ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಸ್ಮಾರ್ಟ್ ಸಿಟಿ, ಯೋಜನೆಗಾಗಿ 2,000 ಕೋಟಿ ರೂ

By Mahesh
|
Google Oneindia Kannada News

ಮಂಗಳೂರು, ಸೆ. 21: ಸ್ಮಾಟ್ ಸಿಟಿಗೆ ಆಯ್ಕೆಯಾಗುವ ಮಂಗಳೂರು ಮೂಲಕ ಅಭಿವೃದ್ಧಿಯ ಪಥದಲ್ಲಿ ಮತ್ತೊಂದು ಗರಿಯನ್ನು ಪಡೆದುಕೊಂಡಂತಾಗಿದೆ ಎಂದು ಮೇಯರ್ ಹರಿನಾಥ್ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ..

ಕೇಂದ್ರ ಸರಕಾರದಿಂದ ಮಂಗಳೂರು ನಗರವು ಸ್ಮಾಟ್ ಸಿಟಿಗೆ ಆಯ್ಕೆಯಾದ ಕುರಿತಂತೆ ತುರ್ತು ಸುದ್ದಿಗೋಷ್ಠಿಯಲ್ಲಿಂದು ಅವರು ಈ ಸಂತಸ ವ್ಯಕ್ತಪಡಿಸಿದರು.

ಮಂಗಳೂರು ನಗರವು 5 ಲಕ್ಷೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು ಸ್ಮಾಟ್ ಸಿಟಿ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ ಒಟ್ಟು 2,000.72 ಕೋಟಿ ರೂ. ಯೋಜನಾ ವೆಚ್ಚದೊಂದಿಗೆ ಮತ್ತಷ್ಟು ಸ್ಮಾರ್ಟ್ ನಗರವಾಗಿ ಹೊರಹೊಮ್ಮಲಿದೆ ಎಂದರು.

ಪ್ರತೀ ಮನೆ ಮನೆಯಲ್ಲೂ ಆರೋಗ್ಯ, ಎಲ್ಲಾ ಮನೆಗಳಿಗೂ ಶೌಚಾಲಯ, ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಗೆ ಕ್ರಮ ಸೇರಿದಂತೆ ಹಲವು ಕ್ರಮಗಳನ್ನು ಪಾಲಿಕೆ ವತಿಯಿಂದ ಈಗಾಗಲೇ ಕೈಗೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಇದೀಗ ಸ್ಮಾರ್ಟ್‌ಸಿಟಿ ಘೋಷಣೆಯಾಗಿದೆ ಎಂದವರು ಹೇಳಿದರು.

ಐದು ವರ್ಷಗಳಲ್ಲಿ ಅನುಷ್ಠಾನಗೊಳ್ಳಲಿರುವ ಮಂಗಳೂರು ಸ್ಮಾಟ್ ಸಿಟಿ ಯೋಜನೆಗೆ ಒಟ್ಟು ಯೋಜನಾ ವೆಚ್ಚದಲ್ಲಿ ಶೇ. 49ರಷ್ಟನ್ನು ಅಂದರೆ 973.56 ಕೋಟಿ ರೂ.ಗಳನ್ನು ಸ್ಮಾಟ್ ಸಿಟಿ ಅನುದಾನಡಿ (ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶೇ. 50ರ ಅನುಪಾತದಲ್ಲಿ) ಭರಿಸಲಾಗುವುದು. [ಸ್ಮಾರ್ಟ್ ಸಿಟಿ ಪಟ್ಟಿಗೆ ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು ಆಯ್ಕೆ]

ಉಳಿದಂತೆ ಸಾರ್ವಜನಿಕ ಖಾಸಗಿ ಅನುದಾನ 516.95 ಕೋಟಿರೂ., ಭಾರತ ಸರಕಾರದ ವಿವಿಧ ಯೋಜನೆಗಳಿಂದ 126.85 ಕೋಟಿ ರೂ., ರಾಜ್ಯ ಸರಕಾರದ ವಿವಿಧ ಯೋಜನೆಗಳಿಂದ 163.93 ಕೋಟಿ ರೂ., ಎಡಿಬಿಯಿಂದ 128.75 ಕೋಟಿ ರೂ., ನಗರ ಪಾಲಿಕೆಯ ಸ್ವಂತ ನಿಧಿಯಿಂದ 78.90 ಕೋಟಿರೂ., ಫಲಾನುಭವಿಗಳ ಕೊಡುಗೆಯಾಗಿ 11.78 ಕೋಟಿ ರೂ.ಗಳನ್ನು ಈ ಯೋಜನೆಗಾಗಿ ಭರಿಸಲಾಗುತ್ತದೆ ಎಂದು ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್ ಮಾಹಿತಿ ನೀಡಿದರು.

ಯೋಜನೆಯ ಪ್ರಮುಖ ಅಂಶಗಳು

ಯೋಜನೆಯ ಪ್ರಮುಖ ಅಂಶಗಳು

ಹಂಪನಕಟ್ಟ, ಬಂದರು, ಕಾರ್‌ಸ್ಟ್ರೀರ್ ಸುತ್ತಮುತ್ತಲಿನ ಕೇಂದ್ರ ವ್ಯವಹಾರ ಕೇಂದ್ರಗಳ ಒಟ್ಟು 1,628 ಎಕರೆ ಪ್ರದೇಶದ ಅಭಿವೃದ್ಧಿ .

ನಗರದ ಪ್ರಮುಖ ಕೇಂದ್ರದ 100 ಎಕರೆ ಭೂಮಿ, ಹಂಪನಕಟ್ಟೆಯ ವ್ಯವಹಾರ ಕೇಂದ್ರದ 27 ಎಕರೆ, ಮೀನುಗಾರಿಕಾ ಬಂದರಿನ 22 ಎಕರೆ ಪ್ರದೇಶ ಮರು ಅಭಿವೃದ್ಧಿ, ಹಳೆ ಬಂದರಿನ 10 ಎಕರೆ ಮರು ಅಭಿವೃದ್ಧಿ, ಮೇಲ್ದರ್ಜೆಗೇರಿಸಲ್ಪಟ್ಟ ದೇವಸ್ಥಾನಗಳು, ಧಾರ್ಮಿಕ ಸ್ಥಳಗಳನ್ನು ಒಳಗೊಂಡ 57 ಎಕರೆ ಪ್ರದೇಶ, ಜಲಾಭಿಮುಖ ಮತ್ತು ಸಮುದ್ರ ಸುತ್ತಲಿನ 25 ಎಕರೆ ಪ್ರದೇಶಗಳ ಅಭಿವೃದ್ಧಿಯೂ ಸ್ಮಾರ್ಟ್ ಸಿಟಿ ಯೋಜನೆಯ ಪ್ರಸ್ತಾವನೆಯಲ್ಲಿ ಸೇರಿದೆ.

 ವಾಣಿಜ್ಯ ಮತ್ತು ಸರಕು ವಲಯಗಳಿಗೆ ಸಂಬಂಧಿಸಿದಂತೆ

ವಾಣಿಜ್ಯ ಮತ್ತು ಸರಕು ವಲಯಗಳಿಗೆ ಸಂಬಂಧಿಸಿದಂತೆ

ಇದೇ ವೇಳೆ ಐಟಿ ಸೇವೆಗಳು, ಕಚೇರಿಗಳು, ಸಣ್ಣ ಗಾತ್ರದ ಉದ್ದಿಮೆಗಳು, 42 ಎಕರೆ ಪ್ರದೇಶದಲ್ಲಿ ಅತಿಥಿಸತ್ಕಾರ ಮತ್ತು ವಿರಾಮ ಕೇಂದ್ರಗಳನ್ನು ಒಳಗೊಂಡಂತೆ ಹಂಚಿನ ಕಾರ್ಖಾನೆಗಳ ಮರುಬಳಕೆ, ಸೀಮಿತ ಸಾಮರ್ಥ್ಯದ ಕಾರ್ಖಾನೆಗಳನ್ನು ಕಾರ್ಯಾಚರಣೆ.
17 ಎಕರೆ ಪ್ರದೇಶಗಳಲ್ಲಿ ಜಿಲ್ಲಾ ಆಸ್ಪತ್ರೆ (ವೆನ್‌ಲಾಕ್ ಮತ್ತು ಲೇಡಿಗೋಶನ್) ಮೇಲ್ದರ್ಜೆಗೇರಿಸುವುದು, ವಾಣಿಜ್ಯ ಮತ್ತು ಸರಕು ವಲಯಗಳಿಗೆ ಸಂಬಂಧಿಸಿ 47 ಎಕರೆ ಪ್ರದೇಶಗಳ ಜಲಾಭಿಮುಖವಾಗಿರುವ ಸಾರ್ವಜನಿಕ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ , 20 ಎಕರೆ ಪ್ರದೇಶದಲ್ಲಿ ಬಂದರಿನ ದ್ವೀಪ ಪ್ರದೇಶದಲ್ಲಿ ಸೌರಕೃಷಿಯೂ ಸ್ಮಾಟ್ ಸಿಟಿ ಯೋಜನೆ ಪ್ರಸ್ತಾವನೆಯಲ್ಲಿದೆ

ಪ್ರಥಮ ಆಯ್ಕೆಯಲ್ಲಿ ಕೈಬಿಟ್ಟರೂ ಮತ್ತೆ ಅವಕಾಶ

ಪ್ರಥಮ ಆಯ್ಕೆಯಲ್ಲಿ ಕೈಬಿಟ್ಟರೂ ಮತ್ತೆ ಅವಕಾಶ

ಪಾನ್ ಸಿಟಿ ಪ್ರಸ್ತಾವನೆಯಡಿ, ವಿವಿಧ ಯೋಜನೆಗಳ ಮಾಹಿತಿಯಲ್ಲಿ ನೀಡುವ 'ಒನ್ ಟಚ್ ಮಂಗಳೂರು' ಎಂಬ ಮೊಬೈಲ್ ಆಪ್ ಹಾಗೂ 'ಒನ್ ಆಕ್ಸೆಸ್ ಮಂಗಳೂರು' ಎಂಬ ವೆಬ್ ಬಳಕೆ ಸೇರಿದಂತೆ ತಂತ್ರಜ್ಞಾನಗಳ ಬಳಕೆಯನ್ನು ಉಲ್ಲೇಖಿಸಲಾಗಿದೆ.

ಪ್ರಥಮ ಹಂತದ ಆಯ್ಕೆಯಲ್ಲಿಯೇ ಮಂಗಳೂರಿಗೆ ಸ್ಮಾಟ್ ಸಿಟಿ ಯೋಜನೆ ದೊರೆಯುವ ಅವಕಾಶ ಇತ್ತು. ಆದರೆ, ಆ ಸಂದರ್ಭ 20,000 ಕೋಟಿ ರೂ.ಗಳ ಮಂಗಳೂರಿನ ದೀರ್ಘಕಾಲೀನ ಸುಮಾರು 20 ವರ್ಷಗಳ ಅವಧಿಯ ಸಮಗ್ರ ಅಭಿವೃದ್ಧಿ ಯೋಜನೆಯ ಪ್ರಸ್ತಾವನೆಯನ್ನು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸಲ್ಲಿಸಲಾಗಿತ್ತು.

ದ್ವಿತೀಯ ಹಂತದಲ್ಲಿ ಐದು ವರ್ಷಗಳ ಅವಧಿ ಅಭಿವೃದ್ಧಿ

ದ್ವಿತೀಯ ಹಂತದಲ್ಲಿ ಐದು ವರ್ಷಗಳ ಅವಧಿ ಅಭಿವೃದ್ಧಿ

ಪಾಲಿಕೆಯ ಅಭಿವೃದ್ಧಿಯ ನಿರೀಕ್ಷೆ ದೀರ್ಘಕಾಲೀನವಾದ ಹಿನ್ನೆಲೆಯಲ್ಲಿ ಪ್ರಥಮ ಹಂತದ ಆಯ್ಕೆಯಲ್ಲಿ ಮಂಗಳೂರು ಸ್ಮಾಟ್ ಸಿಟಿ ಯೋಜನೆಯಿಂದ ಕೈಬಿಟ್ಟು ಹೋಗಿತ್ತು. ಇದೀಗ ದ್ವಿತೀಯ ಹಂತದಲ್ಲಿ ಐದು ವರ್ಷಗಳ ಅವಧಿಗೆ 2,000 ಕೋಟಿ ರೂ.ಗಳ ಪ್ರಸ್ತಾವನೆಗೆ ದ್ವಿತೀಯ ಹಂತದಲ್ಲಿ ದೊರೆತಿದೆ. ಇದೀಗ ನಗರದಲ್ಲಿರುವ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿದೆ ಎಂದು ಅವರು ಹೇಳಿದರು.

English summary
Mangaluru city along with Shivamogga, Hubballi-Dharwad, Tumakaru figured in the list of 27 cities that minister for urban development Venkaiah Naidu announced in New Delhi on Tuesday. Here is whatmayor Harinath has to say about the special status.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X