ಡ್ರೈವಿಂಗ್ ವೇಳೆ ಮೊಬೈಲ್ ಸಂಗ ಮಾಡಿದರೆ ಶಿಕ್ಷೆ ಗ್ಯಾರಂಟಿ!

Posted By:
Subscribe to Oneindia Kannada

ಮಂಗಳೂರು, ಮೇ 15 : ದೊಡ್ಡ ದೊಡ್ಡ ಕಾರುಗಳಲ್ಲಿ ಎಸಿ ಹಾಕಿಕೊಂಡು, ಮೊಬೈಲುಗಳಲ್ಲಿ ಮಾತನಾಡುತ್ತಾ ಅಥವಾ ಸ್ಟಿಯರಿಂಗ್ ನಡುವೆ ಮೊಬೈಲ್ ಇಟ್ಟುಕೊಂಡು ವಿಡಿಯೋ ನೋಡುತ್ತಾ ಕಾರು ಚಲಾಯಿಸುವವರು ಇನ್ಮೇಲೆ ಇದಕ್ಕೆ ಫುಲ್ ಸ್ಟಾಪ್ ಹಾಕಲೇ ಬೇಕು. ಇಲ್ಲದಿದ್ದರೆ. ನೀವು ಈ ರೀತಿಯಾಗಿ ಕಾರಿನಲ್ಲಿ ಹೋಗುವುದನ್ನು ಯಾರಾದ್ರೂ ನೋಡಿ ಫೋಟೋ ತೆಗೆದು ಕುಡ್ಲ ಟ್ರಾಫಿಕ್ ಗ್ರೂಪ್ ಗೆ ಅಪ್ಲೋಡ್ ಮಾಡಿದರೆ ಪೊಲೀಸರು ನಿಮ್ಮ ವಿರುದ್ಧ ಕೇಸು ದಾಖಲಿಸುವುದು ಗ್ಯಾರಂಟಿ.

"ಜನರು ಈ ರೀತಿಯಾಗಿ ಕಾರಿನಲ್ಲಿ ಸಂಚರಿಸುವವವರು ಕಂಡರೆ ಕೂಡಲೇ ಅವರು ಕಾರಿನ ನಂಬರ್, ಕಾರು ಚಾಲಕನ ವಿವರದ ಜೊತೆಗೆ ಕುಡ್ಲ ಟ್ರಾಫಿಕ್ ವಾಟ್ಸಪ್ ಗ್ರೂಪ್ ಸಂಖ್ಯೆ 9480802312ಕ್ಕೆ ಅಪ್ಲೋಡ್ ಮಾಡಬಹುದಾಗಿದೆ" ಎಂದು ಟ್ರಾಫಿಕ್ ಎಸಿಪಿ ತಿಲಕಚಂದ್ರ ತಿಳಿಸಿದ್ದಾರೆ.

Mangaluru Traffic Police emerged with new idea to stop using cell phones while driving

ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರ ಕಚೇರಿಯಲ್ಲಿ ನಡೆದ ಪೊಲೀಸ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಕಮೀಷನರ್ ಈ ಎಚ್ಚರಿಕೆ ನೀಡಿದ್ದಾರೆ.

ಸಿಕ್ಕಸಿಕ್ಕಲ್ಲಿ ಬಸ್ ಗಳ ನಿಲುಗಡೆ, ರಸ್ತೆ ಮಧ್ಯದಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವುದರ ಬಗ್ಗೆಯೂ ವ್ಯಾಪಕ ದೂರುಗಳು ಬಂದವು. ಕಾವೂರು ಜಂಕ್ಷನ್ನಿನಲ್ಲಿ ಪಾದಚಾರಿಗಳಿಗೆ ನಡೆದಾಡಲು ಝೀಬ್ರಾ ಕ್ರಾಸಿಂಗ್, ಬಲ್ಮಠ ಜಂಕ್ಷನ್ನಿನಲ್ಲಿ ಟ್ರಾಫಿಕ್ ಜಾಮ್, ಕುಲಶೇಖರ ಕಲ್ಪನೆಯ ಕೆವಿನ್ ಸೆರಾವೊ ರಸ್ತೆಯಲ್ಲಿ ಸೀಸಿ ಟೀವಿ ಅಳವಡಿಸಲಾಗುತ್ತದೆ.

ಇಲ್ಲಿನ ಆಸುಪಾಸಿನಲ್ಲಿ ನಡೆಯುವ ಕಳ್ಳತನಗಳಿಗೆ ಕಡಿವಾಣ ಹಾಕಿ, ಸೆಂಟ್ರಲ್ ರೈಲು ನಿಲ್ದಾಣಕ್ಕೆ ಸಿಟಿ ಬಸ್ ವ್ಯವಸ್ಥೆ, ಬಂದರಿನ ಬೇಬಿ ಅಲಾಬಿ ರಸ್ತೆಯಿಂದ ಗುಜರಿ ಸೊತ್ತುಗಳ ತೆರವು, ಬಸ್ಸಿನಲ್ಲಿ ಸೀಟು ಮೀಸಲು ನಿಯಮ ಕಟ್ಟುನಿಟ್ಟಾಗಿ ಜಾರಿ ಮಾಡುವ ಬಗ್ಗೆ ವ್ಯಾಪಕ ದೂರುಗಳು ದಾಖಲಾಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The drivers who use mobile phone for any means will have to face legal action, says Mangaluru Traffic ACP Tilak Chandra in an phone-in conversations with civilians. A whatsapp group has been created which fecilitates people to lodge their complains easity he said.
Please Wait while comments are loading...