ಜನವರಿಯಲ್ಲಿ ಮಂಗ್ಳೂರಲ್ಲಿ ಲಗೋರಿ ರಾಷ್ಟ್ರೀಯ ಚಾಂಪಿಯನ್ ಷಿಪ್

By: ಕಿರಣ್ ಸಿರ್ಸೀಕರ್
Subscribe to Oneindia Kannada

ಮಂಗಳೂರು, ಅಕ್ಟೋಬರ್ 28: ಪಕ್ಕಾ ಹಳ್ಳಿ ಕ್ರೀಡೆಯಾದ ಲಗೋರಿ ಈಗ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ನಗರ, ಜಿಲ್ಲಾ ಮಟ್ಟದ ಪಂದ್ಯಾವಳಿಗಳು ನಡೆಯುತ್ತಿವೆ.

ಮಂಗಳೂರು ಮೇಯರ್ ಕವಿತಾ ವಿರುದ್ಧ ದೂರು ದಾಖಲು

ಲಗೋರಿ ರಾಷ್ಟ್ರೀಯ ಪಂದ್ಯಾವಳಿಗೆ ಮಂಗಳೂರು ಮುಂಬರುವ ದಿನಗಳಲ್ಲಿ ವೇದಿಕೆಯಾಗಲಿದೆ. 7ನೇ ಹಿರಿಯರ ರಾಷ್ಟ್ರ ಮಟ್ಟದ ಲಗೋರಿ ಪಂದ್ಯಾವಳಿ ಮಂಗಳೂರಿನಲ್ಲಿ ನಡೆಯಲಿದ್ದು, ಇಲ್ಲಿನ ಮಂಗಳಾ ಕ್ರೀಡಾಂಗಣದ ಪಕ್ಕದಲ್ಲಿರುವ ಕರಾವಳಿ ಉತ್ಸವ ಮೈದಾನದಲ್ಲಿ ಮುಂದಿನ ಜನವರಿ 6 ಮತ್ತು 7ರಂದು ಆಯೋಜಿಸಲಾಗುವುದು.

Mangaluru to host Lagori national championship in January

ಲಗೋರಿ ಅಮೆಚೂರ್ ಆಫ್ ಇಂಡಿಯಾ ಸಂಘ ಈ ಪಂದ್ಯಾವಳಿಗಳನ್ನು ಆಯೋಜಿಸುತ್ತಿದೆ. ಈಗಾಗಲೇ ಮಂಗಳೂರಿನಲ್ಲಿ ರಾಜ್ಯಮಟ್ಟದ ಲಗೋರಿ ಪಂದ್ಯಾವಳಿಯನ್ನು ನಡೆಸಿ ಯಶಸ್ವಿಯಾದ ಪಾಥ್ ವೇ ಮಂಗಳೂರು ಸಂಘಟನೆ ರಾಷ್ಟ ಮಟ್ಟದ ಲಗೋರಿ ಪಂದ್ಯಾವಳಿಯ ಆತಿಥ್ಯ ವಹಿಸಲಿದೆ.

ಕಳೆದ ವರ್ಷ ಈ ಲಗೋರಿ ರಾಷ್ಟ್ರೀಯ ಪಂದ್ಯಾವಳಿಗಳು ರಾಜಸ್ತಾನದಲ್ಲಿ ನಡೆದಿದ್ದವು. ಈ ಬಾರಿ ನಗರದಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಪುರುಷ ಹಾಗೂ ಮಹಿಳೆಯರ ತಂಡಗಳು ಭಾಗವಹಿಸಲಿವೆ. ಮಹಾರಾಷ್ಟ್ರ, ಗೋವಾ, ತಮಿಳುನಾಡು, ಹರಿಯಾಣ, ತೆಲಂಗಾಣ, ಆಂಧ್ರ, ದೆಹಲಿ, ಕೇರಳ, ಕರ್ನಾಟಕ ಸೇರಿದಂತೆ 30 ತಂಡಗಳು ಪಾಲ್ಗೊಳ್ಳಲಿವೆ.

ಮೋದಿ ಪ್ರಯಾಣಕ್ಕೆ ಮಂಗಳೂರಿಗೆ ಬಂದ ವಿಶೇಷ ಕಾರು

ಅಮೆಚೂರ್ ಲಗೋರಿ ಫೆಡರೇಷನ್ ಆಫ್ ಇಂಡಿಯಾ ನಿಯಮದಂತೆ ಪಂದ್ಯಾವಳಿ ನಡೆಯಲಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ರೆಫ್ರಿಗಳು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಮಂಗಳೂರಿನಲ್ಲಿ ನಡೆಯುವ ಈ ರಾಷ್ಟ್ರೀಯ ಲಗೋರಿ ಪಂದ್ಯಾವಳಿಯಲ್ಲಿ ಗೆದ್ದ ತಂಡ 2018ರ ಮೇ 21 ರಿಂದ 24ರವರೆಗೆ ಮುಂಬಯಿಯಲ್ಲಿ ನಡೆಯುವ ವಿಶ್ವ ಲಗೋರಿ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru set to host Lagori national championship. Amateur Lagori Association of India has asked the Pathway Mangaluru to organise national Lagori tournament in the first week of January.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ