ಬಾವಿಯಲ್ಲಿ ವಿವಾಹಿತೆಯ ಶವ ಪತ್ತೆ, ಆತ್ಮಹತ್ಯೆ ಶಂಕೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 10: ಮೂಡುಬಿದಿರೆಯ ಶಿರ್ತಾಡಿಯಲ್ಲಿ ವಿವಾಹಿತ ಮಹಿಳೆಯೊಬ್ಬರ ಶವ ಸೋಮವಾರ ಬೆಳಿಗ್ಗೆ ಬಾವಿಯೊಂದರಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಮೃತರನ್ನು ಸಂಧ್ಯಾ ಜೈನ್ (32) ಎಂದು ಗುರುತಿಸಲಾಗಿದೆ.

ಸಂಧ್ಯಾ ಮೂಲತಃ ಶಿವಮೊಗ್ಗದವರು. ಕಳೆದ ಆರು ತಿಂಗಳ ಹಿಂದಷ್ಟೇ ಮೂಡುಬಿದಿರೆಯ ವಕೀಲರೊಬ್ಬರನ್ನು ಮದುವೆಯಾಗಿದ್ದರು. ಮದುವೆ ಆಗುವುದಕ್ಕಿಂತ ಮೊದಲು ಸಂಧ್ಯಾ ಎಸ್.ಡಿ.ಎಂ ಪದವಿ ಕಾಲೇಜು ಉಜಿರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. [ಉಳ್ಳಾಲದಲ್ಲಿ ಶಂಕಿತ ಉಗ್ರ ಚಟುವಟಿಕೆ ಪ್ರಕರಣದ ತೀರ್ಪು ಪ್ರಕಟ]

Married woman dead body found in well, seems too be suicide

ಸದಾ ನಗುಮುಖದಿಂದ ಕಾಲೇಜಿನಲ್ಲಿ ಚಿರಪರಿಚಿತರಾಗಿದ್ದ ಸಂಧ್ಯಾ ಜೈನ್ ಸಾವು ಅವರ ಪರಿಚಿತರು, ಬಂಧುಗಳು ಹಾಗೂ ಕುಟುಂಬಸ್ಥರಿಗೆ ಅಘಾತ ಉಂಟು ಮಾಡಿದೆ.

ಆತ್ಮಹತ್ಯೆ ಮಾಡಿಕೊಂಡಿದ್ದೇ ಆದರೆ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಹಿನ್ನಲೆಯಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಮೃತ ಸಂಧ್ಯಾ ಸಹೋದರ ವಜ್ರ ಕುಮಾರ್ ನೀಡಿದ ದೂರಿನ ಮೇರೆಗೆ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. [ಮಂಗಳೂರು: ಹಾಸ್ಟೆಲ್ ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
32 year old woman Sandhya Jain’s body found in a well here in Shirthady of Moodabidre, it is seems to be a suicide case.
Please Wait while comments are loading...