ಮಳೆಗೆ ಜಗ್ಗದ ಮಂಗಳೂರು ಟ್ರಾಫಿಕ್ ಪೊಲೀಸ್‌ ಬೋಪಯ್ಯ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮೇ, 14: ಮಳೆಗಾಗಿ ಪರಿತಪಿಸುತ್ತಿದ್ದ ಮಂಗಳೂರು ನಗರ ಶುಕ್ರವಾರ ಸಂಜೆ ಸುರಿದ ಭಾರೀ ಮಳೆಯನ್ನು ಸಂತಸ , ಆತಂಕ , ಕಾತರದಿಂದ ಸ್ವಾಗತಿಸಿದ್ದಾರೆ. ಆ ಬಿರುಸು ಮಳೆಯ ನಡುವೆ ತನ್ನ ಕರ್ತವ್ಯ ಪ್ರಜ್ಞೆ ಮೆರೆಯುವ ಮೂಲಕ ಟ್ರಾಫಿಕ್ ಪೊಲೀಸರೊಬ್ಬರು ಸಾರ್ವಜನಿಕರ ಪ್ರಶಂಸೆಗೆ ಪ್ರಾತ್ರರಾಗಿದ್ದಾರೆ.

ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ವೃತ್ತದ ಟ್ರಾಫಿಕ್ ಪೊಲೀಸ್ ಬಿರುಸು ಮಳೆಯಲ್ಲಿ ನೆನೆದುಕೊಂಡು ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಿದ್ದರು. ಇವರ ಕಾರ್ಯ ನಿಷ್ಠತೆಯ ಕುರಿತಂತೆ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಫೋಟೋ ,ಪ್ರಶಂಸೆಯ ನುಡಿಗಳು ಹರಿದಾಡುತ್ತಿವೆ.[ಅರ್ಧ ಶತಕದಿಂದ ಕಾಡಿನಲ್ಲೇ ನೆಲೆಸಿರುವ ಕೆಂಚಪ್ಪನ ರೋಚಕ ಕಥೆ!]

mangaluru

ಹಿರಿಯ ಅಧಿಕಾರಿಗಳಿಂದ ಪ್ರಶಂಸೆ
ಬೋಪಯ್ಯರ ಕರ್ತವ್ಯ ನಿಷ್ಠೆಯ ಬಗ್ಗೆ ಎಸಿಪಿ (ಸಂಚಾರ) ಉದಯ್ ನಾಯಕ್ ಅವರ ಪ್ರತಿಕ್ರಿಯೆ ಕೋರಿದಾಗ , ಬೋಪಯ್ಯರ ಕಾರ್ಯನಿಷ್ಠೆ ಈಗಾಗಲೇ ಪೊಲೀಸ್ ಆಯುಕ್ತರು, ಡಿಸಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಡಾ ಶ್ಲಾಘಿಸಿದ್ದಾರೆ. ಕರ್ತವ್ಯ ಪಾಲನೆಯನ್ನು ಜನರು ಗುರುತಿಸುತ್ತಾರೆ ಎಂಬುದಕ್ಕೆ ಈ ಘಟನೆಯೊಂದು ಸಾಕ್ಷಿಯಾಗಿದೆ. ಮಾತ್ರವಲ್ಲದೆ ಇತರ ಸಿಬ್ಬಂದಿಗೂ ಇವರು ಮಾದರಿಯಾಗಿದ್ದು, ಉತ್ತಮ ಕಾರ್ಯಕ್ಕೆ ಪ್ರೇರಣೆಯಾಗಿದ್ದಾರೆ ಎಂದರು .

mangaluru

"ಮಳೆ ಬಂತೆಂದು ನಾನು ಬದಿಗೆ ಸರಿದರೆ ಟ್ರಾಫಿಕ್ ನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ನನ್ನ ಕರ್ತವ್ಯವನ್ನು ನಿರ್ವಹಿಸುವುದು ನನ್ನ ಕರ್ತವ್ಯ " ಎಂದು ಬೋಪಯ್ಯ ಪ್ರತಿಕ್ರಿಯಿಸುತ್ತಾರೆ.[ಗುಂಡಿ ಮುಚ್ಚುವ ಟ್ರಾಫಿಕ್ ಪೊಲೀಸ್ ಪೇದೆಗೆ ಸನ್ಮಾನ]

ಮೂಲತಃ ಕೊಡಗಿನವರಾದ ಬೋಪಯ್ಯ 1998 ರಿಂದ 2004 ರವರೆಗೆ ಟ್ರಾಫಿಕ್ ಪೊಲೀಸ್ ಆಗಿ ಕಾರ್ಯ ನಿರ್ವಹಿಸಿ ಬಳಿಕ ಕೆಲ ವರ್ಷ ಕಂಕನಾಡಿ , ಕಾವೂರ್ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಮತ್ತೆ ಒಂದು ವರ್ಷದಿಂದ ಟ್ರಾಫಿಕ್ ಪೊಲೀಸ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru:We must appreciate this police men duty. Meet Mangaluru Traffic Police Bopaiah. He was entrusted with traffic control work at the circle near bunts Hostel in the city. Even when the rain drenched him completely, Bopaiah stayed put at the spot allotted to him, and successfully regulated traffic control.
Please Wait while comments are loading...