ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಸಾಕು ನಾಯಿಗಳಿಗೆ 'ಡಾಗ್ ಲೈಸೆನ್ಸ್' ಕಡ್ಡಾಯ!

|
Google Oneindia Kannada News

ಮಂಗಳೂರು, ಮಾರ್ಚ್ 31 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಸಾಕು ನಾಯಿಗಳಿಗೆ ಪ್ರಸಕ್ತ ವರ್ಷ 2017-18ರಿಂದ ' ಡಾಗ್ ಲೈಸೆನ್ಸ್' ಕಡ್ಡಾಯಗೊಳಿಸಲಾಗಿದೆ.

ಅದರಂತೆ ಪ್ರಥಮ ವರ್ಷದಲ್ಲಿ ಉಚಿತವಾಗಿ ಪರವಾನಿಗೆ ಪಡೆಯಬಹುದಾಗಿದ್ದು, ಮುಂದಿನ ಸಾಲಿನಿಂದ ಪ್ರತಿ ವರ್ಷಕ್ಕೆ 300 ರು ಶುಲ್ಕ ಪಾವತಿಸಿ ಪರವಾನಿಗೆಯನ್ನು ನವೀಕರಣ ಮಾಡಿಸಬೇಕು ಎಂದು ಶುಕ್ರವಾರ ಮನಪಾ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೊಳ್ಳಲಾಯಿತು.

Mcc orders to have license for pet dogs at home in Mangaluru

ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನ ಸಾಮಾನ್ಯರಿಗೆ ಉಂಟಾಗುತ್ತಿರುವ ತೊಂದರೆಯನ್ನು ತಡೆಗಟ್ಟಲು ಹಾಗೂ ಬೀದಿ ನಾಯಿಗಳ ಸಂತಾನೋತ್ಪತ್ತಿ ನಿಯಂತ್ರಿಸುವ ನಿಟ್ಟಿನಲ್ಲಿ 2016ರ ಮಾರ್ಚ್ 31ರಲ್ಲಿ ಡಾಗ್ ವೆಲ್ ಫೇರ್ ಸಮಿತಿ ಹಾಗೂ ಡಾಗ್ ಲೈಸೆನ್ಸ್ ಸಮಿತಿಯನ್ನು ರಚನೆ ಮಾಡಲು ನಿರ್ಣಯಿಸಲಾಗಿತ್ತು.

ಬೀದಿ ನಾಯಿ ಹಾಗೂ ಸಾಕು ನಾಯಿಗಳ ಸರ್ವೇ ಮಾಡಿ ಸಾಕು ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸುವುದು ಈ ಸಮಿತಿಯ ಕಾರ್ಯವಾಗಿದೆ.

ಡಾಗ್ ಲೈಸೆನ್ಸ್ ನಿಯಮಾವಳಿಗಳು

ಪಾಲಿಕೆಯಲ್ಲಿ ಎಲ್ಲಾ ಸಾಕು ನಾಯಿಗಳಿಗೆ ಪರವಾನಿಗೆ ಕಡ್ಡಾಯ. ಪರವಾನಿಗೆಗೆ ಅರ್ಜಿ ಸಲ್ಲಿಸುವಾಗ ಮಾಲೀಕರು ತಮ್ಮ ಸಾಕು ನಾಯಿಗಳಿಗೆ ಕಾಲ ಕಾಲಕ್ಕೆ ಲಸಿಕೆ ಹಾಕಿರುವ ದಾಖಲೆಯ ಪ್ರತಿಯನ್ನು ಒದಗಿಸಬೇಕು.

ಪರವಾನಿಗೆ ಅವಧಿ ಒಂದು ವರ್ಷ. ಪ್ರತಿ ವರ್ಷ ನವೀಕರಣ ಮಾಡತಕ್ಕದ್ದು, ಸಾಕು ನಾಯಿಗಳ ಮಾಲೀಕರು ಪ್ರಾಣಿಗಳ ಕಾರ್ಯತಡೆ(ಡಾಗ್ ನಿಯಮಗಳು 2001) ರಂತೆ ಅಥವಾ ಸರಕಾರದಿಂದ ಹೊರಡಿಸುವ ನಿರ್ದೇಶನಗಳನ್ನು ಪಾಲಿಸತಕ್ಕದ್ದು.

English summary
The Mcc has ordered that to have pets dogs at home the house members must have a valid license from the Mangaluru city corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X