ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಮನೆಗೆ ಮಂಗಳೂರು ಮೇಯರ್ ಭೇಟಿ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 6: ನಿಗೂಢವಾಗಿ ಸಾವನ್ನಪ್ಪಿದ ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಪೂಜಾರಿ ಮನೆಗೆ ಮಂಗಳೂರು ನಗರ ಪಾಲಿಗೆ ಮೇಯರ್ ಕವಿತಾ ಸನಿಲ್ ಭೇಟಿ ನೀಡಿದರು.

ಕಾವ್ಯಳಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ, ಬೇಬಿ ಪೂಜಾರಿ ಆರೋಪ

ಕಾವ್ಯ ತಂದೆ ಲೋಕೇಶ ಪೂಜಾರಿ ಹಾಗು ತಾಯಿ ಬೇಬಿ ಪೂಜಾರಿ ಅವರ ಬಳಿ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಅವರಿಗೆ ಸಾಂತ್ವಾನ ಹೇಳಿದರು.

Mayor Kavita Sanil visits Kavya Poojary’s house

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮೇಯರ್ ಕವಿತಾ ಸನಿಲ್, "ಮಗಳನ್ನು ಕಳಕೊಂಡ ದುಖ: ತಾಯಿಗೆ ಮಾತ್ರ ಗೊತ್ತು. ಕಾವ್ಯ ತಂದೆ ತಾಯಿಯವರ ಹೇಳಿಕೆಗೂ ನಡೆದಿರುವ ಘಟನೆ ಸನ್ನಿವೇಶಕ್ಕೂ ತುಂಬಾ ವ್ಯತ್ಯಾಸವಿದೆ. ಕಾವ್ಯಳ ಕೊಲೆಯೋ ಅಥವಾ ಅತ್ಮಹತ್ಯೆಯೂ ಗೊತ್ತಿಲ್ಲ. ಆದರೆ ಸರಿಯಾದ ತನಿಖೆಯಿಂದ ಕಾವ್ಯ ಕುಟುಂಬಕ್ಕೆ ನ್ಯಾಯ ದೊರಕಬೇಕು ಸತ್ಯ ಏನೆಂಬುದು ಹೊರಬರಬೇಕು," ಎಂದು ಹೇಳಿದರು.

ಅಳ್ವಾಸ ಕಾಲೇಜು ವಿದ್ಯಾರ್ಥಿನಿ ಸಾವಿನ ಸುತ್ತ ಅನುಮಾನದ ಹುತ್ತ | Oneindia Kannada

ಇಂತಹ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಗಳಾದ ಕುಮಾರಿ ಅಪ್ಪಿ, ಸಬಿತಾ ಮಿಸ್ಕಿತ್ , ಕವಿತಾ ವಾಸು, ರತಿಕಲಾ, ಅಖಿಲಾ ಅಳ್ವ ಮತ್ತಿತರರು ಇದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mayor Kavita Sanil visits Kavya Poojary’s house and consoles her parents. Speaking to the media persons she said right Justice must be given to Kavya.
Please Wait while comments are loading...