ಮದುವೆ ಸಂಭ್ರಮಕ್ಕೆ ಮೇಳ: ಜೆನಿಫರ್ ಕೊತ್ವಾಲ್ ಚಾಲನೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಅಕ್ಟೋಬರ್ 8: ನಗರದ ಟಿಎಂಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಮೂರು ದಿನಗಳ ಕಾಲ ನಡೆಯುವ ಸೆಲಬ್ರೇಷನ್ಸ್, ಮಂಗಳೂರು ವೆಡ್ಡಿಂಗ್ ಫೇರ್ ನ ಉದ್ಘಾಟನೆಯನ್ನು ಚಿತ್ರನಟಿ ಜೆನಿಫರ್ ಕೊತ್ವಾಲ್ ಶುಕ್ರವಾರ ನೆರವೇರಿಸಿದರು.

ಮಂಗಳೂರಿನಲ್ಲಿ ಐಡ್ರೀಮ್ಸ್ ಈವೆಂಟ್ಸ್ ಆಯೋಜಿಸುತ್ತಿರುವ ಮೂರನೇ ವೆಡ್ಡಿಂಗ್ ಫೇರ್ ಇದಾಗಿದೆ. ಮದುವೆ ಶುಭ ಸಮಾರಂಭಗಳಿಗೆ ಬೇಕಾದ ಆಭರಣಗಳು, ಅಲಂಕಾರಿಕ ಸಾಮಗ್ರಿಗಳು, ನವನವೀನ ವಿನ್ಯಾಸದ ಉಡುಗೆ- ತೊಡುಗೆಗಳನ್ನು ಇಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.[ಅ.15ರಿಂದ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್ ರಸ್ತೆ ಬಂದ್]

Jennifer kotwal

ಮಂಗಳೂರಿಗೆ ಈವರೆಗೆ ಬಂದಿರದ ವಿನ್ಯಾಸಗಳನ್ನು ಈ ವರ್ಷ ಪ್ರದರ್ಶನದಲ್ಲಿಡಲಾಗಿದೆ. ಕಳೆದ ವರ್ಷ 13 ಸಾವಿರ ಜನರು ಭೇಟಿ ನೀಡಿದ್ದು, ಈ ಬಾರಿ 20 ಸಾವಿರ ಜನರು ಬರುವ ನಿರೀಕ್ಷೆ ಇದೆ ಎಂದು ಐಡ್ರೀಮ್ಸ್ ಈವೆಂಟ್ಸ್‌ನ ಸ್ನೇಹಾ ಕೋಟ್ಯಾನ್ ಹೇಳಿದರು.

Jeniffer kotwal

ದೆಹಲಿ, ಕೇರಳ, ಇಂದೋರ್, ಮುಂಬೈ, ವಾರಾಣಸಿ, ಬೆಂಗಳೂರು, ಶಿವಮೊಗ್ಗ ಮುಂತಾದ ಕಡೆಗಳಿಂದ ವರ್ತಕರು ತಮ್ಮ ಉತ್ಪನ್ನಗಳನ್ನು ತಂದಿದ್ದಾರೆ. ವೆಡ್ಡಿಂಗ್ ಫೇರ್ ಇದೇ 9ರವರೆಗೆ ನಡೆಯಲಿದ್ದು ಬೆಳಗ್ಗೆ 10.30ರಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actress Jennifer Kotwal inaugurated wedding fair in TMA Pai convention centre, Mangaluru on Friday. Idreams events organised this fair.
Please Wait while comments are loading...