ವಿದ್ಯಾರ್ಥಿನಿ ವಾಟ್ಸಾಪ್ ಗೆ ಅಶ್ಲೀಲ ಚಿತ್ರ ಕಳುಹಿಸುತ್ತಿದ್ದವನ ಬಂಧನ

Posted By: Ramesh
Subscribe to Oneindia Kannada

ಮಂಗಳೂರು, ಜನವರಿ. 11 : ನಗರದ ಕಾಲೇಜ್ ವಿದ್ಯಾರ್ಥಿನಿಗೆ ವಾಟ್ಸಾಪ್ ಮೂಲಕ ಅಶ್ಲೀಲ ಚಿತ್ರ ರವಾನಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಆರೋಪದ ಮೇಲೆ ಮೂವರ ವಿರುದ್ಧ ಕಾವೂರು ಪೊಲೀಸರು ಮಂಗಳವಾರ ಸಂಜೆ ಫೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಮೂಡುಶೆಡ್ಡೆಯ ಪುನೀತ್‌ರಾಜ್ ಪೂಜಾರಿ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಕಳೆದ ಅಕ್ಟೋಬರ್‌ನಿಂದ ನಗರದ ಕಾಲೇಜ್ ವೊಂದರ ವಿದ್ಯಾರ್ಥಿನಿಯ ವಾಟ್ಸಾಪ್ ನಂಬರ್ ಗೆ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದ.

Mangaluru: Youth held for sending Obscene pictures to girle WhatsApp

ಅಲ್ಲದೇ ಆ ವಿದ್ಯಾರ್ಥಿನಿಯ ಭಾವಚಿತ್ರವನ್ನು ವಿರೂಪಗೊಳಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಲ್ಲದೆ, ಸಹಕರಿಸದಿದ್ದರೆ ಈ ಫೋಟೋಗಳನ್ನು ಎಲ್ಲರಿಗೂ ರವಾನಿಸಿ ಮಾನ ಹರಾಜು ಹಾಕುವುದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ.

ಇದಕ್ಕೆ ಮೂಡುಶೆಡ್ಡೆಯ ಪೃಥ್ವಿ ಹಾಗೂ ಮಂಗಳೂರಿನ ವಿಲಾಸ್ ಎಂಬವರೂ ಸಹಕರಿಸಿದ್ದಾರೆ ಎಂದು ದೂರಲಾಗಿದೆ. ವಿದ್ಯಾರ್ಥಿನಿ ನೀಡಿದ ದೂರಿನಂತೆ ಕಾವೂರು ಪೊಲೀಸರು ಫೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಅಲ್ಲದೇ ಪ್ರಮುಖ ಆರೋಪಿ ಪುನೀತ್‌ರಾಜ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇತರ ಇಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Obscene pictures and messages were sent to the girl student of a college through WhatsApp, and also on the allegation of pressurizing the student to engage in sexual activity with him, Kavoor police have arrested a youth and booked under Protection of Children from Sexual Offences Act.
Please Wait while comments are loading...