ಮಂಗಳೂರು ವಿವಿ ಪದವಿ ಪರೀಕ್ಷೆಗಳು ಮುಂದೂಡಿಕೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ನವೆಂಬರ್. 09 : ಇದೇ ನವೆಂಬರ್ 10 ರಿಂದ ಪ್ರಾರಂಭವಾಗಬೇಕಿದ್ದ ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಮಂಗಳೂರು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.

ನ.10 ರಂದು ನಡೆಯಬೇಕಿದ್ದ ಬಿಬಿಎಂ ಕ್ರೆಡಿಟ್ ಬೇಸ್ಡ್ ಪರೀಕ್ಷೆಯನ್ನು ನ. 18ಕ್ಕೆ, ಬಿಬಿಎಂ ನಾನ್ ಕ್ರೆಡಿಟ್ ಬೇಸ್ಡ್ ಪರೀಕ್ಷೆ ನಂ. 21ರಂದು, ಬಿಎ, ಬಿಎಸ್ಸಿ, ಬಿಕಾಂ ಪ್ರಥಮ ಸೆಮಿಸ್ಟರ್ ನ.21, 2ನೇ ಸೆಮಿಸ್ಟರ್ ಪರೀಕ್ಷೆಗಳು ನ. 18ರಂದು ಹಾಗೂ ವಾರ್ಷಿಕ ಪರೀಕ್ಷೆ ನ. 22ರಂದು ನಡೆಯಲಿದೆ.

Mangaore University Degree examination postponed

ಬಿಎಸ್ ಡಬ್ಲೂ ಪ್ರಥಮ ಸೆಮಿಸ್ಟರ್ ನ.15, ಬಿಎಸ್ಸಿ (ಎಫ್‌ಎನ್‌ಡಿ) ಪ್ರಥಮ ಸೆಮಿಸ್ಟರ್ ನ.21, ಬಿಎ (ಸೆಕ್ಯುರಿಟಿ ಆಂಡ್ ಡಿಟೆಕ್ಟಿವ್ ಸೈನ್ಸ್) ನ.12, ಬಿಎಚ್ಎಂ (ಕ್ರೆಡಿಟ್ ಬೇಸ್ಡ್)

ನ.14, ಬಿಎಚ್ಎಂ (ನಾನ್ ಕ್ರೆಡಿಟ್ ಬೇಸ್ಡ್) ನ.16, ಬಿಎಸ್ಸಿ (ಎಚ್‌ಎಸ್) (ಕ್ರೆಡಿಟ್ ಬೇಸ್ಡ್) ನ.14, ಬಿಎಸ್ಸಿ ಎಫ್‌ಡಿ/ ಜಿಡಿ ಮತ್ತು ಬಿಎಸ್ಸಿ ಐಡಿ ಆಂಡ್ ಡಿ ಪರೀಕ್ಷೆಗಳು ನ.14ರಂದು ನಡೆಯಲಿವೆ.

ಬಿಸಿಎ (ಕ್ರೆಡಿಟ್ ಆಂಡ್ ನಾನ್ ಕ್ರೆಡಿಟ್ ಬೇಸ್ಡ್) ನ.12 ರಂದು, ಬಿಎ (ಎಚ್‌ಆರ್‌ಡಿ) ನ.14, ಎಲ್‌ಎಲ್‌ಬಿ ನ.16 ಹಾಗೂ ನ.21ರಂದು ನಡೆಯಬೇಕಿದ್ದ ಬಿಎ ಜರ್ನಲಿಸಮ್ ಪರೀಕ್ಷೆಯನ್ನು ನ.23ಕ್ಕೆ ಮುಂದೂಡಲಾಗಿದೆ.

ಉಳಿದ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಂಗಳೂರು ವಿವಿಯ ಪರೀಕ್ಷಾಂಗ ಕುಲಸಚಿವರು ಪ್ರಕಟಣೆ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Mangaore University Degree exams of 10th November has been postponed to 18th November said, Registrar(Evaluation) Mangalore University.
Please Wait while comments are loading...