ಬಣ್ಣನ ಬಣ್ಣದ ಮೀನು, ಬಗೆ ಬಗೆಯ ಖಾದ್ಯ!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 05 : ಮಂಗಳೂರಿನಲ್ಲಿ ರಾಷ್ಟ್ರೀಯ ಮತ್ಸ್ಯ ಮೇಳ ಆರಂಭವಾಗಿದ್ದು, ಮೀನಿನ ಖಾದ್ಯಗಳು, ಮೀನುಗಾರಿಕೆ ಸಂಬಂಧಿಸಿದ ಮಾಹಿತಿ ಎಲ್ಲವೂ ಒಂದೇ ಸೂರಿನಡಿ ಸಾರ್ವಜನಿಕರಿಗೆ ಲಭ್ಯವಿದೆ.

ನಗರದ ಡಾ. ಟಿ.ಎಂ.ಪೈ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಮತ್ಸ್ಯ ಮೇಳಕ್ಕೆ ಚಾಲನೆ ಸಿಕ್ಕಿದೆ. ಲಭ್ಯವಾಗಿದೆ. ಮೇಳದಲ್ಲಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಮಳಿಗೆಯನ್ನು ಸ್ಥಾಪನೆ ಮಾಡಿದ್ದು, ತಾಜಾ ಮೀನುಗಳ ಪ್ರದರ್ಶನ ಹಾಗೂ ಮೀನಿನ ಖಾದ್ಯ ಮಾರಾಟ ಮಾಡಲಾಗುತ್ತಿದೆ. [ಮಂಗಳೂರು : ವ್ಯಾಪಾರಿಗಳ ಜಗಳದಲ್ಲಿ ಜನರಿಗೆ ಮೀನಿನ ಲಾಭ]

mathsya mela

100ಕ್ಕೂ ಅಧಿಕ ಅಕ್ವೇರಿಯಂಗಳು ಮೇಳದ ಪ್ರಧಾನ ಆಕರ್ಷಣೆಯಾಗಿವೆ. ಪ್ರತಿ ಅಕ್ವೇರಿಯಂನಲ್ಲಿ ಹತ್ತಾರು ಬಗೆಯ ಬಣ್ಣ-ಬಣ್ಣದ ಜನರ ಗಮನ ಸೆಳೆಯುತ್ತಿವೆ. ಎಲೆಗೇಟರ್ ಗಾರ್ಗ್ , ಆಫ್ರಿಕನ್ ರೆಡ್ ಟೆಲ್, ಚಿಲಿ ರೆಡ್ ಆಸ್ಕರ್, ಪಶ್ಚಿಮ ಘಟ್ಟದ ಹಲವು ಪ್ರಬೇಧಗಳ ಮೀನುಗಳು ಮೇಳದಲ್ಲಿವೆ. [ಮೀನುಪ್ರಿಯರ ಜಿಹ್ವಾ ಚಾಪಲ್ಯ ತಣಿಸಲು ಮತ್ಸ್ಯ ಭವನ]

ಮಾಹಿತಿ ಮಳಿಗೆಗಳು : ಕರ್ನಾಟಕ ಪಶು ವೈದ್ಯಕೀಯ ಮಹಾವಿದ್ಯಾಲಯ, ಪಶು ಮತ್ತು ಮೀನುಗಾರಿಗೆ ವಿಜ್ಞಾನಗಳ ವಿಶ್ವವಿದ್ಯಾಲಯ, ಮೀನುಗಾರಿಗೆ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳ ಪ್ರತ್ಯೇಕ ಮಳಿಗೆಗಳನ್ನು ಪ್ರದರ್ಶನದಲ್ಲಿ ತೆರೆಯಲಾಗಿದೆ. [ಮಂಗಳೂರಿನಲ್ಲಿ ತಿನ್ನಲು ಮೀನು ಸಿಕ್ತಿಲ್ಲ!]

ಮೀನು ಕೃಷಿ : ವಿಜಯಪುರದ ಭೂತನಾಳ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರ ಮಳಿಗೆಗಳಲ್ಲಿ ಆಧುನಿಕ ಮೀನು ಕೃಷಿ, ಒಳನಾಡು ಮೀನುಗಾರಿಕೆ ಕುರಿತು ಮಾಹಿತಿ ನೀಡಲಾಗುತ್ತಿದೆ. ಕೊಚ್ಚಿ, ಪೂನಾ ಸೇರಿದಂತೆ ದೇಶದ ವಿವಿಧ ಭಾಗದ ಮೀನುಗಾರಿಕಾ ಕ್ಷೇತ್ರಕ್ಕೆ ಸಂಭಧಿಸಿದ ಉದ್ಯಮಗಳ ಕಾರ್ಯಚಟುವಟಿಕೆ, ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುವ ಮಳಿಗೆಗಳನ್ನು ತೆರೆಯಲಾಗಿದೆ.

ಬಗೆಬಗೆಯ ಶಂಖ : ಮೃದ್ವಂಗಿ ಪ್ರದರ್ಶನ ಮತ್ಸ್ಯ ಮೇಳದ ಮತ್ತೊಂದು ಆಕರ್ಷಣೆ. ನೂರಾರು ಬಗೆಯ ಶಂಖ , ಚಿಪ್ಪು ಮುತ್ತುಗಳನ್ನು ಆಕರ್ಷಕವಾಗಿ ಜೋಡಿಸಿ ಇಡಲಾಗಿದ್ದು, ಪ್ರದರ್ಶನ ನೋಡುಗರ ಕಣ್ಮನ ಸೆಳೆಯುವಂತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Three-days national fish festival began at TMA Pai international convention centre in Mangaluru on Friday March 4, 2016. Mathsya Mela - 2016 organised by Karnataka Fisheries Development Corporation (KFDC).
Please Wait while comments are loading...