ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಯುವ ಮನಸ್ಸಿದ್ದವರು ಸಂಘ ಪರಿವಾರ ಸೇರಿ: ಕಾಂಗ್ರೆಸ್‌ ಕಾರ್ಪೊರೇಟರ್

|
Google Oneindia Kannada News

ಮಂಗಳೂರು, ಫೆಬ್ರವರಿ 9: ಸಾಯುವ ಮನಸ್ಸಿದ್ದವರೆಲ್ಲಾ ಸಂಘ ಪರಿವಾರಕ್ಕೆ ಸೇರಿ ಎಂದು ಹೇಳಿಕೆ ನೀಡಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಒಬ್ಬರು ವಿವಾದಕ್ಕೆ ಗುರಿಯಾಗಿದ್ದಾರೆ. ಕಾರ್ಪೊರೇಟರ್ ಅವರ ಈ ಹೇಳಿಕೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಪಾಲಿಕೆ ಕಾಂಗ್ರೆಸ್ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರು ಈ ಹೇಳಿಕೆ ನೀಡಿದ್ದು, ಅವರ ಹೇಳಿಕೆ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ. ಈ ವಿವಾದಿತ ಹೇಳಿಕೆ ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರ ಕಣ್ಣು ಕೆಂಪಗಾಗಿಸಿದೆ.

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಾಂಗ್ರೆಸ್ ವತಿಯಿಂದ ಇತ್ತೀಚೆಗೆ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರತಿಭಾ ಕುಳಾಯಿ, "ದುಡಿಯಲು ಮನಸ್ಸಿಲ್ಲದವರು ಸಂಘ ಪರಿವಾರ ಸೇರಿ. ಮರ್ಡರ್ ಮಾಡಿ ಬಂದರೆ ಸಾಕು ಜೈಲಿನಲ್ಲಿ ನಿಮಗೆ ಎಷ್ಟು ಬೇಕಾದರೂ ಅನ್ನ ಸಿಗುತ್ತದೆ. ಧರ್ಮಾರ್ಥ ನಿಮಗೆ ಜೈಲಿನಲ್ಲಿ ಅನ್ನ ಸಿಗುತ್ತದೆ," ಎಂದು ಸಂಘ ಪರಿವಾರದ ಕಾರ್ಯಕರ್ತರನ್ನು ವ್ಯಂಗ್ಯ ಮಾಡಿದ್ದರು.

MCC Congress corporator Prathiba Kulai slams at Sangha Parivar

ಹಲವಾರು ಹಿಂದೂಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರೇ ಕೊಂದಿದ್ದಾರೆ. ನಾನು ಕೂಡಾ ಹಿಂದು. ನನ್ನ ಬಣ್ಣ ಕೂಡಾ ಕೇಸರಿಯೇ. ಆದರೆ ಬಿಜೆಪಿಯವರು ಕೇಸರಿಯನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದು ಪ್ರತಿಭಾ ಕುಳಾಯಿ ಆರೋಪಿಸಿದ್ದರು.

ಸಾಯುವ ಮನಸ್ಸಿದ್ದವರೆಲ್ಲಾ ಸಂಘ ಪರಿವಾರಕ್ಕೆ ಸೇರಿ ಎಂದು ಹೇಳಿದ್ದ ಅವರು, "ಯಾರಾದರೂ ಹಿಂದೂಗಳು ಸತ್ತರೆ ಸಾಕು. ಸಂಘ ಪರಿವಾರದವರು ಸಾಮಾಜಿಕ ಜಾಲತಾಣದಲ್ಲಿ ಸತ್ತವರ ಬಗ್ಗೆ ಪ್ರಚಾರ ಮಾಡ್ತಾರೆ. ಕೋಟಿ ಕೋಟಿ ಸಂಗ್ರಹ ಆಗಿದೆ ಅನ್ನುತ್ತಾರೆ. ಆದರೆ ಮನೆಯವರಿಗೆ ಒಂದು ರುಪಾಯಿ ಸಿಗುವುದಿಲ್ಲ," ಎಂದು ಅವರು ಆರೋಪಿಸಿದ್ದರು.

"ಹಿಂದೂ ಸತ್ತರೆ ಹಿಂದೂಪರ ಸಂಘಟನೆಗಳು ಸಂಭ್ರಮಿಸುತ್ತವೆ," ಎಂದು ಹೇಳಿಕೆ ನೀಡಿದ್ದ ಪ್ರತಿಭಾ ಕುಳಾಯಿ ವಿರುದ್ಧ ಈಗ ಸಂಘ ಪರಿವಾರದ ಸಂಘಟನೆಗಳು ತಿರುಗಿ ಬಿದ್ದಿವೆ. ಪ್ರತಿಭಾ ಕುಳಾಯಿ ಅವರ ಈ ಹೇಳಿಕೆ ವಿಡಿಯೋ ಈಗ ವೈರಲ್ ಆಗಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.

English summary
Congress corporator of Mangaluru City Corporation, Prathiba Kulai slams at Sangha Parivar, saying that if anyone has to die they must join Sangha Parivar organisations. This video of her has become viral on social media now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X