ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಕ್ರಿಟ್ ರಸ್ತೆಗೆ ಮಹಾನಗರ ಪಾಲಿಕೆಯಿಂದ ಕತ್ತರಿ

By ಐಸಾಕ್ ರಿಚರ್ಡ್. ಮಂಗಳೂರು
|
Google Oneindia Kannada News

ಮಂಗಳೂರು, ಅಕ್ಟೋಬರ್ 12 : ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮಂಗಳೂರು ನಗರದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ, ಮಹಾನಗರ ಪಾಲಿಕೆ ನಗರದ ರಸ್ತೆಗಳಿಗೆ ಕತ್ತರಿ ಪ್ರಯೋಗ ಮಾಡಿ ಹೊಂಡಗಳನ್ನು ತೆಗೆದಿದೆ. ಇದು ಸ್ಮಾರ್ಟ್ ಸಿಟಿಗೆ ಮಹಾನಗರ ಪಾಲಿಕೆ ನೀಡುತ್ತಿರುವ ಉಡುಗೊರೆ.

ಮಂಗಳೂರು ನಗರದಲ್ಲಿ ಎಲ್ಲೆಂದರಲ್ಲಿ ಕಾಂಕ್ರಿಟ್ ರಸ್ತೆಗಳ ಕಟ್ಟಿಂಗ್ ಕಾಮಗಾರಿ ನಡೆಯುತ್ತಿದೆ. ಬಿಜೈಯಿಂದ ಸರ್ಕಿಟ್ ಹೌಸ್‌ಗೆ ಹೋಗುವ ಸುಮಾರು ಅರ್ಧ ಕಿ.ಮೀ ರಸ್ತೆಯಲ್ಲಿ 15 ಕಡೆ ರಸ್ತೆಯನ್ನು ಅಗೆಯಲಾಗಿದೆ. ಬಿಜೈ, ಕದ್ರಿ ಮತ್ತು ಬಂಟ್ಸ್ ಹಾಸ್ಟೆಲ್‌ನಂತಹ ಪ್ರಮುಖ ರಸ್ತೆಗಳಲ್ಲಿಯೇ ಕಾಂಕ್ರಿಟ್‌ ರಸ್ತೆಗೆ ಕತ್ತರಿ ಪ್ರಯೋಗ ನಡೆದಿದೆ. [ಟೆಂಡರ್ ಶ್ಯೂರ್ ರಸ್ತೆಯ ವಿಶೇಷತೆಗಳೇನು?]

mangaluru

ಪಾಲಿಕೆಯ ಕಾಮಗಾರಿಗಳಿಗೆ ಸಲಹೆ ನೀಡಲು ಖಾಸಗಿ ಸಂಸ್ಥೆಯ ಮೂಲಕ ತಾಂತ್ರಿಕ ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಯಾವುದೇ ರಸ್ತೆಯನ್ನು ಕಾಂಕ್ರಿಟ್ ರಸ್ತೆಯಾಗಿ ಪರಿವರ್ತನೆ ಮಾಡುವ ಮುನ್ನ ರಸ್ತೆಯ ಕೆಳಗೆ ಅಥವ ಅಕ್ಕಪಕ್ಕದ ನೀರಿನ ಪೈಪ್, ಒಳಚರಂಡಿ , ದೂರವಾಣಿ ಕೇಬಲ್‌ಗಳನ್ನು ಸ್ಥಳಾಂತರ ಮಾಡಬೇಕು. [ಸುಲ್ತಾನ್ ಪಾಳ್ಯ ರಸ್ತೆಯಲ್ಲಿ ಈಜಾಡಿದ ಮೊಸಳೆ!]

ಕಾಂಕ್ರಿಟ್ ಹಾಕಿದ ಬಳಿಕ ರಸ್ತೆಯನ್ನು ಪುನಃ ಆಗೆಯಬಾರದು ಎಂಬ ಉದ್ದೇಶದಿಂದ ಮೊದಲೇ ಇಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ, ಮಂಗಳೂರು ನಗರದಲ್ಲಿ ನೀರಿನ ಪೈಪ್ ರಸ್ತೆಯ ಕೆಳಗೆ ಇದ್ದು, ಅದನ್ನು ರಿಪೇರಿ ಮಾಡಲು ಕಾಂಕ್ರಿಟ್‌ಗೆ ಕತ್ತರಿ ಹಾಕಲಾಗುತ್ತಿದೆ.

road

ಮುಖ್ಯಮಂತ್ರಿಗಳ 100 ಕೋಟಿ ರೂ. ವಿಶೇಷ ಅನುದಾನದಲ್ಲಿ ನಗರದ ರಸ್ತೆಗಳನ್ನು ಕಾಂಕ್ರಿಟ್‌ ರಸ್ತೆಯಾಗಿ ಮಾಡುವ ಮೂಲಕ ಅಭಿವೃದ್ಧಿ ಸಾಧಿಸಲಾಗುತ್ತಿದೆ ಎಂದು ಹೇಳುವ ಮಹಾನಗರ ಪಾಲಿಕೆ ಆಡಳಿತ ಪಕ್ಷ ಕಾಂಗ್ರೆಸ್, ಕತ್ತರಿ ಪ್ರಯೋಗಕ್ಕೆ ಮೊದಲು ಉತ್ತರ ಕೊಡಬೇಕು ಎಂಬುದು ಜನರ ಒತ್ತಾಯವಾಗಿದೆ.

dakshina kannada
English summary
Mangalore City Corporation cutting concrete roads in the city for drinking water pipeline maintenance work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X