಿ ಇಲ್ಲ ಎಂದು ವರದಿ ಬಂತು.[ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯ ಕಾಲೇಜು ಸ್ಥಾಪನೆ]

ಹಣಕೊಟ್ಟರೆ ಫಿಟ್ ಎಂಬ ವರದಿ : ಇನ್ನೊಬ್ಬರಿಗೂ ಇಂತಹ ಸಮಸ್ಯೆ ಮಂಗಳೂರಿನ ಮೆಡಿಕಲ್ ಸೆಂಟರ್‌ನಲ್ಲಿ ಆಗಿತ್ತು. ಆದರೆ ಅವರು ಅದನ್ನು ತಮ್ಮ ಪ್ರಭಾವ ಬಳಸಿ ಕ್ಲೀಯರ್ ಮಾಡಿಕೊಂಡಿದ್ದರು. ಇದರ ಹಿಂದೆ ಇರುವುದು ದೊಡ್ಡ ಮಾಫಿಯಾದ ಕೈವಾಡ. ನಿಮಗೆ ಮೆಡಿಕಲ್ ಸೆಂಟರ್‌ ಅನ್ ಫಿಟ್ ರಿಪೋರ್ಟ್ ನೀಡಿದರೆ, ಅದನ್ನು ಫಿಟ್ ಮಾಡಿಸಿಕೊಳ್ಳುವ ನೂರಾರು ಟ್ರಾವೆಲ್ ಏಜೆನ್ಸಿಗಳಿವೆ. ನೀವು ಆವರ ಕೈಗೆ 15, 20, 30 ಸಾವಿರ ಕೊಟ್ಟರೆ ಅನ್ ಫಿಟ್ ಆದವರು ಕ್ಷಣ ಮಾತ್ರದಲ್ಲಿ ಫಿಟ್ ಆಗುತ್ತಾರೆ.

ಮಂಗಳೂರಿನ ಮೆಡಿಕಲ್ ಸೆಂಟರ್‌ನಲ್ಲಿ ಟೆಸ್ಟ್ ನಡೆಸಿದರೆ ಬೇರೆ ಕಡೆಗಿಂತ 300 ರೂ. ಇಲ್ಲಿ ಜಾಸ್ತಿ ಮಾತ್ರವಲ್ಲ ಇಂಜೆಕ್ಷನ್ ಹಣವನ್ನು ಮೊದಲೇ ಪಡೆಯುತ್ತಾರೆ. ಅನ್ ಫಿಟ್ ಆದವರು ಈ ಹಣವನ್ನು ನೀಡಬೇಕಾಗಿಲ್ಲ. ಆದರೆ, ಮಂಗಳೂರಿನಲ್ಲಿ ಫಿಟ್, ಅನ್ ಫಿಟ್ ಆದವರಿಂದಲೂ ಹಣ ಪೀಕಿಲಾಗುತ್ತದೆ. ಬೇರೆ ರಾಜ್ಯಗಳಲ್ಲಿ ಮೆಡಿಕಲ್ ಟೆಸ್ಟ್ ನಡೆಸಿದ ಮರುದಿನ ರಿಪೋರ್ಟ್ ಕೈಗೆ ಸಿಗುತ್ತದೆ. ಒಂದು ವೇಳೆ ಸಣ್ಣ ಮಟ್ಟಿನ ಆರೋಗ್ಯ ಏರುಪೇರುಗಳಿದ್ದಲ್ಲಿ ಟ್ಯಾಬ್ಲೆಟ್ ಸೇವಿಸಿ ಸರಿಪಡಿಸುವ ಅವಕಾಶ ಇರುತ್ತದೆ. ಆದರೆ ಮಂಗಳೂರಿನಲ್ಲಿ ಅಂತಹ ಯಾವುದೇ ಅವಕಾಶಗಳಿಲ್ಲ.

ಇದು ಒಂದಿಬ್ಬರ ಕಥೆಯಲ್ಲ. ಗಲ್ಫ್‌ಗೆ ಹೋಗುವ ಪ್ರತಿಯೊಬ್ಬರೂ ಮಂಗಳೂರಿನ ಮೆಡಿಕಲ್ ಸೆಂಟರ್‌ಗಳ ಮಾಫಿಯಾಕ್ಕೆ ಬಲಿಯಾದವರೇ ಆಗಿರುತ್ತಾರೆ. ಮೆಡಿಕಲ್ ಮಾಫಿಯಾ ರೀತಿಯಲ್ಲಿಯೇ ವ್ಯಾಪಕ ವೀಸಾ ಏಜೆನ್ಸಿ ದಂಧೆಗಳು ಕರಾವಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಗಲ್ಫ್‌ನ ಸುಂದರ ಕನಸು ಕಂಡು ಅಲ್ಲಿ ಇಲ್ಲಿ ಸಾಲ ಮಾಡಿ, ಹೆಂಡತಿ ತಾಯಿಯ ಒಡವೆಗಳನ್ನು ಮಾರಿ ವೀಸಾ ಏಜೆನ್ಸಿಗಳ ವಂಚಕತನಕ್ಕೆ ಬಯಲಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.

ಮಂಗಳೂರಿನಲ್ಲಿ 300 ಕ್ಕೂ ಹೆಚ್ಚು ಅಧಿಕ ವೀಸಾ ಟ್ರಾವೆಲ್ಸ್‌ಗಳಿದ್ದು, ಮಂಗಳೂರು ಏರ್‌ಪೋರ್ಟ್ ಟ್ರಿಪ್ ಎನ್ನುವ ನವೀನ ಶೈಲಿನ ಮೂಲಕ ದುಡ್ಡು ಪೀಕಿಸುವ ದಂಧೆ ನಡೆಯುತ್ತಿದೆ. ಈ ಬಗ್ಗೆ ಎಚ್ಚರದಲ್ಲಿರುವುದು ಒಳ್ಳೆಯದು.
ಈ ನಕಲಿ ದಂಧೆಯ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Medical and Fitness mafia galore in Mangaluru. Medical centres looting people in the name of medical and fitness test.
Please Wait while comments are loading...