ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ನೀರಿನ ಬಿಲ್ ಕಟ್ಟದಿದ್ರೆ ಪತ್ರಿಕೆಯಲ್ಲಿ ಹೆಸರು ಪ್ರಕಟ!

|
Google Oneindia Kannada News

ಮಂಗಳೂರು, ಅ.10 : ಮಂಗಳೂರು ಮಹಾನಗರ ಪಾಲಿಕೆ ಬಾಕಿ ಇರುವ ನೀರಿನ ಬಿಲ್ ಪಾವತಿ ಮಾಡಲು ಜನರಿಗೆ ಹದಿನೈದು ದಿನಗಳ ಗಡುವು ನೀಡಿದೆ. ಬಿಲ್ ಪಾವತಿಸದವರ ವಿರುದ್ಧ ಕ್ರಮ ಕೈಗೊಳ್ಳಲು ಪಾಲಿಕೆ ತೀರ್ಮಾನ ಕೈಗೊಂಡಿದೆ.

ಕೆಆರ್‌ಎಸ್, ಕಬಿನಿ ಜಲಾಶಯಗಳಿಂದ ಕುಡಿಯಲು ನೀರು, ಗದ್ದೆಗಳಿಗಿಲ್ಲಕೆಆರ್‌ಎಸ್, ಕಬಿನಿ ಜಲಾಶಯಗಳಿಂದ ಕುಡಿಯಲು ನೀರು, ಗದ್ದೆಗಳಿಗಿಲ್ಲ

ಮಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಮೇಯರ್ ಕವಿತಾ ಸನಿಲ್, 'ಕುಡಿಯುವ ನೀರಿನ ಬಿಲ್ ನೀಡಲಾಗಿದ್ದರೂ 50 ಸಾವಿರ ಜನರು ಬಿಲ್ ಪಾವತಿ ಮಾಡಿಲ್ಲ' ಎಂದು ಹೇಳಿದರು. 'ಪಾಲಿಕೆ ವ್ಯಾಪ್ತಿಯಲ್ಲಿ 85 ಸಾವಿರ ನೀರಿನ ಸಂಪರ್ಕವಿದೆ, ಇವುಗಳಲ್ಲಿ ಕೇವಲ 35 ಸಾವಿರ ಸಂಪರ್ಕದ ಬಿಲ್ ಮಾತ್ರ ಪಾಲಿಕೆಗೆ ಪಾವತಿಸಲಾಗುತ್ತಿದೆ' ಎಂದರು.

MCC sets 15 days deadline to pay pending water bills

'ಪಾಲಿಕೆ ವ್ಯಾಪ್ತಿಯಲ್ಲಿ ಬಡವರು ಬಿಲ್ ಪಾವತಿಸುತ್ತಿದ್ದಾರೆ. ಆದರೆ, ಹೆಚ್ಚಿನ ಶ್ರೀಮಂತರು ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ. ನಗರದಲ್ಲಿ ಕೆಲವರು ಎರಡು ಸಾವಿರ ರೂ. ತನಕ ಬಿಲ್ ಪಾವತಿ ಮಾಡಿಲ್ಲ' ಎಂದು ಹೇಳಿದರು.

ದಕ್ಷಿಣ ಕನ್ನಡದಲ್ಲಿ ಹೆಣ್ಣು ಮಕ್ಕಳೇ ಡ್ಯಾಮ್ ಕಟ್ಟಿದ್ದಾರೆದಕ್ಷಿಣ ಕನ್ನಡದಲ್ಲಿ ಹೆಣ್ಣು ಮಕ್ಕಳೇ ಡ್ಯಾಮ್ ಕಟ್ಟಿದ್ದಾರೆ

'ನೀರಿನ ಬಿಲ್ ಪಾವತಿ ಮಾಡಲು ಇನ್ನು ಹದಿನೈದು ದಿನಗಳ ಗಡುವು ನೀಡಲಾಗುತ್ತದೆ. ನಂತರವೂ ನೀರಿನ ಬಿಲ್ ಪಾವತಿಸದಿದ್ದರೆ ಅವರ ಹೆಸರುಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.

'ಪಾಲಿಕೆ ವ್ಯಾಪ್ತಿಯಲ್ಲಿ 166 ಮಂದಿ ಒಂದು ಲಕ್ಷಕ್ಕಿಂತ ಮೇಲ್ಪಟ್ಟು ಹಣ ಬಾಕಿ ಉಳಿಸಿಕೊಂಡಿದ್ದಾರೆ. 350 ಮಂದಿ 50 ಸಾವಿರ ದಿಂದ ಒಂದು ಲಕ್ಷದ ವರೆಗಿನ ಬಿಲ್ ಪಾವತಿ ಮಾಡಿಲ್ಲ. 2780 ಮಂದಿ 10 ಸಾವಿರ ದಿಂದ 50 ಸಾವಿರ ರೂಪಾಯಿ ವರೆಗೆ ಬಿಲ್ ಬಾಕಿಗೆ ಉಳಿಸಿಕೊಂಡಿದ್ದಾರೆ' ಎಂದು ವಿವರಣೆ ನೀಡಿದರು.

English summary
Mangaluru City Corporation (MCC) Mayor Kavitha Sanil on Thursday urged the general public using water within limits to pay the amount of pending water bills within 15 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X